ಬಿ.ಎಸ್‌.ಯಡಿಯೂರಪ್ಪ ನಮ್ಮ ನಾಯಕರು, ಅವರನ್ನು ಮುಂದಿಟ್ಟುಕೊಂಡೇ ನಾವು ರಾಜಕೀಯ ಮಾಡುತ್ತೇವೆ  ಯಡಿಯೂರಪ್ಪ ನೇತೃತ್ವದಲ್ಲಿ ರಾಜಕೀಯ ಎಂದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ  

 ಅರಸೀಕೆರೆ (ಸೆ.10): ಬಿ.ಎಸ್‌.ಯಡಿಯೂರಪ್ಪ ನಮ್ಮ ನಾಯಕರು, ಅವರನ್ನು ಮುಂದಿಟ್ಟುಕೊಂಡೇ ನಾವು ರಾಜಕೀಯ ಮಾಡುತ್ತೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂದು ಯಾರ ಅಪೇಕ್ಷೆಯೂ ಇರಲಿಲ್ಲ. ವಯಸ್ಸಿನ ಕಾರಣ ಹೀಗಾಯ್ತು ಅಷ್ಟೆ. ಅವರು ಪಕ್ಷದ ವರಿಷ್ಠರಾಗಿ ಇರುತ್ತಾರೆ ಎಂದರು. 

ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಜಾತ್ರೆ: ಬೇಜವಾಬ್ದಾರಿ ಉತ್ತರ ಕೊಟ್ಟ ಸಚಿವ ಮಾಧುಸ್ವಾಮಿ

ಆಡಳಿತದಲ್ಲಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲಾ. ಅವರ ಮಾರ್ಗದರ್ಶನದಲ್ಲಿ ಆಡಳಿತ ಮಾಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.