'2 ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಒಪ್ಪಿಕೊಂಡ ಡಿಕೆಶಿ'

  • ಸದ್ಯ ರಾಜ್ಯದ ಎರಡು ಕ್ಷೇತ್ರಗಳಾದ ಸಿಂದಗಿ ಹಾಗು ಹಾನಗಲ್ ಕ್ಷೇತ್ರಗಳಿಗೆ ಉಪ ಚುನಾವಣೆ 
  • ಉಪ ಚುನಾವಣೆಗಳು 2023ರ ಚುನಾವಣೆಯ ದಿಕ್ಸೂಚಿ ಆಗಲಿವೆ
BJP will win in 2 By Election constituency Says Minister Sunil kumar snr

ದಾವಣಗೆರೆ (ಅ.12): ಸದ್ಯ ರಾಜ್ಯದ ಎರಡು ಕ್ಷೇತ್ರಗಳಾದ ಸಿಂದಗಿ (sindagi) ಹಾಗು ಹಾನಗಲ್ (Hanagal) ಕ್ಷೇತ್ರಗಳಿಗೆ ಉಪ ಚುನಾವಣೆ (By Election) ನಡೆಯುತ್ತಿದ್ದು, ಈ ಉಪ ಚುನಾವಣೆಗಳು 2023ರ ಚುನಾವಣೆಯ ದಿಕ್ಸೂಚಿ ಆಗಲಿವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ (Sunil Kumar) ಹೇಳಿದರು. 

ದಾವಣಗೆರೆಯಲ್ಲಿ (Davanagere) ಇಂದು ಮಾತನಾಡಿದ ಸಚಿವ ಸುನೀಲ್ ಕುಮಾರ್ ಉಪ ಚುನಾವಣೆಗಳೇ ಮುಂದಿನ ವಿಧಾನಸಭಾ ಚುನಾವಣೆಯ (Assembly Election) ದಿಕ್ಸೂಚಿ. ಆದರೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK shivakumar) ಇದನ್ನು ದಿಕ್ಸೂಚಿ ಎಂದು ಒಪ್ಪಿಕೊಳ್ಳದೆ ತಮ್ಮ ಸೋಲನ್ನು ಮೊದಲೇ ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ (bsavaraj Bommai) ನೇತೃತ್ವದಲ್ಲಿ ಎರಡೂ ಉಪಚುನಾವಣೆ ಗೆಲ್ಲುತ್ತೇವೆ. ಆದರೆ ಕಾಂಗ್ರೆಸ್ (Congress) ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯದಲ್ಲಿ  ಈಗಾಗಲೇ ಸೋಲು ಒಪ್ಪಿಕೊಂಡಿದೆ. ಅದೇ ಕಾರಣಕ್ಕೆ ಉಪಚುನಾವಣೆಗಳನ್ನು ದಿಕ್ಸೂಚಿ ಎಂದು ಒಪ್ಪಕೊಂಡಿಲ್ಲ  ಎಂದು ಹೇಳಿದರು.  

ಕಲ್ಲಿದ್ದಿಲ ಕೊರತೆ ಬಗ್ಗೆ ಪ್ರತಿಕ್ರಿಯೆ : ರಾಜ್ಯದಲ್ಲಿ ಕಲ್ಲಿದ್ದಲಿನ (Coal) ಕೊರತೆ ಉಪಾಪೋಹಗಳು ಸತ್ಯವಲ್ಲ. ರಾಯಚೂರು (Raichur), ಬಳ್ಳಾರಿ (Bellary), ಘಟಕಗಳಿಗೆ ಯಾವುದೇ ತೊಂದರೆ ಇಲ್ಲ.  ಕೇಂದ್ರ ಸರ್ಕಾರ ನಿತ್ಯ 8 ರೇಕ್ ಕಳುಹಿಸುತ್ತಿತ್ತು.  ಹೆಚ್ಚುವರಿ ಎರಡು ರೇಕ್‌ಗೆ ಬೇಡಿಕೆ ಇಟ್ಟಿದ್ದೆವು. ಕೇಂದ್ರ ಅದಕ್ಕೆ ಸ್ಪಂದಿಸುತ್ತಿದೆ. ಕಲ್ಲಿದ್ದಿಲಿನ‌ ಕೊರತೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.

ಒಡಿಶಾದಿಂದ ಕಲ್ಲಿದ್ದಲು

 

ರಾಜ್ಯದ ಕಲ್ಲಿದ್ದಲು (Coal) ಸಮಸ್ಯೆ ಬಗ್ಗೆ ಕೇಂದ್ರದ ಗಣಿ ಸಚಿವ ಪ್ರಹ್ಲಾದ ಜೋಶಿ (prahlad Joshi) ಅವರ ಜೊತೆ ಚರ್ಚೆ ನಡೆಸಿದ್ದೇವೆ. ಒಟ್ಟು 14 ರೇಕ್‌ ಕಲ್ಲಿದ್ದಲು ಕೇಳಿದ್ದೇವೆ. ಈಗಾಗಲೇ ಒಡಿಶಾದಿಂದ (odisha) 2 ರೇಕ್‌ ಕಲ್ಲಿದ್ದಲು ಹೊರಟಿದ್ದು, ಸಕಾಲದಲ್ಲಿ ರಾಜ್ಯಕ್ಕೆ ತಲುಪಲಿದೆ. ಹೀಗಾಗಿ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ನಿರ್ಮಾಣವಾಗುವುದಿಲ್ಲ ಎಂದು ಇಂಧನ ಸಚಿವ ಸುನೀಲ್‌ಕುಮಾರ್‌ (Sunil Kumar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮಂಗಳವಾರದೊಳಗೆ ಒಂದು ರೇಕ್‌ ಮತ್ತು ಬುಧವಾರ ಇನ್ನೊಂದು ರೇಕ್‌ ಕಲ್ಲಿದ್ದಲು(Coal) ಆಗಮಿಸಲಿದ್ದು, ಕಲ್ಲಿದ್ದಲಿನ ಕೊರತೆಯ ಆತಂಕ ದೂರವಾಗಿದೆ ಎಂದರು.

Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್‌ ಕಟ್‌ ಆರಂಭ!

ಇಡೀ ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಕೊರತೆ ಆಗಿರುವುದು ಗಮನಕ್ಕೆ ಬಂದಿದೆ. ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲು ತಡವಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗಣಿ ಸಚಿವ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸಚಿವರ ಸಕಾಲಿಕ ಕ್ರಮಗಳಿಂದ ಆತಂಕ ದೂರವಾಗಿದೆ ಎಂದು ತಿಳಿಸಿದರು.

ನವರಾತ್ರಿಯ (Navratri) ಸಂದರ್ಭದಲ್ಲಿ ದೀಪಾಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios