Basavaraj Bommai: ಒಂದೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ ಬೊಮ್ಮಾಯಿ!

* ಒಂದೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಬೊಮ್ಮಾಯಿ
* ಮುಖ್ಯಮಂತ್ರಿಗೇ ಶಾಪ ಹಾಕಿದ ಸ್ವಾಮೀಜಿ
* ಒಂದು ತಿಂಗಳು ಎಂದು ಶಾಪ ಹಾಕಿದ ಸ್ವಾಮೀಜಿ

bommai resign to CM  Post In a Month Says Basava Prakash Swamiji In Belagavi rbj

ಬೆಳಗಾವಿ, (ಡಿ.21): ಇನ್ನೊಂದೇ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ ಎಂದು ಸ್ವಾಮೀಜಿಯೊಬ್ಬರು ಶಾಪ ಹಾಕಿದ್ದಾರೆ.

ಕೂಡಲಸಂಗಮದ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ (Basavaprakash Swamiji) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂಥದ್ದೊಂದು ಶಾಪ ಹಾಕಿದ್ದಾರೆ.

Basavaraj Bommai: ಸಿಎಂ ಬದಲಾವಣೆಗೆ ಸ್ವಪಕ್ಷೀಯ ನಾಯಕರ ಹೇಳಿಕೆಗಳು ಪುಷ್ಟಿ

ಬೆಳಗಾವಿಯಲ್ಲಿ(Belagavi) ಇಂದು(ಮಂಗಳವಾರ) ಸುದ್ದಿಗಾರರರ ಜತೆ ಮಾತನಾಡಿದ ಸ್ವಾಮೀಜಿ,  ಸರ್ಕಾರ ನಮ್ಮ ಮೇಲೂ ಪೊಲೀಸರನ್ನು ಛೂ ಬಿಟ್ಟು ಸತಾಯಿಸುತ್ತಿದೆ. ಖಾಕಿಧಾರಿಗಳ ಮೂಲಕ ಕಾವಿಧಾರಿಗಳ ಮೇಲೆ ಸರ್ಕಾರ ಎಸಗಿರುವ ಈ ಅಪಚಾರವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ಅವರು ಸಿಎಂಗೆ ಶಾಪ ಹಾಕಿದರು.

ನಾವು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಎಲ್ಲವನ್ನೂ ತೊರೆದು ಬಂದ ನಮಗೆ ಪೊಲೀಸರು ಅಕ್ಕ-ತಂಗಿಯರನ್ನು ಹಚ್ಚಿ ಬೈದಿದ್ದಾರೆ ಎಂದು ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದರು.

ನಮ್ಮಂಥ ಸ್ವಾಮೀಜಿಗಳಿಗೇ ಈ ರೀತಿ ಮಾಡಿದವರಿಗೆ ನಮ್ಮ ಶಾಪ ತಟ್ಟದೇ ಬಿಡುವುದಿಲ್ಲ. ಖಂಡಿತ ನಮ್ಮ ಶಾಪ ತಟ್ಟಿಯೇ ತಟ್ಟುತ್ತದೆ, ಇನ್ನೊಂದು ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದೇ ಇಳಿಯುತ್ತಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು.

ಬೊಮ್ಮಾಯಿ ರಾಜೀನಾಮೆ ಚರ್ಚೆ
ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಮಾತನಾಡಿರುವ ಮಾತುಗಳ ಹಿಂದಿನ ಮರ್ಮ ಬೇರೆನೇ ಹೇಳುತ್ತಿದೆ. ಅಲ್ಲದೇ ಅವರ ಮಾತಿನಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಕುರ್ಚಿ ಅಭದ್ರ ಎನ್ನುವ ವಾತಾವರಣ ಮತ್ತೆ ಸೃಷ್ಟಿಯಾಗಿದೆ. ಇದಕ್ಕೆ ಪೂಕರವೆಂಬಂತೆ ಅಧಿಕಾರ ಶಾಶ್ವತ ಅಲ್ಲ ಎಂದು ಬೊಮ್ಮಾಯಿ ಅವರು ಆಡಿರುವ ಮಾತುಗಳು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ನಾಯಕತ್ವ ಬದಲಾವಣೆ ವಿಷಯ ಪದೇ ಪದೇ ಚರ್ಚೆಗೆ ಬರುತ್ತಿದೆ. ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಸತತವಾಗಿ ಚರ್ಚೆಗಳು ನಡೆದು ಕಡೆಗೆ 2 ವರ್ಷ ಅಧಿಕಾರ ಪೂರ್ಣಗೊಳಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು.ಇದೀಗ ಯಡಿಯೂರಪ್ಪ ಜಾಗಕ್ಕೆ ಬೊಮ್ಮಾಯಿ ಬಂದಿದ್ದರೂ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮಾತ್ರ ನಿಂತಿಲ್ಲ. ಬೊಮ್ಮಾಯಿ ಸ್ಥಾನವೂ ಭದ್ರವಿಲ್ಲ ಎನ್ನುವ ವದಂತಿ ನಿರಂತರವಾಗಿ ಹರಿದಾಡುತ್ತಲೇ ಇದೆ.

ಇನ್ನು  ಸ್ವಪಕ್ಷೀಯ ನಾಯಕರ ಹೇಳಿಕೆಗಳು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವುಕ ನುಡಿ, ಬಿ.ಎಲ್ ಸಂತೋಷ್ ಸ್ಪಷ್ಟೀಕರಣ ಸಿಎಂ ಬದಲಾವಣೆಗೆ ಪುಷ್ಟಿ ನೀಡುತ್ತಿದೆ.

ಸ್ವಪಕ್ಷೀಯರಿಂದಲೇ ನಾಯಕತ್ವ ಬದಲಾವಣೆ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸ್ವಪಕ್ಷೀಯ ನಾಯಕರಿಂದಲೇ ಹೇಳಿಕೆಗಳು ಕೇಳಿಬರುತ್ತಿವೆ.  ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ನಾಯಕತ್ವ ಬದಲಾವಣೆ ವದಂತಿಗೆ ತುಪ್ಪ ಸರಿದಿದ್ದಾರೆ.

Latest Videos
Follow Us:
Download App:
  • android
  • ios