ತುಮಕೂರು(ಸೆ.20): ಶಿರಾ ಶಾಸಕ ಸತ್ಯನಾರಾಯಣ್ ಸಾವಿನಿಂದ ತೆರವಾದ ಶಿರಾ ವಿಧಾನಸಭಾ ಉಪಚುನಾವಣೆ ಚುನಾವಣೆ ಘೋಷಣೆಗೂ ಮುನ್ನವೇ ರಂಗೇರತೊಡಗಿದೆ. 

ಮೂರು ಪಕ್ಷಗಳೂ ಕೂಡ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದು, ಈಗಾಗಲೇ ಕಾಂಗ್ರೆಸ್‌, ಟಿ.ಬಿ ಜಯಚಂದ್ರ ಅವರನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅಲ್ಲದೇ ಶಿರಾ ಬೈ ಎಲೆಕ್ಷನ್‌ ಉಸ್ತುವಾರಿಯನ್ನು ಡಾ.ಜಿ.ಪರಮೇಶ್ವರ್‌ಗೆ ನೀಡಲಾಗಿದೆ.

ರಂಗೇರಿದ ಶಿರಾ ಬೈ ಎಲೆಕ್ಷನ್‌: ಅಖಾಡಕ್ಕಿಳಿಯಲು ಜೋಡೆತ್ತು ರೆಡಿ..!

 ಜೆಡಿಎಸ್‌ ಸಹ ದಿವಂಗತ ಸತ್ಯನಾರಾಯಣ್ ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಈಗಾಗಲೇ 2 ಹಂತದ ಮಾತುಕತೆಗಳು ಮುಗಿದಿವೆ. ಇನ್ನು ಆಡಳಿತರೂಢ ಪಕ್ಷ ಬಿಜೆಪಿ ಸಹ ತೆರೆಮರೆಯಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.

ಶಿರಾ ಅಖಾಡಕ್ಕೆ ವಿಜಯೇಂದ್ರ
ಹೌದು... ರಾಜ್ಯ ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಶಿರಾ ಬೈ ಎಲೆಕ್ಷನ್ ಅಖಾಡಕ್ಕಳಿಯಲು ಸಜ್ಜಾಗಿದ್ದಾರೆ. 

ಶಿರಾ ಬೈ ಎಲೆಕ್ಷನ್‌ಗೆ ಕಾಂಗ್ರೆಸ್ ರಣಕಹಳೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಉಸ್ತುವಾರಿ ನೇಮಕ

ಇದಕ್ಕೆ ಪೂರಕವೆಂಬಂತೆ ನಾಳೆ ಅಂದ್ರೆ ಸೋಮವಾರ ಶಿರಾಕ್ಕೆ ಭೇಟಿ ನೀಡಲಿದ್ದು, ನಗರದ ಶಕ್ತಿ ಕೇಂದ್ರದಲ್ಲಿ ಮುಖಂಡ ಸಭೆ ನಡೆಸಲಿದ್ದು, ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಕುರಿತು ಚರ್ಚೆ ನಡೆಸಲಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಬೈ ಎಲೆಕ್ಷನ್‌ ಮಾದರಿಯಲ್ಲಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸಲು ವಿಜಯೇಂದ್ರ ದಾಪುಗಾಲು ಇಡುತ್ತಿದ್ದಾರೆ.   

ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ, ಹಾವು ಮುಂಗಸಿಯಂತಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಒಂದಾಗಿದ್ದಾರೆ. ಇಂದು (ಸ್ವತಃ  ಒಂದೇ ಪಕ್ಷದ ಬದ್ದವೈರಿಗಳ ಸಮಾಗಮ ಮೂಲಕ ಜಯಚಂದ್ರಗೆ ಇದ್ದ ದೊಡ್ಡದೊಂದು ತೊಡಕು ಶಮನವಾದಂತಾಗಿದೆ. ಅದರಲ್ಲೂ ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಬಳಿಕ ಡಿಕೆ ಶಿವಕುಮಾರ್‌ಗೆ ಈ ಬೈ ಎಲೆಕ್ಷನ್ ಮೊದಲ ಪರೀಕ್ಷೆ ಎದುರಾಗಿದೆ.