ಬೆಂಗಳೂರು (ಅ.08): ವಿಧಾನಪರಿಷತ್‌ನ ಅಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಾಸಕಿ ಪೂರ್ಣಿಯಾ ಪತಿ ಡಿ.ಟಿ.ಶ್ರೀನಿವಾಸ ಅವರು 156.24 ಕೋಟಿ ರು. ಮೌಲ್ಯದ ಆಸ್ತಿಯನ್ನು ಹೊಂದಿರುವ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ.

ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಉಲ್ಲೇಖಿಸಿದ್ದಾರೆ. ಡಿ.ಟಿ.ಶೀನಿವಾಸ ಹೆಸರಲ್ಲಿ 11.45 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 100.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಪೂರ್ಣಿಮಾ ಹೆಸರಲ್ಲಿ 2.59 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 18.38 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪುತ್ರ ಬಿಜೇಶ್‌ ಯಾದವ್‌ ಹೆಸರಲ್ಲಿ 14.03 ಲಕ್ಷ ರು. ಮೌಲ್ಯದ ಚರಾಸ್ತಿ, 20.34 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು ಪುತ್ರಿ ವಿನಿಶಾ ಯಾದವ್‌ ಹೆಸರಲ್ಲಿ 11.81 ಲಕ್ಷ ರು. ಮೌಲ್ಯದ ಚರಾಸ್ತಿ ಮತ್ತು 2.53 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇರುವ ಬಗ್ಗೆ ಅಸ್ತಿ ವಿವರದಲ್ಲಿ ತಿಳಿಸಲಾಗಿದೆ.

RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ

ಶ್ರೀನಿವಾಸ ಬಳಿ ಯಾವುದೇ ಚಿನ್ನಾಭರಣ ಇಲ್ಲ. ಪೂರ್ಣಿಮಾ ಬಳಿ 68.95 ಲಕ್ಷ ರು. ಮೌಲ್ಯದ ಚಿನ್ನ, 2.10 ಲಕ್ಷ ರು. ಮೌಲ್ಯದ ಬೆಳ್ಳಿ ವಸ್ತುಗಳಿವೆ. ಮಕ್ಕಳ ಬಳಿ ತಲಾ 4.05 ಲಕ್ಷ ರು. ಮೌಲ್ಯದ ಚಿನ್ನಾಭರಣ ಇದೆ. ಶ್ರೀನಿವಾಸ ಅವರಿಗೆ ಯಾವುದೇ ಸಾಲ ಇಲ್ಲ. ಆದರೆ ಪತ್ನಿ ಹೆಸರಲ್ಲಿ 5.29 ಕೋಟಿ ರು. ಸಾಲ ಇದೆ ಎಂದು ನಮೂದಿಸಲಾಗಿದೆ.