ಬೆಂಗಳೂರು, (ಆ.11): ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಬಿ. ಶ್ರೀರಾಮುಲು ಅವರ ಆರೋಗ್ಯ ಕುರಿತು ಬೌರಿಂಗ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ.

 ಕೊರೋನಾ ಸೋಂಕು ತಗುಲಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿರುವಂತ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಆರೋಗ್ಯ ಸ್ಥಿರವಾಗಿದ್ದು, ಲವಲವಿಕೆಯಿಂದ ಇದ್ದಾರೆ ಎಂಬುದಾಗಿ ಬೌರಿಂಗ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಸಚಿವ ರಾಮುಲು ದಾಖಲು: ಚಿಕಿತ್ಸೆ ಪಡೆಯುತ್ತಿರೋ ಫೋಟೋಗಳು ವೈರಲ್

, ಕೊರೋನಾ ಸೋಂಕು ತಗುಲಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೋಗ್ಯ ಸ್ಥಿರವಾಗಿದ್ದು, ಲವಲವಿಕೆಯಿಂದ  ಇದ್ದಾರೆ. ಅವರಿಗೆ ಕೊರೋನಾದಿಂದ ಗುಣಮುಖರಾಗಲು ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೌರಿಂಗ್ ಆಸ್ಪತ್ರೆ ತನ್ನ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.

ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಆಗಸ್ಟ್ 9ರಂದು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕೂಡಲೇ ಅವರು ಬೆಂಗಳೂರಿನ ಶಿವಾಜಿನಗರದ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಆಸ್ಪತ್ರೆಯಿಂದಲೇ ತಮ್ಮ ಆರೋಗ್ಯ ಇಲಾಖೆಯ ಕಡತಗಳನ್ನ ಪರಿಶೀಲಿಸುತ್ತಾ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದಾರೆ.

"