ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ವಿರುದ್ಧ ಡೀಲ್ ಸಂಬಂಧಿತ ವಿಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಫಲಾನುಭವಿಗಳಿಂದ ಪರ್ಸೆಂಟೇಜ್‌ಗಾಗಿ ಡಿಮ್ಯಾಂಡ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ವಿರುದ್ಧ ಡೀಲ್ ಸಂಬಂಧಿತ ವಿಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ನಡೆದ ಡೀಲ್‌ಗಾಗಿ ಸಂಬಂಧಿಸಿದಂತೆ ಬಿಡುಗಡೆಯಾದ ವಿಡಿಯೋ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಡಿಯೋ ಬಹಿರಂಗ ಆಗ್ತಿದ್ದ ಹಾಗೆ ಸಿಎಂ ಗೆ ವಿವರಣೆ ಕೊಡಲು ಮುಂದಾಗಿದ್ದ ರವಿಕುಮಾರ್ ಗೆ ಸಿಎಂ ರಾಜೀನಾಮೆ ಕೊಟ್ಟು ಹೊರಡು ಎಂದಿದ್ದಾರೆ ಎನ್ನಲಾಗಿದೆ
ವಿಡಿಯೋ ಬಹಿರಂಗ – ಭೋವಿ ಸಮಾಜದ ಮುಖಂಡರ ಆಕ್ರೋಶ
ಭೋವಿ ಸಮಾಜದ ಮುಖಂಡ ವೆಂಕಟೇಶ್ ಮೌರ್ಯ ಅವರು ಪತ್ರಿಕಾ ಭವನದಲ್ಲಿ ಪ್ರೆಸ್‌ಮೀಟ್ ನಡೆಸಿ ರವಿಕುಮಾರ್ ವಿರುದ್ಧ ಡೀಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫಲಾನುಭವಿಗಳಿಂದ ಪರ್ಸೆಂಟೇಜ್‌ಗಾಗಿ ಡಿಮ್ಯಾಂಡ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿಡಿಯೋದಲ್ಲಿ ರವಿಕುಮಾರ್ ಮತ್ತು ಬ್ರೋಕರ್ ಮಹಿಳೆಯ ಮಾತುಕತೆ ಬಹಿರಂಗಗೊಂಡಿದ್ದು, ದುಡ್ಡು, ಪರ್ಸೆಂಟೇಜ್, ಎಕರೆ ಲೆಕ್ಕಾಚಾರಗಳ ಬಗ್ಗೆ ಚರ್ಚೆ ನಡೆದಿದೆ. ಬ್ರೋಕರ್ ಮಹಿಳೆ ಹೇಳುವಂತೆ, ಫಲಾನುಭವಿಗಳಿಂದ ಹಣ ಕಲೆಕ್ಟ್ ಮಾಡಿ ರವಿಕುಮಾರ್ ಅವರಿಗೆ ಹಸ್ತಾಂತರಿಸಿದ್ದೇನೆ ಎಂದು ಸ್ಪಷ್ಟಪಡಿಸುತ್ತಾರೆ. ಇನ್ನೊಂದು ಸಂದರ್ಭದಲ್ಲಿ, 15 ಕೋಟಿಯಲ್ಲಿನ ಲೆಕ್ಕಾಚಾರ, ಎಕರೆ ಹಂಚಿಕೆ ಮತ್ತು 40%–60% ಪರ್ಸೆಂಟೇಜ್ ಮಾತುಕತೆ ನಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.
ಸಿಎಂ ಸಿದ್ದರಾಮಯ್ಯನ ಗಂಭೀರ ತೀರ್ಮಾನ
ವಿಡಿಯೋ ಬಹಿರಂಗವಾದ ತಕ್ಷಣವೇ ರವಿಕುಮಾರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿವರಣೆ ನೀಡಲು ಪ್ರಯತ್ನಿಸಿದರು. ಆದರೆ ಸಿಎಂ, ಯಾವುದೇ ವಿವರಣೆ ಸ್ವೀಕರಿಸದೇ, ತಕ್ಷಣ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆ
ಈ ವಿಡಿಯೋ ಬೆಳಕಿಗೆ ಬಂದ ನಂತರ ಭೋವಿ ನಿಗಮದೊಳಗಿನ ಭ್ರಷ್ಟಾಚಾರದ ಆರೋಪ ಮತ್ತೊಮ್ಮೆ ಬಯಲಾಗಿದ್ದು, ಸಮಾಜದ ಮುಖಂಡರು ಹಾಗೂ ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಾದ್ಯಂತ ಈ ಪ್ರಕರಣವು ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಯಲುಗಳು ಹೊರಬರುವ ಸಾಧ್ಯತೆ ಇದೆ.
ವಿಡಿಯೋದಲ್ಲಿನ ಸಂಭಾಷಣೆ ಹೀಗಿದೆ....
ಬ್ರೋಕರ್ ಮಹಿಳೆ - ಸರ್ ಗಮನಕ್ಕೆ ತಾರದೆ ಯಾವುದೂ ಮಾಡಿಲ್ಲ, ಅದಕ್ಕೆ ಅವರು ಸರ್ ಬೈತಾ ಇದ್ರು , ರೊಕ್ಕ ಎಲ್ಲಿ ಅಂತ ಕೇಳ್ತಾ ಇದ್ರು
ರವಿಕುಮಾರ್ - ನಾನು ಎಲ್ಲಿ ಬೈದಿದ್ದೀನಿ..?
ಬ್ರೋಕರ್ ಮಹಿಳೆ- ಅಂದ್ರೆ ಸರ್ರು, ಸರ್ ಏನೇನಾಗಿದೆ ಅಂತ ಕೇಳ್ತಾ ಇದ್ದರೆ ಅಂದ್ರು...
ರವಿ ಕುಮಾರ್ - ಹೌದು ಹೇಳಬೇಕಲ್ವ ನನಗೆ ನೀನು...
ಬ್ರೋಕರ್ ಮಹಿಳೆ - ಹೇಳಿದ್ದೀನಿ ಸರ್ ಮಂಜುಗೆ..
ಬ್ರೋಕರ್ ಮಹಿಳೆ - ಏನಾದರು ಆಗಲಿ ಸರ್ ಐಯಮ್ ರೆಡಿ, ನಿಮ್ಮನ್ನ ಬಿಟ್ಟು ಏನೂ ಮಾಡಿಲ್ಲ ಸರ್....
ರವಿಕುಮಾರ್ - ಕಲೆಕ್ಟ್ ಮಾಡಿದ್ದು ಏನಾಯ್ತು..?
ಬ್ರೋಕರ್ - ಕಲೆಕ್ಟ್ ಮಾಡಿದ್ದು ನಿಮಗೂ ಕೊಟ್ಟಿದ್ದೀನಿ ಸರ್, ಏಪ್ರಿಲ್ ಆರನೇ ತಾರೀಖಿನವರೆಗೆ ಎಲ್ಲಾ ಕೊಟ್ಟಿದ್ದೇನೆ. ನಿಮಗೆ ಎಷ್ಟು ತಲುಪಿದೆ ಸರ್, ಒಮ್ಮೆ ಐದು, ಒಮ್ಮೆ ಏಳು ತಲುಪಿಸಿದ್ದೇನೆ, ಆಮೇಲೆನೇ ಪರ್ಸೆಂಟೇಜ್ ಬಗ್ಗೆ ಹೇಳಿದೆ ಸರ್, 60 ಅಂತ ಹೇಳಿದೆ, ಆಮೇಲೆ ನೀವು ನೋಡಿಮಾಡೋಣ ಅಂತಹೇಳಿದ್ರಿ, ಪ್ರೊಸೆಸ್ ಶುರು ಮಾಡಿ ಅಂತ ಹೇಳಿದ್ರಿ....
ರವಿಕುಮಾರ್ - ಮೂರು ಕೋಟಿದು ಎಷ್ಟು ಬಂತು....?
ಬ್ರೋಕರ್ - ಯಾವುದು ಸರ್
ರವಿಕುಮಾರ್ - ಅದೇ ಮಿನಿಸ್ಟರ್‌ದು..
ಬ್ರೋಕರ್ - ಅದರಲ್ಲಿ ಟೋಟಲ್ ಒಂಭತ್ತು ಲಕ್ಷ ಬಂದಿದೆ ಸರ್
ರವಿಕುಮಾರ್ - ಹೇಗೆ...
ಬ್ರೊಕರ್ - ಅದೇ ಸರ್ ಮೂರು ಮೂರ್ಲಿ ಒಂಭತ್ತು ಸರ್... ಒಂಭತ್ತು ಲಕ್ಷ ಕೊಟ್ಟಿದ್ದೀವಿ ಸರ್ ಮೂರು ಪರ್ಸೆಂಟ್ ಅಂಗೆ....
ರವಿಕುಮಾರ್ - 15 ಕೋಟಿಲಿ 3 ಹೋದರೆ 12 ಉಳಿಯುತ್ತೆ
12 ಕೋಟಿಗೆ ಎಷ್ಟು ಎಕರೆ ಕೊಟ್ಟಿದ್ರಿ..?
ಬ್ರೋಕರ್ - ಸುಮಾರು ಒಂದ್ 60 ಎಕರೆದು ಕೊಟ್ಟಿದ್ವಿ ಸರ್ , ಮೊನ್ನೆ ಒಂದು ಕ್ಯಾಲುಕ್ಲೇಷನ್ ಲಿಸ್ಟ್ ಕೊಟ್ಟಿದ್ವಲ್ಲ ಸರ್...
ರವಿ ಕುಮಾರ್ - ಅಲ್ಲ ರೀ ಇದರಲ್ಲಿ ಎಷ್ಟು ಪರ್ಸೆಂಟ್ ಮಾಡಿದ್ರಿ..
ಬ್ರೋಕರ್ - ಸರ್ ಇದಕ್ಕ ನಿಮಗೆ ಅವಾಗ 40% ಅಂಗೆ ಕೊಟ್ಟಿದ್ವಿ , ಆಮೇಲೆ 60 ಅಂದ್ರಿ , ಬಾಳ ಆಗ್ತೈತಿ ಅಂದಿದಕ್ಕ ಡಾಕ್ಯುಮೆಂಟೇಷನ್ ಸೆಕ್ಷನ್‌ಗೆಲ್ಲಾ ಕೊಡಬೇಕು..
ರವಿಕುಮಾರ್; ಯಾವ್ ಅಕೌಂಟ್, ಯಾವ್ ಟ್ರಸರಿ ರೀ, ಇವರಿಗೆಲ್ಲಾ ಸಂಬಳಕೊಡೋಲ್ವೇನ್ರಿ..?
ಬ್ರೋಕರ್ : ಮೂರಲ್ಲಿ 40% ಅಷ್ಟೇ ಕೊಟ್ಟಿದ್ದೀನಿ ಸರ್ .... ಮೂರು ಕೋಟಿ ಫಸ್ಟ್ ಇದಾಗಿತ್ತಲ್ಲ ಸರ್, ಎಂಎಲ್‌ಎದು ಅದೇ ಮಿನಿಸ್ಟರ್‌ದು, ಒಂಭತ್ತೈದ್ಲಿ ನಲವತ್ತೈದು, ನಾಲ್ಕು ಒಂಭೋತ್ಲಿ ಮೂವತ್ತಾರು, ಮೂರು ಲಕ್ಷದ ಅರವತ್ತು ಸಾವಿರ ತಲುಪಿಸಿದ್ದೇನೆ ಸರ್, ಇದರಲ್ಲೇ ಆಡ್ ಆಗಿದೆ ಸರ್... ಆಮೇಲೆ ಎಕರೆವೈಸ್ ನೀವು ಹೇಳಿದಂಗೆ ಕೊಟ್ಟು ಬಂದೆ ಸರ್.. ಆ ಮೇಲೆ ಸರ್ ನಲವತ್ತು ಎಕರೆದು ಕೊಟ್ವಿ ಸರ್..
ರವಿಕುಮಾರ್: ನಲವತ್ತು ಎಕರೆಯಲ್ಲಿ ಎಷ್ಟು ಎಕರೆದು ಬಂದಿದೆ , ಆರು ಕೋಟಿ ಹದಿನೈದು ಲಕ್ಷ ಇದ್ಯಲ್ಲ , ಮಿನಿಸ್ಟರ್ ಕಡೆಯವರಿಗೆಲ್ಲಾ ಕೊಡಬೇಕಲ್ಲ.…
