ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ದೇಶವನ್ನೇ ಕಳೆದುಕೊಳ್ಳಲಿದೆ: ಸಿ.ಟಿ.ರವಿ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರಿಂದ ಕೇವಲ ಅಧಿಕಾರವನ್ನಷ್ಟೇ ಕಳೆದುಕೊಂಡಿದ್ದೇವೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ದೇಶವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

BJP will lose the country if it loses the Lok Sabha elections Says CT Ravi gvd

ಉಡುಪಿ (ಜೂ.23): ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರಿಂದ ಕೇವಲ ಅಧಿಕಾರವನ್ನಷ್ಟೇ ಕಳೆದುಕೊಂಡಿದ್ದೇವೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ದೇಶವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಅವರು ಗುರುವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡುತಿದ್ದರು. ದೇಶವನ್ನು ಹರಿದುಹಂಚಲು ತುಕ್ಡೆ ಗ್ಯಾಂಗ್‌ ಸನ್ನದ್ಧವಾಗಿದೆ, ಬಿಜೆಪಿಯನ್ನು ಸೋಲಿಸುವುದಕ್ಕೆ ಟೂಲ್‌ ಕಿಟ್‌ ಸಿದ್ಧವಾಗಿದೆ. ಅದರ ಭಾಗವಾಗಿಯೇ ರಾಹುಲ್‌ ಗಾಂಧಿ ವಿದೇಶಗಳಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಎಂದವರು ಎಚ್ಚರಿಸಿದರು.

ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಂದ ಸುಧಾರಣೆಗಳ ಫಲವನ್ನು ಉಣ್ಣುವ ಅಮೃತ ಕಾಲಘಟ್ಟದಲ್ಲೀಗ ದೇಶವಿದೆ, ಭಾರತ ವಿಶ್ವಗುರುವಾಗುತ್ತ, ಆತ್ಮನಿರ್ಭರ ದೇಶವಾಗುವತ್ತ ಸಾಗುತ್ತಿದೆ. ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ, ದೇಶವಿರೋಧಿ ಷಡ್ಯಂತ್ರಗಳಿಗೆ ಉತ್ತರ ನೀಡಬೇಕು ಎಂದರು. ಸಮಾನತೆ ಬೇಡದಿದ್ದರೆ ದೇಶ ಬಿಟ್ಟು ಹೋಗಿ: ಮೋದಿ ನೀಡಿದ ಇತರೆಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಆದರೆ ಸಮಾನ ನಾಗರಿಕ ಸಂಹಿತೆಯ ಭರವಸೆ ಉಳಿದುಕೊಂಡಿದೆ ಎಂದ ಸಿ.ಟಿ.ರವಿ, ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಬೇಡ ಎಂದವರು ದೇಶ ಬಿಟ್ಟು ಹೋಗಲಿ, ಸಮಾನತೆ ಬೇಡ ಎಂದು ಹೇಳುವವರಿಗೆ 1947ರಲ್ಲಿಯೇ ಪ್ರತ್ಯೇಕ ರಾಷ್ಟ್ರವನ್ನು ಕೊಡಲಾಗಿದೆ ಎಂದರು.

ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ ಅಷ್ಟು ಸಾಕು: ಎಚ್‌ಡಿಕೆ ಅಕ್ಕಿ ಹೇಳಿಕೆಗೆ ಡಿಕೆಶಿ ತಿರುಗೇಟು

ರಾಜ್ಯದಲ್ಲಿ ಮಾಯಾಯುದ್ಧದ ಜಾಲದಲ್ಲಿ ಪ್ರಜಾಪ್ರಭುತ್ವ ಸಿಲುಕಿದೆ, ತಾತ್ಕಾಲಿಕವಾಗಿ, ಮೋಸದಿಂದ, ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ ಗ್ಯಾರಂಟಿಗಳನ್ನು ನೀಡಿ ಗೆದ್ದಿದೆ. ಈ ಮಾಯಾಜಾಲದಿಂದ ಹೊರಗೆ ಬರಬೇಕಾದರೆ ಉಡುಪಿಯಲ್ಲಿ ಐದೂ ಶಾಸಕರನ್ನು ಗೆಲ್ಲಿಸಿದ ಕಾರ್ಯಕರ್ತರಂತೆ ಎಲ್ಲೆಡೆ ಕೆಲಸ ಮಾಡಬೇಕಾಗಿದೆ ಎಂದವರು ಕರೆ ನೀಡಿದರು. ಕೊಟ್ಟಮಾತಿಗೆ ತಪ್ಪಿ ನಡೆದರೇ ಮೆಚ್ಚನಾ ಪರಿಮಾತ್ಮನು ಎಂಬ ಪುಣ್ಯಕೋಟಿಯ ನಾಡಿದು, ಅಂತಹ ನಾಡಿನಲ್ಲಿ ಕಾಂಗ್ರೆಸ್‌ ಚುನಾವಣೆಗೆ ಮೊದಲು ನೀಡಿದ ಮಾತಿನಂತೆ ನಡೆಯಿರಿ ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ ಮತ್ತು ಪ್ರಮೋದ್‌ ಮಧ್ವರಾಜ್‌ ಮಾತನಾಡಿದರು. ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶಪಾಲ್‌ ಸುವರ್ಣ, ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ, ರಘುಪತಿ ಭಟ್‌, ಪಕ್ಷದ ನಾಯಕರಾದ ಉದಯಕುಮಾರ್‌ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಶಿಲ್ಪಾ ಜಿ. ಸುವರ್ಣ, ಕೇಶವ ಪ್ರಸಾದ್‌ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ಶೆಟ್ಟಿಕುತ್ಯಾರು ಸ್ವಾಗತಿಸಿದರು. ಸದಾನಂದ ಉಪ್ಪಿನಕುದ್ರು ಮತ್ತು ಮನೋಹರ ಕಲ್ಮಾಡಿ ಕಾರ್ಯಕ್ರಮ ಸಂಯೋಜಿಸಿದರು.

ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬೊಮ್ಮಾಯಿ

ಯಾರಿಗಾಗಿ ಪಠ್ಯಪುಸ್ತಕ ಪರಿಷ್ಕರಣೆ: ಪಠ್ಯಪುಸ್ಕಕಗಳ ಪರಿಷ್ಕರಣೆಗೆ ಶಾಲೆಗಳಿಂದ, ಶಿಕ್ಷಕರಿಂದ, ವಿದ್ಯಾರ್ಥಿಗಳಿಂದ, ಪೋಷಕರಿಂದ ಅಥವಾ ಸಮಾಜದ ಯಾರಿಂದಲೂ ಬೇಡಿಕೆ ಇರಲಿಲ್ಲ. ಆದರೆ ಕೆಲವೇ ಎಡಪಂಥೀಯರ ಕೈಗೊಂಬೆಯಾಗಿ ಸಿದ್ದರಾಮಯ್ಯ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಬಸ್‌ಗಳಲ್ಲಿ ಓಡಾಡುವವರಿಗೆ ಉಚಿತ ಪ್ರಯಾಣ ನೀಡಿದಂತೆ ಖಾಸಗಿ ಬಸ್‌ಗಳಲ್ಲಿ ಓಡಾಡುವವರಿಗೂ ಸರ್ಕಾರ ಉಚಿತ ಪ್ರಯಾಣ ನೀಡಬೇಕು. ಈ ಯೋಜನೆಯಿಂದ ನಷ್ಟಕ್ಕೊಳಗಾದ ಆಟೋ ಚಾಲಕರ ನಷ್ಟವನ್ನೂ ಭರಿಸಬೇಕು ಎಂದವರು ಆಗ್ರಹಿಸಿದರು.

Latest Videos
Follow Us:
Download App:
  • android
  • ios