Asianet Suvarna News Asianet Suvarna News

ಬಿಜೆಪಿಗೆ ಒಲಿದ ಮೈಸೂರು ಮೇಯರ್, ಉಪ ಮೇಯರ್: ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು ಎಂದ ಶಾಸಕ

ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ತಂತ್ರಕ್ಕೆ ಗೆಲುವಾಗಿದೆ. ಇದರಿಂದ ಕಾಂಗ್ರೆಸ್‌ಗೆ ನಿರಾಸೆಯಾಗಿದೆ.
 

bjp wins In mysore municipal corporation Mayor Election rbj
Author
First Published Sep 6, 2022, 1:56 PM IST

ಮೈಸೂರು, (ಸೆಪ್ಟೆಂಬರ್.06): ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಬಿಜೆಪಿಗೆ ಒಲಿದಿದೆ. ಬಿಜೆಪಿಯ ತಂತ್ರದಿಂದ ಉಪಮೇಯರ್ ಸ್ಥಾನವೂ ದಕ್ಕಿದೆ.

ಹೌದು...47 ಮತ ಪಡೆಯುವುದರ ಮೂಲಕ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಆಯ್ಕೆಯಾಗಿದ್ರೆ, ಇನ್ನು ಅದೃಷ್ಟ ರೀತಿಯಲ್ಲಿ ಬಿಜೆಪಿಯ ಜಿ.ರೂಪಾ 45 ಮತ ಪಡೆಯುವುದರೊಂದಿಗೆ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 

ಮೇಯರ್, ಉಪ ಮೇಯರ್ ಚುನಾವಣೆಗೆ ಕದನಕಣ ರಂಗೇರಿತ್ತು. ಕಾಂಗ್ರೆಸ್‌ನಿಂದ (Congress Party) ಮೇಯರ್ ಸ್ಥಾನಕ್ಕೆ ಸಯ್ಯದ್ ಅಸ್ರತ್ ಉಲ್ಲಾ ಹಾಗೂ ಗೋಪಿ, ಜೆಡಿಎಸ್‌ನಿಂದ (JDS) ಕೆ.ವಿ.ಶ್ರೀಧರ್, ಬಿಜೆಪಿಯಿಂದ (BJP) ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್‌ ಹುದ್ದೆಗೆ ಕಾಂಗ್ರೆಸ್‌ನಿಂದ ಶೋಭಾ ಸುನಿಲ್, ಜೆಡಿಎಸ್‌ನಿಂದ ರೇಷ್ಮಾಬಾನು, ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಿದ್ದರು.

Karnataka Politics: ಕಾಂಗ್ರೆಸ್‌ನ ಹಲವರು ಜೆಡಿಎಸ್‌ಗೆ ಸೇರ್ಪಡೆ

ಉಪ ಮೇಯರ್ ಅಭ್ಯರ್ಥಿ ನಾಮಪತ್ರ ಅಸಿಂಧು
ಬಿಜೆಪಿ ತಾನು ಮೇಯರ್ ಪಡೆದುಕೊಂಡು ಜೆಡಿಎಸ್‌ಗೆ  ಉಪಮೇಯರ್​ ಬಿಟ್ಟುಕೊಡುವ ಮಾತುಗಳಾಗಿದ್ದವು.ಆದ್ರೆ, ಉಪಮೇಯರ್ ಸ್ಥಾನಕ್ಕೆ ಅಖಾಡಕ್ಕಿಳಿದಿದ್ದ ಜೆಡಿಎಸ್‌ನ ರೇಷ್ಮಾ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಉಪ ಮೇಯರ್‌ಗೆ ಸ್ಪರ್ಧಿಸಿದ್ದ ರೇಷ್ಮಾ ಭಾನು ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದರು. ಆದ್ರೆ, ನಾಮಪತ್ರ ಸಲ್ಲಿಸುವಾಗ ಬಿಸಿಎ ಸರ್ಟಿಫಿಕೇಟ್ ಸಲ್ಲಿಕೆಯಾಗದ ಕಾರಣ  ಚುನಾವಣಾಧಿಕಾರಿಗಳು ನಾಮಪತ್ರ ಅಸಿಂಧುಗೊಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ  ಅನಿವಾರ್ಯವಾಗಿ ಜೆಡಿಎಸ್‌ ಬಿಜೆಪಿಗೆ ಬೆಂಬಲಿಸಬೇಕಾಯ್ತು. ಅದೃಷ್ಟದಿಂದ ಬಿಜೆಪಿಯ ರೂಪ ಅವರಿಗೆ ಉಪಮೇಯರ್ ಪಟ್ಟ ಒಲಿದುಬಂದಿದೆ.

ಬಿಜೆಪಿ ಜೆಡಿಎಸ್‌ ಸೇರಿ ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು 
ಇನ್ನು ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ರೇಷ್ಮಾ ಅವರ ನಾಮಪತ್ರವನ್ನು ಬೇಕಂತಲೇ ತಿರಸ್ಕೃತ ಮಾಡಿಸಲಾಗಿದೆ. ಅಸಿಂಧು ಆಗಲಿ ಎಂದೇ ಬಿಸಿಎ ನಾಮಪತ್ರ ಲಗತ್ತಿಸದೇ ಬಿಜೆಪಿಯವರು ಉಪಮೇಯರ್‌ ಕಿತ್ತುಕೊಂಡಿದ್ದಾರೆ. ಎಂದು ಕಾಂಗ್ರೆಸ್ ಆರೋಪಿಸಿದೆ. 

ಬಿಜೆಪಿ ಜನತಾದಳ ಸೇರಿ ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು ಎಂದು ಕಾಂಗ್ರೆಸ್ ಸದಸ್ಯರ ಎ.ಆರೀಫ್ ಹುಸೇನ್ ಟೀಕಿಸಿದರು. ಬಿಸಿಎ ಜಾತಿಯಡಿ ಗೆದ್ದಿದ್ದಾರೆ ಎಂದು ಸಮರ್ಥನೆ ನೀಡಲು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮುಂದಾದರು.ಆಗ ತನ್ವೀರ್‌ ಸೇಠ್ ಮಧ್ಯೆ ಪ್ರವೇಶಿಸಿ ಚಾಕೋಲೇಟ್ ತಿಂದಾಯ್ತು ಬಿಡಿ ಎಂದು ಕಿಚಾಯಿಸಿದರು.

ಒಳಗೊಳಗೆ ಬಿಜೆಪಿಗೆ ಜೆಡಿಎಸ್‌ ಬೆಂಬಲಿಸಿ ಉಪಮೇಯರ್ ಸ್ಥಾನ ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಫುಲ್ ಖುಷ್ ಆಗಿದೆ. ಜೆಡಿಎಸ್‌ಗೆ ಉಪಮೇಯರ್ ಸ್ಥಾನ ತಪ್ಪಿಸಿದಕ್ಕೆ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿದೆ. ಶೇಮ್ ಶೇಮ್ ಜೆಡಿಎಸ್ ಎಂದು ಕೂಗುವ ಮೂಲಕ ಕಾಂಗ್ರೆಸ್ ಸದಸ್ಯರು ಸಂಭ್ರಮಿಸಿದರು.

ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಬಿಜೆಪಿ-ಜೆಡಿಎಸ್
  ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಸಲದಂತೆ ಈ ಬಾರಿಯೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂದು ಚರ್ಚೆಗಳು ನಡೆದಿದ್ದವ.ಆದ್ರೆ, ಇದನ್ನು ಬಿಜೆಪಿ ನಿರಾಕರಿಸತ್ತು. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಜೆಡಿಎಸ್‌ ಸಹ ಕೊನೆ ಕ್ಷಣದವರೆಗೆ ಕಾದು ನೋಡಿ ಒಬ್ಬರಿಗೆ ಬೆಂಬಲಿಸಲು ತಯಾರಾಗಿತ್ತು. ಆದ್ರೆ, ಕಾಂಗ್ರೆಸ್‌ಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಆಘಾತ ನೀಡಿದೆ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲೆ ಬಂದ ಬಿಜೆಪಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌  ಶಾಕ್ ಕೊಟ್ಟಿದೆ. ಬಿಜೆಪಿ ಒಳ ತಂತ್ರದೊಂದಿಗೆ ಜೆಡಿಎಸ್‌ನ್ನು ಬುಟ್ಟಿಗೆ ಹಾಕಿಕೊಂಡು ಅಧಿಕಾರದಿಂದ ಕಾಂಗ್ರೆಸ್‌ನ್ನು ದೂರ ಇಡುವಲ್ಲಿ ಯಶಸ್ವಿಯಾಯ್ತು.
 

Follow Us:
Download App:
  • android
  • ios