ಬೆಂಗಳೂರು, (ಜ.21): ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮುಖ್ಯಮಂತ್ರಿ ಬಿಎಸ್‌ವೈ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.

ಹೌದು...ಅಸಮಾಧಾನಗೊಂಡಿರುವ ರೇಣುಕಾಚಾರ್ಯ ಅವರು  ದೆಹಲಿಗೆ ಹಾರಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸೋತವರಿಗೂ ಕ್ಯಾಬಿನೆಟ್ ಮಿನಿಸ್ಟರ್ ಮಾಡಿರುವ ಬಗ್ಗೆ ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ.

ಇದ್ದಕ್ಕಿದ್ದಂತೆ ಡಿಲ್ಲಿ ನಾಯಕರನ್ನು ಭೇಟಿ ಮಾಡಿದ ರೇಣುಕಾ.. ಏನಂತೆ!

 ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರ ಕ್ಷೇತ್ರವಾದ ಹೊನ್ನಾಳಿಗೆ ಸುಮಾರು  48 ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಈ ಮೂಲಜ ರೇಣುಕಾಚಾರ್ಯ ಕೋಪವನ್ನು ತಣ್ಣಗಾಗಿಸಲು ಸಿಎಂ ಈ ಸೂತ್ರ ಬಳಸಿದ್ದಾರೆ.

ಕ್ಷೇತ್ರಕ್ಕೆ 48 ಕೋಟಿ ರೂ. ಬಿಡುಗಡೆಗೆ ಇಂದು (ಗುರುವಾರ) ಸಂಜೆ  ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಆಗಲಿದೆ. ಹೊನ್ನಾಳಿ ಕ್ಷೇತ್ರದ 19 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾಮಗಾರಿಗೆ ಹಣ ಬಿಡುಗಡೆ ಆಗುವ ಸಾದ್ಯತೆ ಇದೆ.

"