Asianet Suvarna News Asianet Suvarna News

ಸಿಎಂ ನೇತೃತ್ವದಲ್ಲಿ ಜಯ ಖಚಿತ: ಬಿಜೆಪಿ ವಿಶ್ವಾಸ

  • ಹಿಂದೆ ಸಚಿವರಾಗಿ ಹಲವು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಉಸ್ತುವಾರಿ ಹೊತ್ತಿದ್ದ ವೇಳೆ ಗೆಲುವು ಸಾಧಿಸಲು ತಂತ್ರಗಾರಿಕೆ
  • ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು 
BJP Will win in Karnataka By Election snr
Author
Bengaluru, First Published Oct 27, 2021, 8:08 AM IST

 ಬೆಂಗಳೂರು (ಅ.27):  ಹಿಂದೆ ಸಚಿವರಾಗಿ ಹಲವು ವಿಧಾನಸಭಾ (Assembly Election) ಕ್ಷೇತ್ರಗಳ ಉಪಚುನಾವಣೆಗಳ (By Election) ಉಸ್ತುವಾರಿ ಹೊತ್ತಿದ್ದ ವೇಳೆ ಗೆಲುವು ಸಾಧಿಸಲು ತಂತ್ರಗಾರಿಕೆ ಮೂಲಕ ಕಾರಣಕರ್ತರಾಗಿದ್ದ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಇದೀಗ ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ತಂದು ಕೊಡುವುದು ಖಚಿತ ಎಂಬ ವಿಶ್ವಾಸವನ್ನು ಆಡಳಿತಾರೂಢ ಬಿಜೆಪಿ (BJP) ಪಕ್ಷ ಹೊಂದಿದೆ.

ಕಳೆದ ಹಲವು ವರ್ಷಗಳಲ್ಲಿ ಬೊಮ್ಮಾಯಿ ಅವರು ಸಚಿವರಾಗಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು, ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣ, ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು ಮತ್ತು ಬೀದರ್‌ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಜವಾಬ್ದಾರಿಯನ್ನು ಪಕ್ಷದ ಇತರ ನಾಯಕರ ಜೊತೆ ಹೊತ್ತಿದ್ದರು. ಆ ಉಪಚುನಾವಣೆಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಸಿಂದಗಿಯಲ್ಲಿ ಪ್ರಬಲ ಸಮುದಾಯಗಳ ಓಲೈಕೆಗೆ ಬಿಜೆಪಿ- ಕಾಂಗ್ರೆಸ್ ಕಸರತ್ತು..!

ರಾಜ್ಯದ ಸಚಿವರಾಗಿ ಉಪಚುನಾವಣೆಗಳನ್ನು ಗೆಲ್ಲುತ್ತಿದ್ದ ಬೊಮ್ಮಾಯಿ ಅವರು ಈಗ ಮುಖ್ಯಮಂತ್ರಿಯಾಗಿ ಉಪಚುನಾವಣೆ ಗೆಲ್ಲಲು ಎಲ್ಲ ತಂತ್ರಗಳನ್ನು ಹೆಣೆದಿದ್ದಾರೆ. ಚುನಾವಣೆಗಳಲ್ಲಿ ಹಿಂದುಳಿದ, ತುಳಿತಕ್ಕೊಳಗಾದ ಹಾಗೂ ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವ ಸಣ್ಣ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಅವರ ಬೇಡಿಕೆಗಳನ್ನು ಆಲಿಸುತ್ತಾರೆ. ಆ ಮೂಲಕ ಚುನಾವಣೆ ರಣತಂತ್ರವನ್ನು ಹೆಣೆಯುತ್ತಾರೆ. ಈ ಹಿನ್ನೆಲೆಯಲ್ಲಿ ಹಾನಗಲ್‌ ಮತ್ತು ಸಿಂದಗಿ (Sindagi) ವಿಧಾನಸಭಾ ಕ್ಷೇತ್ರಗಳಲ್ಲಿ ತಳವಾರ, ಭಜಂತ್ರಿ , ಭೋವಿ, ಮರಾಠ, ಉಪ್ಪಾರ ಸೇರಿದಂತೆ ಹತ್ತು ಹಲವು ಸಮುದಾಯಗಳ ಜನರ ಜೊತೆಗೆ ಈಗಾಗಲೇ ಅವರು ಸಭೆಗಳನ್ನು ನಡೆಸಿದ್ದಾರೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ಗುಪ್ತಚರ ವರದಿ ಪ್ರಕಾರ ಕೇಸರಿ ಅಲೆ:  ಈ ನಡುವೆ ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ ಉಪಚುನಾವಣೆಗೆ (By Election) ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಆಂತರಿಕ ವರದಿಯ ತಿರುಳು ಬಿಜೆಪಿ (BJP) ಹೈಕಮಾಂಡ್‌ ತಲುಪಿದೆಯಂತೆ. ಉಭಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲವು ಖಚಿತ ಎಂಬ ಮಾತು ರಾಜ್ಯ ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಅಶೋಕ್ ಪ್ಲ್ಯಾನ್ ಸಕ್ಸಸ್: ಅಧಿಕಾರದಿಂದ ಕಾಂಗ್ರೆಸ್‌ನ್ನು ದೂರ ಇಟ್ಟ ಜೆಡಿಎಸ್, ಬಿಜೆಪಿ

ಉಭಯ ಕ್ಷೇತ್ರಗಳಲ್ಲೂ ಉಪಚುನಾವಣೆಯ ಆರಂಭದ ಹಂತದಲ್ಲಿದ್ದ ಪರಿಸ್ಥಿತಿ ಈಗಿಲ್ಲ. ಆರಂಭದಲ್ಲಿ ಬಿಜೆಪಿಗೆ ತುಸು ಕಷ್ಟಎಂಬಂತಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರು ಭರ್ಜರಿ ಪ್ರಚಾರ ಕೈಗೊಂಡ ಬಳಿಕ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಚಿತ್ರಣವೇ ಬದಲಾಗಿದೆ. ಆನೆ ಬಲ ಬಂದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿರುವುದು ಪಕ್ಷಕ್ಕೆ ಗೆಲುವು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿ ಮುಖಂಡರು ಹರ್ಷದಿಂದ ಹೇಳುತ್ತಿದ್ದಾರೆ.

Follow Us:
Download App:
  • android
  • ios