ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌

* ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕನಸು ಕಂಡವರಿಗೆ ಬಿಗ್ ಶಾಕ್
* 4ರಾಜ್ಯದ ಸಂಪುಟ ರಚನೆಯಲ್ಲಿ ಕೇಂದ್ರ ನಾಯಕರು ಬ್ಯುಸಿ
* ಏಪ್ರಿಲ್ ಎರಡನೇ ವಾರ ಜೆಪಿ ನಡ್ಡಾ ರಾಜ್ಯಕ್ಕೆ

Bommai Cabinet Reshuffle Likely To Be delayed Over BJP command Busy In Others State Politics rbj

ವರದಿ: ರವಿ ಶಿವರಾಮ್

ಬೆಂಗಳೂರು, (ಮಾ.22): ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಅದೇ ಉತ್ಸಾಹದಲ್ಲಿರುವ ಕೇಂದ್ರ ನಾಯಕರು ಸಿಎಂ ಬೊಮ್ಮಾಯಿ ಸಂಪುಟಕ್ಕೆ ಒಂದು ಹೊಸ ರೂಪ ನೀಡಲು ಸಜ್ಜಾಗಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.

ಚುನಾವಣೆ ವರ್ಷವಾದ್ದರಿಂದ  ರಾಜ್ಯದಲ್ಲಿಯೂ ಯಂಗ್ ಆ್ಯಂಡ್ ಎನರ್ಜೆಟಿಕ್ ಟೀಮ್ ಕಟ್ಟಿ, ಚುನಾವಣೆ ಎದುರಿಸಲು ಕೇಂದ್ರ ನಾಯಕರ ಯೋಚಿಸಿದ್ದಾರೆ ಎಂಬ ಮಾತು ರಾಜ್ಯ ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದೆ. ಆದ್ರೆ ಸಂಪುಟ ಪುನರ್ ರಚನೆ ಸಂಬಂಧ  ಕೇಂದ್ರ ನಾಯಕರು ಇನ್ನು ಚರ್ಚೆ ಮಾಡಿಲ್ಲ ಎನ್ನುತ್ತಿವೆ ಮೂಲಗಳು..

Karnataka Cabinet ಬೊಮ್ಮಯಿ ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್.. ಹೊಸ ಸೂತ್ರ ಸಿದ್ಧ....

4 ರಾಜ್ಯದ ಸಂಪುಟ ರಚನೆಯಲ್ಲಿ ಕೇಂದ್ರ ನಾಯಕರು ಬ್ಯುಸಿ
ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯನ್ನು ಏಪ್ರಿಲ್ ಮೊದಲ ವಾರವೇ ಮಾಡ್ತಾರೆ ಎಂಬ ಚರ್ಚೆ ನಡೆಯುತ್ತಿತ್ತು.‌ ಅದರಲ್ಲೂ ಮುಖ್ಯವಾಗಿ ಆದಷ್ಟು ಶೀಘ್ರವಾಗಿ ಸಂಪುಟ ಪುನರ್ ರಚನೆ ಮಾಡಿ ಎಂದು ಸಚಿವಾಕಾಂಕ್ಷಿಗಳು ಸಿಎಂ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ರು. ಆದ್ರೆ ಸದ್ಯದ ಚಿತ್ರಣ ನೋಡಿದ್ರೆ ಎಪ್ರೀಲನಲ್ಲಿ ಸಂಪುಟ ಪುನರ್ ರಚನೆ ಆಗೋದೆ ಡೌಟು. ಹೌದು ಕೇಂದ್ರ ನಾಯಕರು ಪಂಚ ರಾಜ್ಯದ ಚುನಾವಣೆ ಬಳಿಕ ನಾಲ್ಕು ರಾಜ್ಯದ ಸಚಿವ ಸಂಪುಟ ರಚನೆಯಲ್ಲಿ ಬ್ಯುಸಿ ಇದ್ದಾರೆ. ಈಗಷ್ಟೇ ಗೋವಾ, ಮಣಿಪುರ, ಉತ್ತರಖಾಂಡಕ್ಕೆ ಸಿಎಂ ಆಯ್ಕೆ ಮುಗಿಸಿರುವ ಬಿಜೆಪಿ ಹೈಕಮಾಂಡ್ ಈಗ ಆ ಮೂರು ರಾಜ್ಯ ಸೇರಿ ಉತ್ತರಪ್ರದೇಶಕ್ಕೆ ಯೋಗಿ ಸಂಪುಟ ರಚನೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ರಾಜ್ಯ ಸಚಿವ ಸಂಪುಟದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ವರಿಷ್ಠ ಅಮಿತ್ ಶಾ ಇನ್ನೂ ಚರ್ಚೆಯನ್ನು ಮಾಡಿಲ್ಲ ಎನ್ನುತ್ತಿವೆ ಮೂಲಗಳು...

ಏಪ್ರಿಲ್ ಎರಡನೇ ವಾರ ಜೆಪಿ ನಡ್ಡಾ ರಾಜ್ಯಕ್ಕೆ
ಇದೇ ತಿಂಗಳ 30 ಕ್ಕೆ ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಿಗದಿಯಾಗಿತ್ತು. ಆದ್ರೆ ರಾಷ್ಟ್ರೀಯ ಅಧ್ಯಕ್ಷರನ್ನು ಆಹ್ವಾನ ಮಾಡಿರುವ ರಾಜ್ಯ ಬಿಜೆಪಿ ಸಂಘಟನೆ ಜೆಪಿ ನಡ್ಡಾರ ಸಮಯ ಸಿಗದೆ ಕಾರ್ಯಕಾರಿಣಿ ಸಭೆಯನ್ನು ಮುಂದಕ್ಕೆ ಹಾಕಿದ್ದಾರೆ. ಬಹುತೇಕ ಏಪ್ರಿಲ್ ಎರಡನೇ ವಾರದಲ್ಲಿ ಅಂದರೆ 14-15 ರ ಆಸುಪಾಸಿನಲ್ಲಿ ಕಾರ್ಯಕಾರಿಣಿ ನಿಗದಿಯಾಗಬಹುದು ಎನ್ನಲಾಗಿದೆ. ಅಂದು ಆ ಕಾರ್ಯಕಾರಿಣಿಗೆ ಜೆಪಿ ನಡ್ಡಾ ಆಗಮಿಸುತ್ತಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಸಂಪುಟ ಪುನರ್ ರಚನೆ ವಿಚಾರ ಪ್ರಸ್ತಾಪ ಆದ್ರೂ ಚರ್ಚೆಗೆ ಬರೋದಿಲ್ಲ. ಹೀಗಾಗಿ ಜೆಪಿ ನಡ್ಡಾ ರಾಜ್ಯ ಭೇಟಿ ಬಳಿಕ ದೆಹಲಿಗೆ ತೆರಳಿ ಅಲ್ಲಿ ಅಮಿತ್ ಶಾ ಜೊತೆ ಒಂದು ಸುತ್ತಿನ ಚರ್ಚೆ ಮಾಡಿ, ಆಮೇಲೆ ಸಿಎಂ ಬೊಮ್ಮಾಯಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲಾ ಪ್ರಕ್ರಿಯೆ ಏಪ್ರಿಲ್ ಅಂತ್ಯಕ್ಕೆ ಮುಗಿಯುವ ಸಾಧ್ಯತೆ ಇದ್ದು, ಈ ತಿಂಗಳು ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗುವ ಸಾಧ್ಯತೆ ಕಡಿಮೆ ಇದೆ. 

4+4 ಮಾದರಿಯಲ್ಲಿ ಸಂಪುಟ ಪುನರ್ ರಚನೆ ? 
ಸದ್ಯ ಸಿಎಂ ಬೊಮ್ಮಾಯಿ ಸಂಪುಟದಲ್ಲಿ 30 ಸಚಿವರಿದ್ದು , ನಾಲ್ಕು ಸ್ಥಾನ ಖಾಲಿ ಇದೆ. ಈಗ ಆ ನಾಲ್ಕು ಸ್ಥಾನ ಭರ್ತಿ ಮಾಡುವ ಜೊತೆಗೆ, ಹಾಲಿ ಇರುವ ನಾಲ್ವರು ಹಿರಿಯ ಸಚಿವರನ್ನು ಕೈಬಿಟ್ಟು ಒಟ್ಟು ಎಂಟು ಹೊಸಬರಿಗೆ ಮಂತ್ರಿ ಮಾಡಬಹುದು ಎಂಬ ಲೆಕ್ಕಾಚಾರ ಚರ್ಚೆಯಲ್ಲಿ ಇದೆ. ಹಿರಿಯರನ್ನು ಪಕ್ಷದ ಸಂಘಟನೆಗೆ ತೊಡಗಿಸಿಕೊಂಡು ಹೊಸ ಮುಖಗಳಿಗೆ ಅವಕಾಶ ನೀಡುವ ಜೊತೆಗೆ ಪ್ರಾದೇಶಿಕವಾರು, ಯುವಕರನ್ನು ಸೆಳೆಯುವ ನಾಯಕತ್ವ ಗುಣ ಇರುವ ಶಾಸಕರಿಗೆ ಮಂತ್ರಿ ಯೋಗ ಕೂಡಿಬರಬಹುದು ಎಂದು ವಿಶ್ಲೇಶಿಸಲಾಗುತ್ತಿದೆ. ವಿಶೇಷ ಅಂದ್ರೆ ಬಹುತೇಕ ಶಾಸಕರ ಕೂಗು ಒತ್ತಾಯ ಒತ್ತಡ ಕೂಡ ಅದೇ ಆಗಿದೆ. ಆ ಒಂದು ಸೂತ್ರದಡಿ ಕೇಂದ್ರ ನಾಯಕರು ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿದ್ರೆ ಒಂದಿಷ್ಟು ಹಿರಿ ತಲೆಗಳು ಸ್ಥಾನ ಕಳೆದುಕೊಂಡು ಹೊಸಬರು ವಿಧಾನಸೌಧದ ಮೂರನೇ ಮಹಡಿ ಏರೋದು ಫಿಕ್ಸ್ ಎನ್ನಬಹುದು....

Latest Videos
Follow Us:
Download App:
  • android
  • ios