Asianet Suvarna News Asianet Suvarna News

Karnataka Politics: ಯಡಿಯೂರಪ್ಪ-ಕಳಕಪ್ಪ ಬಂಡಿ ಸಂಭಾಷಣೆ ವೈರಲ್‌

ಮಂಗಳವಾರ ಜಿಲ್ಲೆಯ ಶಿರಹಟ್ಟಿಪಟ್ಟಣದ ಹೆಲಿಪ್ಯಾಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೋಣ ಶಾಸಕ ಕಳಕಪ್ಪ ಅವರೊಂದಿಗೆ ನಡೆಸಿದ ಚರ್ಚೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

BS Yediyurappa and Kalakappa Bandi conversation video viral gvd
Author
First Published Nov 10, 2022, 9:41 AM IST

ಗದಗ (ನ.10): ಮಂಗಳವಾರ ಜಿಲ್ಲೆಯ ಶಿರಹಟ್ಟಿಪಟ್ಟಣದ ಹೆಲಿಪ್ಯಾಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೋಣ ಶಾಸಕ ಕಳಕಪ್ಪ ಅವರೊಂದಿಗೆ ನಡೆಸಿದ ಚರ್ಚೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಬಿಜೆಪಿ ಮುಂಬರುವ 2023ರ ಚುನಾವಣೆಯಲ್ಲಿ ಬಿಜೆಪಿ ತನ್ನ ಕೆಲವು ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದಿಲ್ಲ, ಹಿಮಾಚಲ ಪ್ರದೇಶ ಸೇರಿದಂತೆ ಈಚೆಗೆ ನಡೆಯುತ್ತಿರುವ ಚುನಾವಣೆಗಳ ಟಿಕೆಟ್‌ ಹಂಚಿಕೆಯಲ್ಲಿ ಇದನ್ನು ಗಮನಿಸಬಹುದು ಎನ್ನುವ ಗಂಭೀರ ಚರ್ಚೆಗಳ ಮಧ್ಯೆಯೇ ಈ ಘಟನೆ ಜಿಲ್ಲೆಯ ಪಾಲಿಗೆ ತೀವ್ರ ಕುತೂಹಲ ಕೆರಳಿಸಿದೆ.

ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ

ಚರ್ಚೆಯಲ್ಲೇನಿದೆ?: ಶಿರಹಟ್ಟಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಪರಮೋಚ್ಚ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರನ್ನು ರೋಣ ಶಾಸಕರು ಭೇಟಿ ಮಾಡಿದ್ದು ಈ ವೇಳೆಯಲ್ಲಿ ಸ್ವಾರಸ್ಯಕರ ಸಂಭಾಷಣೆ ನಡೆದಿದ್ದು ಕನ್ನಡಪ್ರಭ ಸೋದರ ಸಂಸ್ಥೆಯಾದ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

‘ಚುನಾವಣೆಗೆ ನಿಲ್ಲುತ್ತೀಯಾ?’ ಎಂತಾ ಶಾಸಕ ಕಳಕಪ್ಪ ಬಂಡಿಗೆ ಯಡಿಯೂರಪ್ಪ ಎಲ್ಲರ ಸಮ್ಮುಖದಲ್ಲಿಯೇ ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ‘ನೀವು ನಿಲ್ಲು ಅಂದ್ರೆ ನಿಲ್ಲುತ್ತೇನೆ... ಬೇಡ ಅಂದ್ರೆ ಬೇಡ ಸರ್‌’ ಎನ್ನುತ್ತಾರೆ. ‘ಜನ ಬೇಡ ಅಂತಿದಾರೆ’ ಎಂದು ಯಡಿಯೂರಪ್ಪ ಮರು ಪ್ರಶ್ನೆ ಹಾಕುತ್ತಾರೆ. ಅದಕ್ಕೂ ಶಾಸಕರು ‘ನೀವು ಹೇಳಿದಂತೆ ಆಗಲಿ’ ಎಂದು ಉತ್ತರಿಸುತ್ತಾರೆ.

‘ಹಾಗಾದ್ರೆ ದುಡ್ಡು ಉಳೀತು ಅಂತಾ?’ ಎನ್ನುತ್ತಾ ಬಿಎಸ್‌ವೈ ಮುಖ ತಿರುಗಿಸುತ್ತಾರೆ. ಆಗ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರನ್ನು ಉದ್ದೇಶಿಸಿ ‘ಇವನಿಗೆ ಟಿಕೆಟ್‌ ಕೊಡ್ತೀರಾ?’ ಅಂತಾ ಯಡಿಯೂರಪ್ಪ ಕೇಳುತ್ತಾರೆ. ‘ಕೊಡದಿದ್ರೆ ನನಗೂ ಬಿಡಲ್ಲ ಅವ್ನು’ ಎಂದು ಸಿ.ಸಿ.ಪಾಟೀಲರು ನಗುತ್ತಲೇ ಉತ್ತರಿಸಿ ಪರಿಸ್ಥಿತಿ ತಿಳಿಗೊಳಿಸುತ್ತಾರೆ.

ಕಾಂಗ್ರೆಸ್‌ಗೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಚಾಟಿ

ಈ ಚರ್ಚೆಯನ್ನು ಯಡಿಯೂರಪ್ಪ ತಮಾಷೆಗಾಗಿ ಮಾಡಿದ್ದಾ ಅಥವಾ ಗಂಭೀರವಾಗಿ ಈ ವಿಷಯನ್ನು ಹೇಳಿದ್ದಾರಾ ಎನ್ನುವುದನ್ನು ಅವರೇ ಉತ್ತರಿಸಬೇಕಿದೆ. ಆದರೆ, ಸಂಭಾಷಣೆಯ ವಿಡಿಯೋ ಮಾತ್ರ ಜಿಲ್ಲೆಯಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಈಗಾಗಲೇ ರೋಣ ವಿಧಾನಸಭಾ ಕ್ಷೇತ್ರಕ್ಕೆ ಇನ್ನುಳಿದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಂತೂ ಆಗಿದ್ದು, ಈ ರೀತಿಯ ರಾಜಕೀಯ ಚರ್ಚೆಗೆ ಚುನಾವಣೆ 6 ತಿಂಗಳ ಮೊದಲೇ ನಾಂದಿ ಹಾಡಿ ಹೋಗಿರುವ ಯಡಿಯೂರಪ್ಪ ಅವರ ತಂತ್ರಗಾರಿಕೆ ಏನು?, ಇದರ ಹಿಂದಿರುವ ಮರ್ಮವೇನು ?, ಕಳಕಪ್ಪ ಅವರಿಗೆ ಅದ್ಯಾಕೆ ಹೀಗೆ ಮಾತನಾಡಿದ್ದಾರೆ ಎನ್ನುವುದು ಕೂಡಾ ಸಾಕಷ್ಟುಚರ್ಚೆಗೆ ಕಾರಣವಾಗಿದೆ.

Follow Us:
Download App:
  • android
  • ios