ಕರ್ನಾಟಕದ ಅಭಿವೃದ್ಧಿಗೆ ಜೆಡಿಎಸ್‌ ಅಧಿಕಾರಕ್ಕೆ ತನ್ನಿ: ಎಚ್‌.ಡಿ.ಕುಮಾರಸ್ವಾಮಿ

ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಸರ್ಕಾರದಂತೆ 40% ಕಮಿಷನ್‌ ರಾಜಕಾರಣವನ್ನು ನಾನು ಮಾಡಿಲ್ಲ: ಕುಮಾರಸ್ವಾಮಿ

Bring JDS to Power for the Development of Karnataka Says Former CM HD Kumaraswamy grg

ಭಾರತೀನಗರ(ಜು.27):  ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿರುವುದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ನಾಡಿನ ಅಭಿವೃದ್ಧಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಶ್ರೀವೆಂಕಟೇಶ್ವರ ದೇವಾಲಯದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ದುರುಪಯೋಗವಾಗದೆ ಜನರ ಸೇವೆ ಮಾಡಿದ್ದೇನೆ ಎಂದರು.

ಜೆಡಿಎಸ್‌ ಸಂಘಟನೆಗಾಗಿ ಮುಂದಿನ ದಿನಗಳಲ್ಲಿ 100 ದಿನ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯದ ತಾಲೂಕಿನಲ್ಲಿ ಒಂದು ದಿನಕ್ಕೆ ಎಷ್ಟು ಗ್ರಾಮಗಳನ್ನು ಭೇಟಿ ಮಾಡಬಹುದೋ ಅಷ್ಟು ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುವ ಜೊತೆಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದರು.

ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ: ಮಂಡ್ಯ ಜಿಲ್ಲಾಡಳಿತದ ಕ್ರಮಕ್ಕೆ ರಾಜಮಾತೆ ಅಸಮಾಧಾನ

40 % ಕಮಿಷನ್‌ ಮಾಡಿಲ್ಲ:

ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಸರ್ಕಾರದಂತೆ 40% ಕಮಿಷನ್‌ ರಾಜಕಾರಣವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಜೆಡಿಎಸ್‌ ಪಕ್ಷಕ್ಕೆ 5 ವರ್ಷಗಳವರೆಗೆ ಅಧಿಕಾರ ನೀಡಿದರೆ ಉತ್ತಮ ಯೋಜನೆ ಜಾರಿಗೆ ತಂದು ರೈತರು, ಬಡವರಿಗೆ ಅನುಕೂಲ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಪ್ರಮೋದಾದೇವಿ ಅಸಮಾಧಾನ

ನಾನು ರಾಜಕೀಯಕ್ಕೆ ಬಂದಾಗ ಮನಸ್ಸು ಮಾಡಿದರೆ ಸಾಕಷ್ಟು ಹಣ ಮಾಡಬಹುದಿತ್ತು. ಬೇರೆ ರಾಜಕಾರಣಿಗಳಂತೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಶಿಕ್ಷಣ ಸಂಸ್ಥೆ ತೆರೆದು ಹಣ ಸಂಪಾದನೆ ಮಾಡಬಹುದಿತ್ತು. ಆದರೆ, ನನಗೆ ಹಣಕ್ಕಿಂತ ರಾಜ್ಯದ ಜನರ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದರು.

ರಾಜಕಾರಣಕ್ಕೆ ಬರುವ ಮುನ್ನವೇ ಸಿನಿಮಾ ಹಂಚಿಕೆ ಮಾಡುತ್ತಿದ್ದಾಗ ಬಿಡದಿಯ ಬಳಿ 45 ಎಕರೆ ಜಮೀನು ತೆಗೆದಿದ್ದೆ. ಇದನ್ನು ಹೊರತುಪಡಿಸಿ ನಾನು ಬೇರೆ ಯಾವ ಆಸ್ತಿಯನ್ನು ಮಾಡಿಲ್ಲ. ನಾವು ಎಷ್ಟೇ ಎತ್ತರಕ್ಕೆ ಹೋದರು ದೇವರ ಮುಂದೆ ನಾವು ತಲೆಬಾಗಲೇಬೇಕು. ಹಾಗಾಗಿ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದೇನೆ. ಟ್ರಸ್ಟ್‌ ನವರು ಉತ್ತಮ ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 

Latest Videos
Follow Us:
Download App:
  • android
  • ios