ಬೆಂಗಳೂರು, (ಡಿ.21): ಜೆಡಿಎಸ್ ವಿಲೀನ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗುತ್ತಿಲ್ಲ. ಜೆಡಿಎಸ್ ದೇವೇಗೌಡರು ಕಟ್ಟಿದ ಪಕ್ಷ, ಕುಮಾರಸ್ವಾಮಿ ಅಧ್ಯಕ್ಷರಾಗಿದ್ದಾರೆ. ಅವರು ಆ ಪಕ್ಷ ಕಟ್ಟಿದ್ದಾರೆ. ಆದ್ದರಿಂದ ವಿಲೀನ ಬಗ್ಗೆ ಮಾತಾಡಿದರೆ ದೇವೇಗೌಡರಿಗೆ ಅಪಮಾನ ಮಾಡಿದಂತೆ ಎಂದು ಸಿಎಂ ಬಿಎಸ್​​ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಜೆಡಿಎಸ್​ ಪಕ್ಷದ ವಿಲೀನ ವಿಚಾರ ಯಾರೂ ಮಾತಾಡಬಾರದು. ನಮ್ಮ ಪಕ್ಷದ‌ ಮುಖಂಡರೂ ಮಾತಾಡಬಾರದು ಎಂದು ಸೂಚನೆ ಕೊಟ್ಟಿದ್ದೇವೆ. ವಿಲೀನ ಬಗ್ಗೆ ಮಾತಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

'ಇದುವರೆಗಿನ ರಾಜಕಾರಣ ತಾತ್ಕಾಲಿಕ.. ನನ್ನ ಅಸಲಿ ಪಾಲಿಟಿಕ್ಸ್ 2023ಕ್ಕೆ ಶುರು' 

ವಿಧಾನಸಭೆಯ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ನಮ್ಮ ಪಕ್ಷ ನಾವು ಕಟ್ಟುತ್ತೇವೆ. ಅವರ ಪಕ್ಷ ಅವರು ಕಟ್ಟುತ್ತಾರೆ. ವಿಧಾನಪರಿಷತ್‌ನಲ್ಲಿ ಸಭಾಪತಿ ಇಳಿಸುವುದಕ್ಕೆ ಸಹಕಾರ ಕೇಳಿದ್ದೇವು. ಇದಕ್ಕೆ ಜೆಡಿಎಸ್ ಸಹಕಾರ ಕೊಟ್ಟಿದೆ. ಅದೇ ರೀತಿ ಮುಂದೆಯೂ ಅಗತ್ಯವಿದ್ದಾಗ ಜೆಡಿಎಸ್ ನಮಗೆ ಸಹಕಾರ ಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.