Asianet Suvarna News Asianet Suvarna News

ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್..!

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ನೆಮ್ಮದಿ ಸಿಕ್ಕಿದೆ. ಹೈಕೋರ್ಟ್ ನಲ್ಲಿ  ಇಂದು (ಬುಧವಾರ) ವಿಚಾರಣೆ ದಿನವೇ ಬಿಗೆ ರಿಲೀಫ್ 

BS yediyurappa relaxed after withdrawn disproportionate assets case rbj
Author
Bengaluru, First Published Nov 4, 2020, 3:25 PM IST

ಬೆಂಗಳೂರು, 04: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ 3 ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಇದರಿಂದ ಬಿಎಸ್‌ವೈ ನಿರಾಳರಾಗಿದ್ದಾರೆ.

ಶಿವಮೊಗ್ಗ ಮೂಲದ ವಕೀಲರಾದ ಬಿ. ವಿನೋದ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇಂದು (ಬುಧವಾರ) ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಾಗಿತ್ತು.

'ಬಿಎಸ್ ವೈ ವಿರುದ್ಧ ಯಾರೇ ಮಾತನಾಡಿದರೂ ನಿರ್ದಾಕ್ಷಿಣ್ಯ ಕ್ರಮ'

ಆದರೆ ದೂರು ದಾಖಲಿಸಿದ್ದ ವಕೀಲ ವಿನೋದ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಮುಂದೆ ಹಾಜರಾಗಿ ತಾವು ದಾಖಲಿಸಿದ ಮೂರು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ನಂತರ ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಇದರಿಂದ ಬಿಎಸ್‌ವೈ ನಿಟ್ಟುಸಿರು ಬಿಡುವಂತಾಗಿದೆ.

ಸಿಎಂ ಯಡಿಯೂರಪ್ಪ ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಹುಣಸೇಕಟ್ಟೆ, ಕೋಟೆಗಂಗೂರು ಮತ್ತು ಕೆಹೆಚ್‌ಬಿ ಕಾಲೋನಿಗಳಲ್ಲಿ ಅಧಿಕಾರ ಬಳಸಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ವಿನೋದ್ ಪ್ರಕರಣ ದಾಖಲಿಸಿದ್ದರು.

Follow Us:
Download App:
  • android
  • ios