ರಾಜ್ಯ ರಾಜಕೀಯದ ಅತಿದೊಡ್ಡ ಸುದ್ದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬ್ರೇಕ್ ಮಾಡಿದೆ. ರಾಜ್ಯದ ದೊಡ್ಮನೆಗೆ ಸಂಬಂಧಪಟ್ಟಂತ ರಾಜಕೀಯ ಸುದ್ದಿ ಇದಾಗಿದೆ.
ಬೆಂಗಳೂರು (ಫೆ.22): ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದ ಮಹಾ EXCLUSIVE ಸುದ್ದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬ್ರೇಕ್ ಮಾಡಿದೆ. ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಸಂಬಂಧದ ಅತಿದೊಡ್ಡ ಸುದ್ದಿ ಇದಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಹಿಂದೆಂದೂ ಇಲ್ಲದ ದೊಡ್ಡ ಸುದ್ದಿಯನ್ನು ಬ್ರೇಕ್ ಮಾಡಿದೆ. ರಾಜ್ಯ ಸಿನಿರಂಗದ ಅತಿದೊಡ್ಡ ಕುಟುಂಬವಾದ ದೊಡ್ಮನೆಯ ಅಭ್ಯರ್ಥಿಯನ್ನು ಬಿಜೆಪಿ ರಾಜಕೀಯಕ್ಕೆ ಇಳಿಸಲು ಮುಂದಾಗಿತ್ತು. ಹೌದು, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ರಾಜ್ಯಸಭೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ. ರಾಜ್ಯ ಬಿಜೆಪಿಯಿಂದ ಅಶ್ವಿನಿ ಪುನೀತ್ಗೆ ಟಿಕೆಟ್ ನೀಡುವ ಪ್ರಸ್ತಾಪ ಮಾಡಲಾಗಿತ್ತು. ರಾಜ್ಯ ಬಿಜೆಪಿಯ ಪ್ರಸ್ತಾಪವನ್ನು ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿತ್ತು.
ಕರ್ನಾಟಕದಿಂದ ಈ ಬಾರಿ ಒಬಿಸಿ ವರ್ಗಕ್ಕೆ ರಾಜ್ಯಸಭಾ ಸ್ಥಾನ ಎಂದು ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿತ್ತು. ಅದರೊಂದಿಗೆ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡುವಂತೆ ಸೂಚನೆ ನೀಡಿತ್ತು. ಈ ಹಂತದಲ್ಲಿ ರಾಜ್ಯ ಬಿಜೆಪಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿತ್ತು ಎನ್ನಲಾಗಿದೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನಿ ಹೆಸರನ್ನು ರಾಜ್ಯ ಬಿಜೆಪಿ ತಿಳಿಸಿತ್ತು. ಇದನ್ನು ಗಮನಿಸಿದ ಹೈಕಮಾಂಡ್ ಇದು ಒಳ್ಳೆಯ ಆಯ್ಕೆ ಎಂದಿತ್ತಲ್ಲದೆ, ಅದಕ್ಕೂ ಮುನ್ನ ಅಶ್ವಿನಿ ಅವರು ಒಪ್ಪುತ್ತಾರಾ ಎಂಬುದನ್ನ ತಿಳಿಯಿರಿ ಎಂದು ಹೇಳಿತ್ತು.
ಹೈಕಮಾಂಡ್ ಸೂಚನೆ ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ರಾಜ್ಯ ಬಿಜೆಪಿ ಸಂಪರ್ಕ ಮಾಡಿತ್ತು. ಈ ಹಂತದಲ್ಲಿ ಬಿಜೆಪಿ ನಾಯಕರ ಪ್ರಸ್ತಾಪವನ್ನಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರಾಕರಿಸಿದ್ದಾರೆ. ರಾಜಕೀಯದಿಂದ ನಮ್ಮ ಕುಟುಂಬ ಮೊದಲಿನಿಂದಲೂ ದೂರ ಉಳಿದುಕೊಂಡು ಬಂದಿದೆ ಎಂದು ಅವರಿಗೆ ತಿಳಿಸಿದ್ದಾರೆ. ಅಶ್ವಿನಿ ಪುನೀತ್ ನಿರಾಕರಣೆ ಬಳಿಕ ನಾರಾಯಣ ಬಾಂಢಗೆಗೆ ರಾಜ್ಯಸಭಾ ಟಿಕೆಟ್ ಸಿಕ್ಕಿದೆ. ಮರಾಠ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಯಿತ್ತಾದರೂ, ಸಮರ್ಥ ಅಭ್ಯರ್ಥಿ ಸಿಕ್ಕಿರಲಿಲ್ಲ. ಇದರಿಂದಾಗಿ ಪಾಟೇಗಾರ ಸಮುದಾಯದ ನಾರಾಯಣ ಬಾಂಢಗೆಗೆ ಟಿಕೆಟ್ ಫೈನಲ್ ಆಗಿತ್ತು.
ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
ಏನಂದ್ರು ದೊಡ್ಮನೆ ಸೊಸೆ: ರಾಜ್ಯ ಬಿಜೆಪಿಯಿಂದ ಟಿಕೆಟ್ ನೀಡುವ ಪ್ರಸ್ತಾಪ ಬಂದಾಗ ಈ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಮ್ಮ ಕುಟುಂಬ ಮೊದಲಿನಿಂದಲೂ ರಾಜಕೀಯದಲ್ಲಿಲ್ಲ. ಹೀಗಾಗಿ ನಾನೂ ಕೂಡ ಇರೋದು ಸರಿಯಾಗೋದಿಲ್ಲ ಎಂದಿದ್ದಾರೆ. ಆ ಮೂಲಕ ಮಾವ ಡಾ. ರಾಜ್‌ಕುಮಾರ್ ಅವರ ದಾರಿಯಲ್ಲೇ ಅವರು ಮುನ್ನಡೆದಿದ್ದಾರೆ. ಡಾ. ರಾಜ್‌ಕುಮಾರ್ ಅವರಿಗೆ ಚುನಾವಣೆ ಸ್ಪರ್ಧೆ ಮಾಡುವಂತೆ ರಾಜಕೀಯ ಪಕ್ಷದಿಂದ ಸಾಕಷ್ಟು ಬಾರಿ ಆಫರ್ ನೀಡಿದ್ದರೂ, ಅದನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು.
ರಾಜ್ಯದ ಅತಿದೊಡ್ಡ ಪುನೀತ್ ಪ್ರತಿಮೆ ಬಳ್ಳಾರಿಯಲ್ಲಿ ಅನಾವರಣ: ರಾಜ್ ಕುಮಾರ್ ಕುಟುಂಬಸ್ಥರು ಭಾಗಿ
