ಮೂಡುಬಿದಿರೆ, (ನ.07): ಇದೇ ಮೊದಲ ಬಾರಿಗೆ ಮೂಡುಬಿದಿರೆ ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಂದು (ಶನಿವಾರ) ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಶಶಿಧರ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

23 ವಾರ್ಡ್ ಗಳಲ್ಲಿ 11 ಕಾಂಗ್ರೆಸ್ ಹಾಗೂ 12 ಬಿಜೆಪಿ ಪಾಲಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್ ಅವರು ಉಪಸ್ಥಿತರಿದ್ದರಿಂದ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಅವರಿಗೆ ತಲಾ 13 ಮತಗಳು ಲಭಿಸಿವೆ.

ಬಿಜೆಪಿ‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್: ಸಿದ್ದರಾಮಯ್ಯ ಮಹತ್ವದ ಸಭೆ..!

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಿ.ಕೆ.ಥಾಮಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಮತಾ ಅವರಿಗೆ ತಲಾ 11ಮತಗಳು ಲಭಿಸಿವೆ.

ಅಧ್ಯಕ್ಷರಾಗಿ ಅಯ್ಕೆಯಾಗಿರುವ ಪ್ರಸಾದ್ ಕುಮಾರ್ ಸತತ 3ನೇ ಬಾರಿಗೆ ಪುರಸಭಾ ಸದಸ್ಯರಾಗಿರುವ ಅನುಭವಿಯಾಗಿದ್ದರೆ, ಸುಜಾತಾ ಅವರು ಇದೇ ಮೊದಲ ಬಾರಿಗೆ ಪುರಸಭೆಗೆ ಪ್ರವೇಶಿಸಿದ್ದಾರೆ.