ನನ್ನ ಹೆದರಿಸುವ ಯಾವ ಮಗನೂ ಹುಟ್ಟಿಲ್ಲ. ನಾನು ಇಲ್ಲೀಗಲ್ (ಅಕ್ರಮ) ಅಲ್ಲ. ನಾನು ನೇರವಾಗಿ ಇದ್ದೇನೆ. ಏನು ಮಾಡುತ್ತಾರೋ ನೋಡೋಣ. ನನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಾರಲ್ಲ. ನನ್ನ ಎದುರಿಗೆ ಇದನ್ನೆಲ್ಲ ಹುಟ್ಟಿಲ್ಲ. ಇವರು ಮಾಡಲಿ. ತಾಕತ್ತಿದ್ದರೆ ನನ್ನನ್ನು ಎದುರಿಸಲಿ ಎಂದು ಸವಾಲು ಹಾಕಿದ ಬಿಜೆಪಿಯ ಬಂಡಾಯ ಶಾಸಕ ಎಸ್.ಟಿ. ಸೋಮಶೇಖರ್
ಬೆಂಗಳೂರು(ಫೆ.29): ನನ್ನನ್ನು ಹೆದರಿಸುವ ಯಾವ ಮಗನೂ ನಾನೇನು ಪಾಕಿಸ್ತಾನದಲ್ಲಿ ಇದ್ದೇನೆಯೇ ಹೆದರಿಸೋಕೆ ಎಂದು ಬಿಜೆಪಿಯ ಬಂಡಾಯ ಶಾಸಕ ಎಸ್.ಟಿ. ಸೋಮಶೇಖರ್ ಗುಡುಗಿದ್ದಾರೆ. ಇವರು ಏನು ಎನ್ನುವುದನ್ನು ಒಂದೊಂದೇ ಹೊರ ತೆಗೆಯುತ್ತೇನೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತ ಹಾಕಿದ ತಮ್ಮ ವಿರುದ್ಧ ಮಾತನಾಡಿರುವ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಬ್ಬರ ವಿರುದ್ಧ ಹರಿಹಾಯ್ದರು.
ಶಿವರಾಮ್ ಹೆಬ್ಬಾರ್ ಕಾಣೆಯಾಗಿದ್ದಾರೆ ಹುಡುಕಿಕೊಡುವಂತೆ ಪಂಚಾಯ್ತಿ ಸದಸ್ಯನಿಂದ ಯಲ್ಲಾಪುರ ಠಾಣೆಗೆ ದೂರು!
ನನ್ನ ಹೆದರಿಸುವ ಯಾವ ಮಗನೂ ಹುಟ್ಟಿಲ್ಲ. ನಾನು ಇಲ್ಲೀಗಲ್ (ಅಕ್ರಮ) ಅಲ್ಲ. ನಾನು ನೇರವಾಗಿ ಇದ್ದೇನೆ. ಏನು ಮಾಡುತ್ತಾರೋ ನೋಡೋಣ. ನನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಾರಲ್ಲ. ನನ್ನ ಎದುರಿಗೆ ಇದನ್ನೆಲ್ಲ ಹುಟ್ಟಿಲ್ಲ. ಇವರು ಮಾಡಲಿ. ತಾಕತ್ತಿದ್ದರೆ ನನ್ನನ್ನು ಎದುರಿಸಲಿ ಎಂದು ಸವಾಲು ಹಾಕಿದರು.
ಕಳೆದ 3 ವರ್ಷದಲ್ಲಿ ಇವರ ಆಟಗಳನ್ನು ನೋಡಿದ್ದೇನೆ. ಯಡಿಯೂರಪ್ಪನವರಿಗಿಂತಮುನ್ನ ಯಾರೆಲ್ಲಾ ನನ್ನ ಹತ್ತಿರ ಮಾತನಾಡಿದ್ದರು, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ನೂರಕ್ಕೆ ನೂರರಷ್ಟು ಇಳಿಸುತ್ತೇವೆ ಎಂದಿದ್ದರು ಎಂಬುದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಸಾಕ್ಷಿ ಸಮೇತವಾಗಿ ಎಲ್ಲವನ್ನು ಹೇಳುತ್ತೇನೆ ಎಂದು ಬಾಂಬ್ ಹಾಕಿದರು.
ಯಾರು, ಯಾರಿಗೆ ಹೇಗೆ ಮೋಸ ಮಾಡಿದ್ದಾರೆ. ಎಲ್ಲವನ್ನು ತೆರೆದಿಡುತ್ತೇನೆ. ಹೌದು, ಕ್ರಾಸ್ ವೋಟ್ (ಅಡ್ಡಮತದಾನ) ಮಾಡಿದ್ದೇನೆ. ಏನಿವಾಗ? ಬಿಜೆಪಿಯವರು ಸ್ವತಂತ್ರವಾಗಿದ್ದಾರೆ. ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಪಕ್ಷದಿಂದ ಬೇಕಾದರೂ ಕಿತ್ತು ಹಾಕಲಿ. ನಾನೇನೂ ಹೆದರುವುದಿಲ್ಲ. ಸೋಲು-ಗೆಲುವು ಜನರ ಕೈಯಲ್ಲಿರುವುದು. ನಾಲ್ಕು ಬಾರಿ ಚುನಾವಣೆ ಗೆದ್ದಿದ್ದೇನೆ. ಯಾವುದಕ್ಕೂ ಹೆದರುವ ಮನುಷ್ಯ ನಾನಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
