ಬ್ರಿಟೀಷ್-ಬಿಜೆಪಿ ಆಡಳಿತಕ್ಕೂ ವ್ಯತ್ಯಾಸವೇ ಇಲ್ಲ: ಸುಂದರೇಶ್‌

  • ಬ್ರಿಟೀಷ-ಬಿಜೆಪಿ ಆಡಳಿತಕ್ಕೂ ವ್ಯತ್ಯಾಸವೇ ಇಲ್ಲ: ಸುಂದರೇಶ್‌
  • ಈಶ್ವರಪ್ಪ ತಮ್ಮ ಹೇಳಿಕೆಗಳಿಂದಲೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ
  • ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೋಡಿ ಈಶ್ವರಪ್ಪ ಕಲಿಯಲಿ
British and BJP administration is no different says Sundaresh at shivamogga rav

ಶಿವಮೊಗ್ಗ (ನ.3) : ಬ್ರಿಟಿಷರ ಆಡಳಿತಕ್ಕೂ ಬಿಜೆಪಿಯವರು ನೀಡುತ್ತಿರುವ ಆಡಳಿತಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಡವರ ಹಣ ಕಸಿದು ಉಳ್ಳವರಿಗೆ ನೀಡಿ ದೇಶವನ್ನು ಸಂಪೂರ್ಣ ಕೊಳ್ಳೆ ಹೊಡೆದು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಅಡಕೆಗಷ್ಟೇ ಅಲ್ಲ, ಸರ್ಕಾರಕ್ಕೂ ಕೊಳೆರೋಗ; ಸುಂದರೇಶ್‌ ಟೀಕೆ

ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವುದು, ಸಮಾಜದಲ್ಲಿ ಪರಸ್ಪರ ದ್ವೇಷ ವಾತಾವರಣ ಹುಟ್ಟು ಹಾಕುವುದೇ ಬಿಜೆಪಿ ಕೆಲಸವಾಗಿದೆ. ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಕೇಳುವುದನ್ನು ಬಿಟ್ಟು ಧರ್ಮವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದು ಅಧರ್ಮದ ಹಾದಿ ತುಳಿಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ವಾತಾವರಣ ಹುಟ್ಟು ಹಾಕುತ್ತಿದ್ದಾರೆ. ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಮತದಾರರಿಗೆ ತಿಳಿಸಿ ಮತ ಯಾಚನೆ ಮಾಡುವುದನ್ನು ಬಿಟ್ಟು ಧರ್ಮಗಳ ನಡುವೆ ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಕೆಲಸಕ್ಕೆ ಬಾರದ ವಿಷಯಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುವುದರಲ್ಲಿ ಕೆ.ಎಸ್‌.ಈಶ್ವರಪ್ಪರದ್ದು ಎತ್ತಿದ ಕೈ. ಅವರಿಂದಾಗಿಯೇ ಶಿವಮೊಗ್ಗದಲ್ಲಿ ಅಶಾಂತಿ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಇದೀಗ ಸಾವರ್ಕರ್‌ ವಿಷಯ ಮುಂದಿಟ್ಟುಕೊಂಡು ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಾಗಾದರೆ ಬಿಜೆಪಿಯವರಿಗೆ ಸಾವರ್ಕರ್‌ ಇಷ್ಟುವರ್ಷ ಗೊತ್ತಿರ ಲಿಲ್ಲವೇ? ಇದೀಗ ಒಬ್ಬ ಸಾಮಾನ್ಯ ಮನುಷ್ಯನನ್ನು ವಿಜೃಂಭಿಸುವ ಅವಶ್ಯಕತೆಯಾದರೂ ಏನಿದೆ ? ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಸಲುವಾಗಿಯೇ ಗೊಂದಲ ಮೂಡಿಸಲು ಬಿಜೆಪಿಯವರು ಯತ್ನಿಸುತ್ತಿರುವಂತಿದೆ. ಅದರಲ್ಲೂ ಶಾಸಕ ಕೆ.ಎಸ್‌.ಈಶ್ವರಪ್ಪನವರು ಸಾವರ್ಕರ್‌ ಮೊಮ್ಮಗನನ್ನು ಶಿವಮೊಗ್ಗಕ್ಕೆ ಕರೆಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಭೇಟಿ ಮಾಡಲಿ:

ಈ ದೇಶದ ಸ್ವಾತಂತ್ರಕ್ಕಾಗಿ ಕೋಟ್ಯಂತರ ಮಂದಿ ಹೋರಾಟ ನಡೆಸಿದ್ದಾರೆ. ಹಲವರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಹೀಗೆ ದೇಶಕ್ಕೆ ಬಲಿದಾನ ಮಾಡಿದವರಿಗೆ ಮಕ್ಕಳು, ಮೊಮ್ಮಕ್ಕಳು ಇಲ್ಲವೆ? ಈಶ್ವರಪ್ಪನವರಿಗೆ ನಿಜವಾಗಿಯೂ ಸ್ವಾತಂತ್ರ ಹೋರಾಟಗಾರರ ಬಗ್ಗೆ ಗೌರವ ಇದ್ದರೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಕ್ಕೆ ಭೇಟಿ ನೀಡಲಿ. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶವೇ ಇದೆ. ಅದನ್ನು ಬಿಟ್ಟು ಸಮಾಜದಲ್ಲಿ ಗೊಂದಲ ಮೂಡಿಸಲು ಮುಂದಾಗುವುದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪನವರ ರಾಜಕೀಯ ದಾಹಕ್ಕೆ ಇನ್ನೆಷ್ಟುಅಮಾಯಕರು ಬಲಿಯಾಗಬೇಕೋ ಗೊತ್ತಿಲ್ಲ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಶಾಂತಿ ಇಲ್ಲದಂತಾಗಿದೆ.ಯು ವಕರ ಹತ್ಯೆಗಳಾಗುತ್ತಿವೆ. ಹೀಗಿದ್ದರೂ ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿರುವುದನ್ನು ನೋಡಿದರೆ ಈಶ್ವರಪ್ಪನವರಿಗೆ ನಾಚಿಕೆ ಆಗಬೇಕು. ಈಶ್ವರಪ್ಪ ಅವರಿಗಿರುವ ಅಧಿಕಾರದ ಹಪಾಹಪಿಯಿಂದಲೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.

ಈಶ್ವರಪ್ಪರ 25 ವರ್ಷದ ರಾಜಕೀಯ ಜೀವನದಲ್ಲಿ ಧರ್ಮ ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹರ್ಷನ ಹತ್ಯೆಯನ್ನು ರಾಜಕಾರಣಗೊಳಿಸಿದರು. ಅದರ ಲಾಭ ಪಡೆದರು. ಜನಜೀವನ ಅಸ್ತವ್ಯಸ್ತಗೊಳಿಸಿದರು ಎಂದು ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಅಹ್ಮದ್‌, ಪ್ರಮುಖರಾದ ರೇಖಾ ರಂಗನಾಥ್‌, ಸಿ.ಎಸ್‌.ಚಂದ್ರಭೂಪಾಲ್‌, ಚಂದ್ರಶೇಖರ್‌, ಮುಜೀಬ್‌, ಚಂದನ್‌, ಖಲೀಂಪಾಷಾ, ಎನ್‌.ಡಿ. ಪ್ರವೀಣ್‌ ಕುಮಾರ್‌ ಮುಂತಾದವರಿದ್ದರು.

Shivamogga: ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ: ಸಂಸದ ಬಿ.ವೈ.ರಾಘವೇಂದ್ರ

ಬಿಎಸ್‌ವೈ ನೋಡಿ ಈಶ್ವರಪ್ಪ ಕಲಿಯಲಿ:

ಬಿಜೆಪಿಯವರೇ ಆದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗಲ್ಲ. ಧರ್ಮಗಳ ನಡುವೆ ಅವರೆಂದೂ ಶಾಂತಿ ಕದಡುವ ಹೇಳಿಕೆಗಳನ್ನು ನೀಡುವುದಿಲ್ಲ. ಅವರನ್ನು ನೋಡಿ ಈಶ್ವರಪ್ಪ ಸಾಕಷ್ಟುವಿಷಯಗಳನ್ನು ಕಲಿಯಬೇಕಿದೆ. ಅಧಿಕಾರಕ್ಕಾಗಿ ಧರ್ಮವನ್ನು ಮೈಮೇಲೆ ಹೊತ್ತುಕೊಂಡಂತೆ ಹಾಗೂ 60 ವರ್ಷಕ್ಕೆ ಅರಳು ಮರಳು ಎಂಬಂತೆ ವರ್ತಿಸುತ್ತಾ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟುಮಾಡುವ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಸುಂದರೇಶ್‌ ಒತ್ತಾಯಿಸಿದರು.

Latest Videos
Follow Us:
Download App:
  • android
  • ios