ಬ್ರಿಟೀಷರಿಗೆ ಕ್ಷಮೆ, ಮೌಂಟ್‌ಬ್ಯಾಟನ್‌ಗೆ ಸಲಾಂ, ನೆಹರೂ ಅಧಿಕೃತ ಪತ್ರ ಬಿಡುಗಡೆಯಿಂದ ಕಾಂಗ್ರೆಸ್ ಥಂಡಾ
ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ವೀರ ಸಾವರ್ಕರ್ ಕುರಿತು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾವರ್ಕರ್ ಬ್ರಿಟೀಷರಿಗೆ ಕ್ಷಮೆ ಕೇಳಿದ್ದಾರೆ. ಸೇವಕನಾಗಿರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಕಾಂಗ್ರೆಸ್ ಹೇಳಿದೆ. ಇದೀಗ ಬಿಜೆಪಿ ನೆಹರೂ ಅಧಿಕೃತ ಪತ್ರ ಬಿಡುಗಡೆ ಮಾಡಿದೆ. ಸ್ವಾತಂತ್ರ್ಯ ಬಂದ ಬಳಿಕವೂ ನೆಹರೂ ಬ್ರಿಟಿಷರಿಗೆ ಸಲಾಂ ಹೊಡೆಯುತ್ತಿದ್ದ ಘಟನೆಯನ್ನು ಈ ಪತ್ರ ಹೇಳುತ್ತಿದೆ.
ನವದೆಹಲಿ(ನ.18): ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಆಡಿರುವ ಮಾತು ಭಾರಿ ವಿವಾದಕ್ಕೆ ಕಾರಣವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಬ್ರಿಟಿಷರಿಗೆ ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಪತ್ರದ ಪ್ರತಿಯನ್ನು ಮಾಧ್ಯಮದ ಮುಂದೆ ಬಿಡುಗಡೆಗೊಳಿಸಿದ್ದರು. ರಾಹುಲ್ ಗಾಂಧಿ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಮಿತ್ರ ಪಕ್ಷ ಶಿವಸೇನೆ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಪತ್ರವನ್ನು ಬಿಡುಗಡೆ ಮಾಡಿದೆ. ಸ್ವಾತಂತ್ರ್ಯ ಬಳಿಕ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂ ಬ್ರಿಟಿಷರಿಗೆ ಸಲಾಂ ಹೊಡೆಯದೆ ಒಂದೇ ಒಂದು ಕೆಲಸ ಮಾಡಿಲ್ಲ. ಹೆಜ್ಜೆ ಹೆಜ್ಜೆಗೂ ಬ್ರಿಟಿಷರನ್ನು ಹೊಗಳಿ, ಸಲಾಂ ಹೊಡೆಯುತ್ತಿದ್ದರು. ಇದನ್ನು ಪ್ರಶ್ನಿಸುವ ಬದಲು ಕಾಂಗ್ರೆಸ್ ನಾಯಕರು ವೀರ ಸಾವರ್ಕರ್ ದೇಶಪ್ರೇಮ, ದೇಶಕ್ಕಾಗಿ ಮಾಡಿದ ತ್ಯಾಗವನ್ನೇ ಪ್ರಶ್ನಿಸುತ್ತಿದೆ ಎಂದು ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ.
ಟ್ವೀಟ್ ಮೂಲಕ ಜವಾಹರ್ ಲಾಲ್ ನೆಹರೂ ಅಧಿಕೃತ ಪತ್ರವನ್ನು ರಾಜ್ಯವರ್ಝನ್ ರಾಥೋರ್ ಬಿಡುಗಡೆ ಮಾಡಿದ್ದಾರೆ. ಈ ಪತ್ರ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಬರೆದಿದ್ದಾರೆ. 1948ರ ಎಪ್ರಿಲ್ 28 ರಂದು ನೆಹರೂ ಈ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರಮುಖ ವಿಷಯ ಪಶ್ಚಿಮ ಬಂಗಾಳದ ರಾಜ್ಯಪಾಲ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡುವ ಕುರಿತು ಪತ್ರ ಬರೆಯಲಾಗಿದೆ. ಆದರೆ ಈ ಪತ್ರ ಆರಂಭ ಹಾಗೂ ಕೊನೆಯಲ್ಲಿ ಬ್ರಿಟಿಷ್ ಅಡ್ಮಿರಲ್ ಮೌಂಟ್‌ಬ್ಯಾಟನ್‌ಗೆ ಸಲಾಂ ಹೊಡೆದು ಪತ್ರ ಬರೆಯಲಾಗಿದೆ. ಇದನ್ನು ರಾಜ್ಯವರ್ದನ ಸಿಂಗ್ ರಾಥೋರ್ ಪ್ರಶ್ನಿಸಿದ್ದಾರೆ ಸ್ವಾತಂತ್ರ್ಯ ಬಂದ ಬಳಿಕವೂ ನೆಹರೂ ಬ್ರಟಿಷರಿಗೆ ಸಲಾಂ ಹೊಡೆಯುವುದನ್ನು ನಿಲ್ಲಿಸಲಿಲ್ಲ ಎಂದಿದ್ದಾರೆ.
ಭಾರತ್ ಜೋಡೋ ಜೊತೆ ಕಾಣಿಸಿಕೊಂಡ ಬೆನ್ನಲೇ ಮೈತ್ರಿಯಲ್ಲಿ ಬಿರುಕು, ವೀರ್ ಸಾವರ್ಕರ್ ಮಾತಿಗೆ ಕೆಂಡ!
ವೀರ ಸಾವರ್ಕರ್ ಇಂಗ್ಲೆಂಡ್ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ಪಾಸ್ ಆಗಿದ್ದಾರೆ. ಆದರೆ ಸಾವರ್ಕರ್‌ಗೆ ಪದವಿ ಪತ್ರ ಸಿಕ್ಕಿಲ್ಲ. ಕಾರಣ ಬ್ರಿಟಿಷ್ ಕ್ರೌನ್ ಹಾಕಿ ಪ್ರಮಾಣ ಪತ್ರ ಪಡೆಯಲಾರೆ ಎಂದ ಸಾವರ್ಕರ್‌ಗೆ ಪದವಿ ಸರ್ಟಿಫಿಕೇಟ್ ನೀಡಿಲ್ಲ. ನನ್ನ ದೇಶದ ಉಡುಗೆಯಲ್ಲೇ ಪದವಿ ಪ್ರಮಾಣ ಪತ್ರ ಸ್ವೀಕರಿಸುತ್ತೇನೆ, ಇದಕ್ಕೆ ಬ್ರಿಟಿಷರ ಕ್ರೌನ್ ಬೇಕಿಲ್ಲ ಎಂದು ಸಾವರ್ಕರ್ ಹೇಳಿದ್ದರು. ಇತ್ತ ನೆಹರೂ ಸ್ವಾತಂತ್ರ್ಯ ಬಂದ ಬಳಿಕವೂ ಬ್ರಟಿಷರಿಗೆ ತಲೆಬಾಗಿ, ಸಲಾಮ್ ಹೊಡೆಯುವುದನ್ನು ನಿಲ್ಲಿಸಿಲ್ಲ. ಇದು ರಾಹುಲ್ ಗಾಂಧಿಗೆ ಕಾಣುವುದಿಲ್ಲ ಎಂದು ರಾಥೋರ್ ಹೇಳಿದ್ದಾರೆ
ವೀರ ಸಾವರ್ಕರ್ ಕ್ಷಮಾಪಣೆ ಪತ್ರದ ಕುರಿತು ರಾಹುಲ್ ಗಾಂಧಿ ಆಡಿದ ಮಾತುಗಳನ್ನು ಖಂಡಿಸಿರುವ ರಾಥೋರ್, ನೆಹರೂ ಬ್ರಟಿಷರಿಗೆ ಕ್ಷಮೆ ಕೇಳಿರುವುದು ಮರೆತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 1923ರಲ್ಲಿ ನೆಹರೂಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ನೆಹರೂ ಬ್ರಿಟಿಷರ ಬಳಿ ಕ್ಷಮೆ ಕೇಳಿದರು. ಇಷ್ಟೇ ಅಲ್ಲ ನೆಹರೂ ತಂದೆ ಮೋತಿ ಲಾಲ್ ಕೂಡ ಬ್ರಿಟಿಷ್ ವೈಸ್‌ರಾಯ್ ಅವರಲ್ಲಿ ಮನವಿ ಮಾಡಿಕೊಂಡರು. ಇದರಿಂದ 2 ವರ್ಷದ ಜೈಲು ಶಿಕ್ಷೆಯನ್ನು ಒಂದೇ ವಾರಕ್ಕೆ ಮುಗಿಸಿ ಜೈಲಿನಿಂದ ಹೊರಬಂದಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಸಾವರ್ಕರ್ ದೇಶಪ್ರೇಮ, ತ್ಯಾಗ ಕಾಣುವುದಿಲ್ಲ. ಅತ್ಯಂತ ಕಠಿಣ ಕಾಲಾಪಾನಿ ಶಿಕ್ಷೆ ಅನುಭವಿಸಿ ಜೈಲಿನಿಂದ ಅದೇನೇ ಮಾಡಿದರೂ ಬಿಡುಗಡೆ ಸಾಧ್ಯವಿಲ್ಲ ಎಂದ ಅರಿತ ಸಾವರ್ಕರ್ ಕ್ಷಮಾಪಣೆ ಪತ್ರ ಮಾತ್ರ ಕಾಣುತ್ತದೆ ಎಂದು ರಾಥೋರ್ ತಿರುಗೇಟು ನೀಡಿದ್ದಾರೆ.
ಸ್ವಾತಂತ್ರ್ಯ ಸೇನಾನಿಗೆ ಅಪಮಾನ, ರಾಹುಲ್ ಗಾಂಧಿ ವಿರುದ್ಧ ಸಾವರ್ಕರ್ ಮೊಮ್ಮಗನಿಂದ ಕೇಸ್!
ಮೌಂಟ್‌ಬ್ಯಾಟನ್ ಭಾರತದ ಮೊದಲ ಗವರ್ನರ್ ಅನ್ನೋ ಒಪ್ಪಂದವನ್ನು ನೆಹರೂ ಎರಡೂ ಕಣ್ಣಿಗೆ ಒತ್ತಿ ಸ್ವೀಕರಿಸಿದ್ದರು. ಮೌಂಟ್‌ಬ್ಯಾಟನ್ ಹೇಳಿದ ರೀತಿಯಲ್ಲೇ ಆಡಳಿತ ಮಾಡಲು ನೆಹರೂ ಒಪ್ಪಿದ್ದರು. ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಿಟನ್ ರಾಣಿಗೆ ಗೌರವ ಸೂಚಿಸಲು ನೆಹರೂ ಎಲ್ಲಾ ಸೂಚನೆ ನೀಡಿದ್ದರು. ಆದರೆ ನೆಹರೂ ದೇಶಪ್ರೇಮಿ, ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ವೀರ ಸಾವರ್ಕರ್ ಕಾಂಗ್ರೆಸ್ ಪಾಲಿಗೆ ದ್ರೋಹಿಯಾಗಿರುವುದು ದುರಂತ ಎಂದು ರಾಜ್ಯವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ