ಬೆಂಗಳೂರು (ಸೆ.21):  ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟುಜಯ ಸಾಧಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

‘ಕಾಂಗ್ರೆಸ್‌ನ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರು ತಾವಿಬ್ಬರು ಕಾಂಗ್ರೆಸ್‌ನ ಜೋಡೆತ್ತುಗಳು, ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ. ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಇಬ್ಬರೂ ಈ ರೀತಿ ಹೇಳಿದ್ದಾರೆ. ಈ ಇಬ್ಬರೂ ಎಂದಿಗೂ ಜೋಡಿಗಳಲೇ ಅಲ್ಲ. ‘ಎತ್ತು ಏರಿಗೆಳೀತು, ಕೋಣ ನೀರಿಗೆ ಇಳಿತು’ ಎಂಬ ಗಾದೆ ಮಾತಿನಂತೆ ಒಬ್ಬರು ಎತ್ತು ಮತ್ತೊಬ್ಬರು ಕೋಣ ಆಗಿದ್ದಾರೆ. ಈಗ ಶಿರಾ ಉಪಚುನಾವಣೆಯ ದೃಷ್ಟಿಯಿಂದ ಒಲ್ಲದ ಮನಸ್ಸಿನಿಂದ ಈಗ ಒಟ್ಟಾಗಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.

ಲೋಕಸಭಾ ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಕನ್ನಡದಲ್ಲೇ ಗುಡುಗಿದ ಡಿಕೆ ಸುರೇಶ್ ..

‘ಜಯಚಂದ್ರ ಅವರು ಇಷ್ಟುವರ್ಷ ಆಡಳಿತದಲ್ಲಿದ್ದು ಸಚಿವರಾಗಿದ್ದರು. ಆದರೆ, ಶಿರಾ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಲಿಲ್ಲ. ಸುಳ್ಳು ಹೇಳಿಕೊಂಡು ತಿರುಗಾಡಿದರು. ಆ ಭಾಗದ ರೈತರ ಏಳಿಗೆಗೆ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಅಲ್ಲಿನ ಜನರ ಜೀವನಮಟ್ಟಸುಧಾರಿಸಲು ಏನು ಮಾಡಲಿಲ್ಲ. ಈಗ ಉಪ ಚುನಾವಣೆ ಬಂದಿದೆಯೆಂದು ಈ ರೀತಿಯ ಹಸಿ ಸುಳ್ಳು ಹೇಳಿಕೊಂಡು ಶಿರಾ ಕ್ಷೇತ್ರದ ಜನತೆಯೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಮಾತನ್ನು ಶಿರಾ ಜನತೆ ನಂಬುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನೂರಕ್ಕೆ ನೂರರಷ್ಟುಗೆಲುವು ಸಾಧಿಸಲಿದೆ. ಅಲ್ಲಿನ ಜನತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಶಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಲಿದೆ’ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- ರಾಜಣ್ಣ, ಟಿಬಿಜೆ ಜೋಡೆ​ತ್ತು​ಗಳು ಎಂಬುದು ಹಾಸ್ಯಾ​ಸ್ಪ​ದ