ಬಿಜೆಪಿ ದೇಶಪ್ರೇಮದ ನೆಪದಲ್ಲಿ ದ್ವೇಷ ಬಿತ್ತಿ ಸಾಮರಸ್ಯ ಕದಡುತ್ತಿದೆ:ಬಿ.ಕೆ ಹರಿಪ್ರಸಾದ್‌ ಆರೋಪ

ಬಿಜೆಪಿ ದೇಶಪ್ರೇಮ ಬಿಂಬಿಸುವ ನೆಪದಲ್ಲಿ ದ್ವೇಷ ಬಿತ್ತಿ ಸಾಮರಸ್ಯ ಕದಡುತ್ತಿದೆ. ಅಧಿಕಾರಕ್ಕಾಗಿ ಧರ್ಮಧರ್ಮಗಳ ನಡುವೆ ಅಶಾಂತಿ ಸೃಷ್ಠಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್‌ ಆರೋಪಿಸಿದರು.

BK Hariprasad outraged against BJP at prajadhwani yatre koppa rav

ಕೊಪ್ಪ (ಫೆ.11) : ಬಿಜೆಪಿ ದೇಶಪ್ರೇಮ ಬಿಂಬಿಸುವ ನೆಪದಲ್ಲಿ ದ್ವೇಷ ಬಿತ್ತಿ ಸಾಮರಸ್ಯ ಕದಡುತ್ತಿದೆ. ಅಧಿಕಾರಕ್ಕಾಗಿ ಧರ್ಮಧರ್ಮಗಳ ನಡುವೆ ಅಶಾಂತಿ ಸೃಷ್ಠಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್‌ ಆರೋಪಿಸಿದರು.

ಕಾಂಗ್ರೆಸ್‌ನಿಂದ ಹರಿಹರಪುರ((Hariharapur) ಸಮೀಪದ ಅದ್ದಡದÜಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರಾವಳಿ-ಮಲೆನಾಡು ಪ್ರಜಾಧ್ವನಿ ಯಾತ್ರೆ(Prajadhwani yatre)ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದಾಗ ಜನರ ನಡುವೆ ಸಾಮರಸ್ಯವಿತ್ತು. ಬಿಜೆಪಿ ಅಧಿಕಾರದ ಹಪಾಹಪಿಯಿಂದ ಧರ್ಮ, ಧರ್ಮಗಳ ನಡುವೆ ಕಂದಕ ಸೃಷ್ಠಿಸಿದೆ. ಬಿಜೆಪಿಯವರಿಗೆ ಜನ ಕಳೆದ ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತ ನೀಡಿಲ್ಲ. ಜನಾದೇಶಕ್ಕೆ ವಿರುದ್ಧವಾಗಿ ಅನೈತಿಕ ಸರ್ಕಾರ ಮಾಡಿದ್ದಾರೆ. ಈ ಭಾರಿ ಸೋಲುವ ಭಯದಿಂದ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಈ ಹಿಂದೆ ಮಾಡಿರುವ ಅಭಿವೃದ್ಧಿ ಹಾಗೂ ಜನರಿಗೆ ಮುಂದೆ ನೀಡುವ ಯೋಜನೆಗಳನ್ನು ಪ್ರಜಾಧ್ವನಿ ಮುಖಾಂತರ ಹೇಳುತ್ತಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಬಡವರಿಗೆ ಭೂಮಿ ನೀಡಲಾಯಿತು. 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತರಲಾಯಿತು. ಕಾಂಗ್ರೆಸ್‌ ಸರ್ಕಾರದ ಯೋಜನೆಗಳ ಹೆಸರು ಬದಲಾಯಿಸಿದ್ದು ಬಿಟ್ಟರೆ ಬಿಜೆಪಿ ಯಾವುದೇ ಹೊಸ ಯೋಜನೆಯನ್ನು ತಂದಿಲ್ಲ. ಸರ್ಕಾರದ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿದ್ದಾರೆ ಎಂದು ದೂರಿದರು.

Prajadhwani yatre: ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ: ಹರಿಪ್ರಸಾದ್‌ ವಾಗ್ದಾಳಿ

ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕಗಳೆಂಬ ಬೇರೆ ಬೇರೆ 4 ಪ್ರದೇಶಗಳಿದ್ದು ಪ್ರತೀ ಪ್ರದೇಶಗಳ ಸಮಸ್ಯೆಗಳು ವಿಭಿನ್ನವಾಗಿರುವುದರಿಂದ ಈ ಬಾರಿ ಕಾಂಗ್ರೆಸ್‌ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ರಾಜ್ಯಕ್ಕೆ ಒಂದು ಹಾಗೂ ಕ್ಷೇತ್ರಕ್ಕೆ ಸೀಮಿತ ಒಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ, ಬಂಟ್ಸ್‌ ಅಭಿವೃದ್ಧಿ ನಿಗಮ ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿರುವ ಭಂಡಾರಿ, ವಿಶ್ವಕರ್ಮ, ದೇವಾಡಿಗ, ಕುಲಾಲ, ಶೆಟ್ಟಿಗಾರು ಹಾಗೂ ಮೊದಲಾದ ಸಮುದಾಯಗಳ ನಿಗಮ ಮಂಡಳಿ ತೆರೆದು 200 ಕೋಟಿಯಷ್ಟುಅನುದಾನ ನೀಡುವ ಕಾರ್ಯ ಕಾಂಗ್ರೆಸ್‌ ಮಾಡುತ್ತದೆ ಎಂದ ಅವರು ಕಾಂಗ್ರೆಸ್‌ ನೀಡಿದ ಭರವಸೆಗಳನ್ನು ಈಡೇರಿಸುತ್ತಾ ಬಂದಿದೆ. ಈ ಬಾರಿಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 200 ಯೂನಿಟ್‌ ಉಚಿತ ವಿದ್ಯುತ್‌, ಕುಟುಂಬದ ಯಜಮಾನಿ ಮಹಿಳೆಗೆ ಮಾಸಿಕ 2000 ರು.. ನೀಡುವಿಕೆಯೊಂದಿಗೆ ಪ್ರಣಾಳಿಕೆಯ ಇತರೆ ಭರವಸೆಗಳನ್ನು ಈಡೇರಿಸಲಿದೆ ಎಂದರು.

ಶಾಸಕ ಟಿ.ಡಿ ರಾಜೇಗೌಡ, ಕೆಪಿಸಿಸಿ ಕಿಸಾನ್‌ ಸೆಲ್‌ ಘಟಕದ ಸಚಿನ್‌ ಮೀಗಾ, ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಂಶುಮಂತ್‌, ಕೆಪಿಸಿಸಿ ಸದಸ್ಯರಾದ ಹೆಚ್‌.ಎಂ.ನಟರಾಜ್‌, ಆರ್‌.ಸದಾಶಿವ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಜೊತೆಗಿದ್ದರು.

ಧರ್ಮದ ಹೆಸರನಲ್ಲಿ ಬಿಜೆಪಿ ಸರ್ಕಾರ ರಾಜಕೀಯ: ಬಿ.ಕೆ. ಹರಿಪ್ರಸಾದ್‌

Latest Videos
Follow Us:
Download App:
  • android
  • ios