ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ: ಬಿ.ವೈ.ವಿಜಯೇಂದ್ರ
ಶಾಸಕ ಬಸನಗೌಡ ಯತ್ನಾಳ ಆದಿಯಾಗಿ ಯಾರೇ ಇರಬಹುದು, ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಯಾರಲ್ಲಿ ಆದರೂ ಸಣ್ಣಪುಟ್ಟ ಏನೇ ಸಮಸ್ಯೆ ಇದ್ದರೂ ಕರೆದು ಮಾತನಾಡುವಂತೆ ವರಿಷ್ಠರಿಗೆ ಮಾತನಾಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಾಗಲಕೋಟೆ (ಜ.01): ಶಾಸಕ ಬಸನಗೌಡ ಯತ್ನಾಳ ಆದಿಯಾಗಿ ಯಾರೇ ಇರಬಹುದು, ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಯಾರಲ್ಲಿ ಆದರೂ ಸಣ್ಣಪುಟ್ಟ ಏನೇ ಸಮಸ್ಯೆ ಇದ್ದರೂ ಕರೆದು ಮಾತನಾಡುವಂತೆ ವರಿಷ್ಠರಿಗೆ ಮಾತನಾಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ವಿರುದ್ಧ ಕ್ರಮ ತೆಗೆದುಕೊಳ್ಳೋದು ವಿಜಯೇಂದ್ರ ಅಲ್ಲ, ಬದಲಾಗಿ ಕೇಂದ್ರದ ವರಿಷ್ಠರು. ಯತ್ನಾಳ ವಿರುದ್ಧ ಕ್ರಮಕೈಗೊಳ್ಳುವ ವಿಚಾರದಲ್ಲಿ ನೀವೇ ಹೇಳಬೇಕು. ಈ ದಿಕ್ಕಿನಲ್ಲಿ ನಾವು ಯೋಚನೆ ಮಾಡಿಲ್ಲ. ನೀವೇನಾದರೂ ಯೋಚನೆ ಮಾಡಿದ್ದರೆ ಹೇಳಬೇಕು ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ವಿಜಯೇಂದ್ರ, ಕ್ರಮ ಸಂಬಂಧ ಕಾರ್ಯಕಾರಣಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಸತ್ಯ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕು: ಸಂಸದ ಮುನಿಸ್ವಾಮಿ
ಲೋಕಸಭೆ ಚುನಾವಣೆ ನಮ್ಮ ಮುಂದಿರುವ ಗುರಿ. ಪುಣ್ಯಾತ್ಮ ಮೋದಿ ಅವರು ತಪಸ್ಸಿನ ರೀತಿಯಲ್ಲಿ ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಎಲ್ಲ ಸಮಾಜಗಳಿಗೆ ಕಾರ್ಯಕ್ರಮ ಕೊಟ್ಟಿದ್ದಾರೆ. ಮೋದಿ ಅವರ ಅಭಿವೃದ್ಧಿ ತಪಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ ಎಲ್ಲರೂ ಕೈ ಜೋಡಿಸಿದ್ದಾರೆ. ಅವರು ಸಹ ಕೈ ಜೋಡಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಅಪಸ್ವರ ಎತ್ತದದವರ ಕುರಿತು ವಿಜಯೇಂದ್ರ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರವೇ ಇಲ್ಲ: ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಬರಗಾಲ ಇದೆ. ರೈತರ ಸಂಕಷ್ಟ ಇದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ಸರ್ಕಾರಕ್ಕೂ ಬರಗಾಲಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಇದೆ. ಮಂತ್ರಿಗಳ ಹೇಳಿಕೆಗಳು ಉದ್ಧಟತನದಿಂದ ಕೂಡಿವೆ. ಕೈ ಶಾಸಕರು ಸಹ ತಲೆ ಎತ್ತಿ ಓಡಾಡಲು ಆಗ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಅನುದಾನ ಇಲ್ಲ. ಆದರೆ, ಸಿಎಂ ಅಲ್ಪಸಂಖ್ಯಾತರಿಗೆ ನೂರಾರು ಕೋಟಿ ಬಿಡುಗಡೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಗ್ಯಾರಂಟಿ ಬೇಕು: ರಾಜ್ಯದಲ್ಲಿ ರೈತರ ಪರಿಸ್ಥಿತಿ ಅರಿವಾಗುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಹೊಸ ಯೋಜನೆಗಳನ್ನೇ ಹಾಕಿಲ್ಲ. ಸಿಎಂ ತಮ್ಮ ಭ್ರಮೆಯಲ್ಲಿದ್ದಾರೆ. ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ. ಗ್ಯಾರಂಟಿಗಳು ಸ್ವತಃ ಸಿಎಂಗೆ ನುಂಗಲಾರದ ತುತ್ತಾಗಿವೆ. ಗ್ಯಾರಂಟಿ ಭ್ರಮೆಯಲ್ಲಿರೋ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡ್ತಾರೆ ಎಂದು ಹೇಳಿದರು.
ಕೈ ಶಾಸಕರು ತಲೆ ಎತ್ತಿ ಓಡಾಡದ ಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲದಂತಾಗಿದೆ. ಇಂತಹ ಬರ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ನೀಡುತ್ತಾರೆ ಅಂತ ಅಂದುಕೊಳ್ಳಲಾಗಿತ್ತು. ಆದರೆ, ಅದು ಯಾವುದೇ ಆಗಲಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ತಲೆ ಎತ್ತಿ ಓಡಾಡುದ ಪರಿಸ್ಥಿತಿ ಇದೆ. ಇವರೆಗೂ ಅಭಿವೃದ್ಧಿಗೆ ಒಂದು ರುಪಾಯಿ ಅನುದಾನ ನೀಡಿಲ್ಲ. ರಾಜ್ಯದಲ್ಲಿ ಸರ್ಕಾರ ಬರೋಕೆ ಸ್ಪಂದನೆ ಮಾಡಿದ್ದಾರೆ.
ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್
ಅಲ್ಲ ಸಂಖ್ಯಾತರಿಗೆ ನಿಮ್ಮ ಆದ್ಯತೆಗಳೇನು? ರೈತರು, ಬಡವರು, ಅಭಿವೃದ್ಧಿ ಕೆಲಸಗಳು ಆದ್ಯತೆ ಅಲ್ವಾ? ಇವರೆಗೂ ಒಂದೂ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನೋಡಿ ಬಿಜೆಪಿಗೆ ಗಾಬರಿ ಆಗಿದೆ ಅಂತ ಸಿಎಂ ಹೇಳುತ್ತಾರೆ. ಆದರೆ ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ಸಿಎಂ ಅವರಿಗೆ ನೆನಪಿಸಿಕೊಡುತ್ತೇನೆ. ಕೈ ಗ್ಯಾರಂಟಿ ಸ್ವತಃ ಮುಖ್ಯಮಂತ್ರಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರಿ ನೌಕರರ ಸಂಬಳ ಕೊಡದ ಸ್ಥಿತಿಗೆ ಬಂದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ಕೊಡ್ತಾರೆ ಎಂದು ತಿಳಿಸಿದರು.