ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೈಕಮಾಂಡ್ 4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶದ ಉಪಚುನಾವಣೆ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಫೈನಲ್
ನವದೆಹಲಿ(ಜೂ.04): ನಾಲ್ಕು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಉತ್ತರ ಪ್ರದೇಶ, ತ್ರಿಪುರ, ಆಂಧ್ರ ಪ್ರದೇಶ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಜೂನ್ 23 ರಂದು ಚುನಾವಣೆ ನಡೆಯಲಿದೆ. ಸಮಾಜವಾದಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಘನಶ್ಯಾಮ್ ಲೋಧಿಗೆ ಬಿಜೆಪಿ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಉತ್ತರ ಪ್ರದೇಶ
ಉತ್ತರ ಪ್ರದೇಶದ ರಾಮಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ ಸ್ಪರ್ಧಿಸಲಿದ್ದಾರೆ. ಇತ್ತ ಅಜಮ್‌ಘಡ ಕ್ಷೇತ್ರದಿಂದ ದಿನೇಶ್ ಲಾಲ್ ಯಾದವ್ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ 2ನೇ ಅಭ್ಯರ್ಥಿ ಹಾಕಿದ್ದು ಬಿಜೆಪಿ ಗೆಲ್ಲಿಸಲು: ಇಬ್ರಾಹಿಂ
ತ್ರಿಪುರ
ಬೊರೊದ್ವಾಲಿ ಪಟ್ಟಣ ಕ್ಷೇತ್ರದಿಂದ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ ಸ್ಪರ್ಧಿಸಲಿದ್ದಾರೆ. ಇನ್ನು ಅರ್ಗತಲಾ ಕ್ಷೇತ್ರದಿಂದ ಡಾ ಅಶೋಕ್ ಸಿನ್ಹಗೆ ಬಿಜೆಪಿ ಟಿಕೆಟ್ ನೀಡಿದೆ. ಜುಬರಾಜ್‌ನಗರ ಕ್ಷೇತ್ರದಿಂದ ಮಿಲಿನಾ ದೇಬನಾಥ್‌ಗಿ ಟಿಕೆಟ್ ನೀಡಲಾಗಿದೆ.
ಆಂಧ್ರಪ್ರದೇಶ
ಅಟ್ಮಾಕುರ್ ಕ್ಷೇತ್ರದಿಂದ ಗುಂಡ್ಲಪಲ್ಲಿ ಭರತ್ ಕುಮಾರ್ ಯಾದವ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರದಿಂದ ಶಾಸಕನಾಗಿದ್ದ YSR ಕಾಂಗ್ರೆಸ್ ಮೇಕಪಾತಿ ಗೌತಮ್ ರೆಡ್ಡಿ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯುುತ್ತಿದೆ. ಈ ಫೆಬ್ರವರಿ ತಿಂಗಳಲ್ಲಿ ಗೌತಮ್ ರೆಡ್ಡಿ ನಿಧನರಾಗಿದ್ದರು.
ದೆಹಲಿ
ರಾಜಿಂದರ್ ನಗರ್ ಕ್ಷೇತ್ರದಿಂದ ರಾಜೇಶ್ ಭಾಟಿಗೆ ಟಿಕೆಟ್ ನೀಡಿದೆ. ರಾಜ್ಯಸಭೆಗೆ ಆಯ್ಕೆಯಾದ ಕಾರಣ ಆಪ್ ನಾಯಕ ರಾಘವ್ ಚಡ್ಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Congress Politics: 50ರ ಒಳಗಿನವರಿಗೆ ಶೇ.50 ಕಾಂಗ್ರೆಸ್ ಟಿಕೆಟ್
ಜಾರ್ಖಂಡ್
ಮಂದಾರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗಂಗೋತ್ರಿ ಕುಜುರ್ ಸ್ಪರ್ಧಿಸಲಿದ್ದಾರೆ. ಮಂದಾರ್ ವಿಧಾನಸಾಭ ಚುನಾವಣೆ ಜೂನ್ 23ಕ್ಕೆ ನಡೆಯಲಿದೆ. ಸಿಬಿಐ ವಿಶೇಷ ನ್ಯಾಯಾಲಯ ಎಪ್ರಿಲ್ 8 ರಂದು ಶಾಸಕ ಬಂಧು ತಿರ್ಕೆಯನ್ನು ಅನರ್ಹಗೊಳಿಸಿತ್ತು.
ಸದ್ಯದಲ್ಲೇ ಸಂಸತ್ತಲ್ಲಿ ಬಿಜೆಪಿ ಮುಸ್ಲಿಂ ಸಂಸದರು ಖಾಲಿ
ನವದೆಹಲಿ: ಬಿಜೆಪಿಯಿಂದ ರಾಜ್ಯಸಭಾ ಸಂಸದರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ, ಸಯ್ಯದ್ ಜಾಫರ್ ಇಸ್ಲಾಂ ಮತ್ತು ಎಂ.ಜೆ.ಅಕ್ಬರ್ ಅವರುಗಳ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಇತ್ತೀಚಿಗೆ ಬಿಜೆಪಿ ಘೊಷಣೆ ಮಾಡಿದ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಸಂಸದರೂ ಸೇರಿದಂತೆ ಯಾವುದೇ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಲೋಕಸಭೆಯಲ್ಲಿ ಈಗಾಗಲೇ ಬಿಜೆಪಿಯಿಂದ ಯಾವುದೇ ಮುಸ್ಲಿಂ ಅಭ್ಯರ್ಥಿ ಸಂಸದರಾಗಿಲ್ಲ. ಇತ್ತ ಲೋಕಸಭಾ ಹಾಗು ವಿಧಾನಸಭಾ ಉಪಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲೂ ಯಾರೂ ಮುಸ್ಲಿಮ್ ಅಭ್ಯರ್ಥಿಗಳಿಲ್ಲ. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಸಂಸತ್ತಿನಲ್ಲಿ ಬಿಜೆಪಿಯಿಂದ ಯಾವುದೇ ಮುಸ್ಲಿಂ ಸಂಸದರು ಇಲ್ಲದಂತಾಗುತ್ತದೆ. ನಖ್ವಿ ಅವರ ಅಧಿಕಾರವಧಿ ಜು.7ಕ್ಕೆ, ಇಸ್ಲಾಂ ಅವರ ಅಧಿಕಾರಾವಧಿ ಜು.4 ಮತ್ತು ಎಂ.ಜೆ.ಅಕ್ಬರ್ ಅಧಿಕಾರಾವಧಿ ಜೂ.29ರಂದು ಮುಕ್ತಾಯವಾಗಲಿದೆ.
ಸಚಿವ ನಾರಾಯಣಗೌಡ ವಿರುದ್ಧದ ಚುನಾವಣಾ ಕೇಸ್ ರದ್ದು
ಕಳೆದ 2019ರ ಲೋಕಸಭಾ ಚುನಾವಣೆ ಮೇಳೆ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ ಸಂಬಂಧ ಸಚಿವ ಕೆ.ಸಿ.ನಾರಾಯಣಗೌಡ ಅವರ ವಿರುದ್ಧ ಕೆ.ಆರ್.ಪೇಟೆ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ಪ್ರಕರಣ ಕುರಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಚ್ ರದ್ದುಪಡಿಸಿದೆ. ಸಚಿವ ಕೆ.ಸಿ.ನಾರಾಯಣ ಗೌಡ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್‌ದತ್ ಯಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗುತ್ತದೆ. ನಾರಾಯಣಗೌಡ ಅವರ ವಿರುದ್ಧ ದೂರು ನೀಡಿದ ಅಧಿಕಾರಿ, ಮ್ಯಾಜಿಸ್ಪ್ರೇಟ್ ಕೋರ್ಚ್‌ಗೆ ಹಾಜರಾಗಿ ತನಿಖೆಗೆ ಅನುಮತಿ ನೀಡುವಂತೆ ಕೋರುವ ಹಂತದಿಂದ ಪ್ರಕರಣವನ್ನು ಹೊಸದಾಗಿ ಕಾನೂನು ಪ್ರಕಾರ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
