ಸಂಸದ ಸಂಗಣ್ಣ ಕರಡಿ ವಿಧಾನಸಭೆಗೆ ಸ್ಪರ್ಧೆ?

*  ಕ್ಷೇತ್ರದ ವಿವಿಧ ಪಕ್ಷದ ಮುಖಂಡರೊಂದಿಗೂ ಚರ್ಚಿಸುತ್ತಿರುವ ಸಂಸದ
*  ವಿಧಾನಸಭಾ ಅಖಾಡಕ್ಕಿಳಿಯುತ್ತೇನೆ, ಬೆಂಬಲ ಕೇಳುತ್ತಿರುವ ಕರಡಿ
*  ಸಂಸದ ಸಂಗಣ್ಣ ಕರಡಿ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ
 

BJP Sanganna Karadi will Contest Koppal Assembly Constituency on 2023 grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.16):  ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಈ ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಇದರಲ್ಲಿ ಅನುಮಾನ ಇಲ್ಲ. ಆದರೆ, ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದಷ್ಟೇ ಫೈನಲ್‌ ಆಗಬೇಕಾಗಿದೆ!

‘ನಾನೇಕೆ ಜೆಡಿಎಸ್‌ ಸೇರ್ಪಡೆಯಾಗಲಿ? ಜೆಡಿಎಸ್‌ ಸೇರಲು ಹುಚ್ಚು ಹಿಡಿದಿದೆಯೇನು?’ ಎನ್ನುವ ಸ್ಪಷ್ಟನೆ ನೀಡುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿನ ವದಂತಿಗೆ ತೆರೆ ಎಳೆದಿದ್ದಾರೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳದಿಂದಲೇ ಅಖಾಡಕ್ಕೆ ಇಳಿಯುವುದನ್ನು ಅವರು ತಳ್ಳಿ ಹಾಕುತ್ತಿಲ್ಲ. ಅಲ್ಲದೇ ಅನೇಕ ಬಾರಿ ಆ ಕುರಿತು ಘೋಷಿಸಿಕೊಳ್ಳುತ್ತಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟವನ್ನು ಹೆಚ್ಚು ಮಾಡಿದ್ದಾರೆ.

ದಳಪತಿಗಳಿಗೆ ಮತ್ತೊಂದು ಶಾಕ್, ಜೆಡಿಎಸ್‌ಗೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಮನೆಗೆ ಹೋದ ಮಾಜಿ MLC

‘ನಾನು ಬಿಜೆಪಿಯಿಂದ ಸಂಸದನಾಗಿದ್ದೇನೆ. ಬಿಜೆಪಿ ನನಗೆ ಏನೆಲ್ಲಾ ಕೊಟ್ಟಿದೆ. ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತದಾರರು ನಾನು ಮತ್ತೆ ಸ್ಪರ್ಧೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಅನೇಕರು ನನ್ನನ್ನು ಖುದ್ದು ಭೇಟಿಯಾಗಿ ಮನವಿ ಮಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ಅವಕಾಶ ನೀಡುತ್ತದೆ ಎನ್ನುವ ವಿಶ್ವಾಸವಿದೆ. ಹೈಕಮಾಂಡ್‌ ಸೂಚನೆಯನ್ನು ಕಾಯುತ್ತೇನೆ’ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಅನೇಕರ ಸಂಪರ್ಕ:

ಪಕ್ಷದ ವೇದಿಕೆಯಲ್ಲಿ ಈ ರೀತಿಯಾಗಿ ಹೇಳುವ ಮೂಲಕ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಮನದಾಳವನ್ನು ಹರಿಬಿಟ್ಟಿದ್ದಾರೆ. ಇದನ್ನು ಮೀರಿಯೂ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಅವರೀಗ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಪಕ್ಕಾ. ನಿಮ್ಮ ಬೆಂಬಲ ಬೇಕು ಎಂದು ಹೇಳುತ್ತಿದ್ದಾರೆ. ಜತೆಗೆ ಬೇರೆ ಪಕ್ಷದಲ್ಲಿರುವವರನ್ನು ಸಂಪರ್ಕಿಸಿ ಮಾತನಾಡುತ್ತಿದ್ದಾರೆ. ತಾವು ಶಾಸಕರಾಗಿದ್ದ ವೇಳೆ ಜತೆಗಿದ್ದವರು ಈಗ ಬೇರೆ ಬೇರೆ ಪಕ್ಷದಲ್ಲಿ ಇದ್ದಾರೆ. ಅವರ ಜತೆಗೂ ಯಾವುದೇ ಅಳುಕಿಲ್ಲದೆ ಸಂಪರ್ಕಿಸಿ ಮಾತನಾಡುತ್ತಿದ್ದಾರೆ.

ಜೆಡಿಎಸ್‌ ನಿಯೋಗ:

ಸಂಸದ ಸಂಗಣ್ಣ ಕರಡಿ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ. ಜೆಡಿಎಸ್‌ನ ಕೆಲವು ಮುಖಂಡರು ಪಕ್ಷದ ಹೈಕಮಾಂಡ್‌ ಬಳಿ ಹೋಗಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ಸಂಗಣ್ಣ ಕರಡಿ ಅವರನ್ನು ಪಕ್ಷಕ್ಕೆ ಸೆಳೆದು ಅಖಾಡಕ್ಕೆ ಇಳಿಸುವ ಯತ್ನ ನಡೆಸಿದ್ದಾರೆ. ಅದರಲ್ಲೂ ಸಂಗಣ್ಣ ಕರಡಿ ಅವರ ಮೇಲಿನ ಅತಿ ಅಭಿಮಾನ ಇಟ್ಟುಕೊಂಡಿರುವ ಕೆಲ ಮುಸ್ಲಿಂ ಮುಖಂಡರು ಈ ಯತ್ನ ನಡೆಸಿದ್ದಾರೆ.

ರಾಜಕೀಯ ಮಾಡುವ ಉದ್ದೇಶ ಇಲ್ಲ: ಜನಾರ್ದನ ರೆಡ್ಡಿ

ಕೊಪ್ಪಳದಿಂದ ಈ ಕುರಿತು ನಿಯೋಗವೊಂದು ಜೆಡಿಎಸ್‌ ಹೈಕಮಾಂಡ್‌ ಬಳಿ ಹೋಗಿ ಚರ್ಚೆ ಮಾಡಿ ಬಂದಿದೆ. ಆದರೆ, ಈ ವದಂತಿ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಕೆಂಡಮಂಡಲವಾದ ಸಂಸದ ಸಂಗಣ್ಣ ಕರಡಿ ಅವರು, ನಾನೇಕೆ ಜೆಡಿಎಸ್‌ ಸೇರ್ಪಡೆಯಾಗಲಿ, ಜೆಡಿಎಸ್‌ ಸೇರಲು ಹುಚ್ಚು ಹಿಡಿದಿದೆಯೇನು ಎನ್ನುವ ಮೂಲಕ ಬಿಜೆಪಿಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾನು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಕ್ಷೇತ್ರದ ಮತದಾರರ ಬಯಕೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುವ ಇಚ್ಛೆಯನ್ನು ಹೊಂದಿದ್ದೇನೆ. ಸದ್ಯಕ್ಕೆ ನಾನು ಸಂಸದನಾಗಿದ್ದೇನೆ ಅಂತ , ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios