ಲಂಡನ್ ನಲ್ಲಿ ಭಾರತದ ವಿರೋಧಿ ಜೆರೆಮಿ ಕಾರ್ಬಿನ್ ಭೇಟಿ ಮಾಡಿದ ರಾಹುಲ್ ಗಾಂಧಿ, ಬಿಜೆಪಿಯಿಂದ ಟೀಕೆ!
ಜೆರೆಮಿ ಕಾರ್ಬಿನ್ ಭಾರತದ ವಿರೋಧಿ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷ್ಯಗಳಿವೆ. ರಾಹುಲ್ ಗಾಂಧಿ ದೇಶದಲ್ಲಿ ಏನು ಮಾತನಾಡುತ್ತಾರೋ ಅದರ ಪ್ರೇರಕ ವ್ಯಕ್ತಿಗಳು ಇವರೇ ಇರಬಹುದು. ರಾಹುಲ್ ಮೇಲೆ ಪ್ರಭಾವ ಬೀರುವ ಪ್ರಭಾವಿಗಳು ಇವರೇ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ಟಾಮ್ ವಡಕ್ಕನ್ ಹೇಳಿದ್ದಾರೆ.
ನವದೆಹಲಿ (ಮೇ.24): ಪ್ರಮುಖ ಬೆಳವಣಿಗೆಯಲ್ಲಿ, ಭಾರತೀಯ ಜನತಾ ಪಕ್ಷವು ( Bharatiya Janata Party) ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರನ್ನು ಇಂಗ್ಲೆಂಡ್ ನ ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ (UK former Labour Party leader Jeremy Corbyn ) ಅವರನ್ನು ಭೇಟಿ ಮಾಡಿರುವುದನ್ನು ಪ್ರಶ್ನಿಸಿದೆ.
ಬಿಜೆಪಿಯ ಕಪಿಲ್ ಮಿಶ್ರಾ (Kapil Mishra) ಅವರು ವಯ್ನಾಡ್ ಸಂಸದರನ್ನು ( Wayanad MP) ತರಾಟೆಗೆ ತೆಗೆದುಕೊಂಡಿದ್ದು, ಆಯಾ ದೇಶಗಳ ಇಬ್ಬರು ವಿರೋಧ ಪಕ್ಷದ ನಾಯಕರ ನಡುವಿನ ಭೇಟಿಯ ಅರ್ಥವನ್ನು ಪ್ರಶ್ನಿಸಿದರು. ಜೆರೆಮಿ ಕಾರ್ಬಿನ್ ಅವರು ತಮ್ಮಪಕ್ಷ ವಿರೋಧಿ ಅಭಿಪ್ರಾಯಗಳಿಗಾಗಿ ಲೇಬರ್ ಪಕ್ಷದ ನಾಯಕತ್ವದಿಂದ ಈ ಹಿಂದೆ ಉಚ್ಚಾಟಿಸಲ್ಪಟ್ಟಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಧ್ವನಿಯನ್ನು ಬೆಂಬಲಿಸುತ್ತಿದ್ದರು ಎನ್ನುವುದು ಗಮನಿಸಬೇಕಾದ ಅಂಶ.
'ರಾಹುಲ್ ಗಾಂಧಿ ಲಂಡನ್‌ನಲ್ಲಿ ಜೆರೆಮಿ ಕಾರ್ಬಿನ್ ಜೊತೆ ಏನು ಮಾಡುತ್ತಿದ್ದಾರೆ? ಜೆರೆಮಿ ಕಾರ್ಬಿನ್ ಭಾರತ ವಿರೋಧಿ ಹಿಂದೂ ನಿಲುವಿಗೆ ಕುಖ್ಯಾತರಾಗಿದ್ದಾರೆ, ಜೆರೆಮಿ ಕಾರ್ಬಿನ್ ಅವರು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಬಹಿರಂಗವಾಗಿ ಮಾತನಾಡಿದ್ದರು' ಎಂದು ಮಿಶ್ರಾ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದರ ನಡುವೆ, ಬಿಜೆಪಿ ನಾಯಕ ಟಾಮ್ ವಡಕ್ಕನ್ ಕೂಡ ಈ ಹಿಂದೆ ಭಾರತದ ಬಗ್ಗೆ ಹಲವಾರು ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ ನಾಯಕನನ್ನು ರಾಹುಲ್ ಗಾಂಧಿ ಏಕೆ ಭೇಟಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ರಾಹುಲ್ ಗಾಂಧಿ ಭೇಟಿಯನ್ನು ಟೀಕೆ ಮಾಡಿದ್ದಾರೆ. ಪ್ರತಿ ಬಾರಿಯೂ ಅವರು ಭಾರತ ವಿರೋಧಿ ಅಂಶಗಳೊಂದಿಗೆ ಏಕೆ ಭೇಟಿಯಾಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಪೂನಾವಾಲಾ ಅವರು ಕಾರ್ಬಿನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಚಾರವನ್ನು ಪ್ರತಿಧ್ವನಿಸುವ ಜೆರೆಮಿ ಕಾರ್ಬಿನ್ ಅವರಂತಹ ಭಾರತ ವಿರೋಧಿ ನಾಯಕರನ್ನು ಭೇಟಿಯಾಗಲಿ ಅಥವಾ ಚೀನಾದೊಂದಿಗೆ ಎಂಒಯುಗೆ ಸಹಿ ಹಾಕಲಿ ಮತ್ತು RGF ಗೆ ಚೀನಾದ ಹಣವನ್ನು ತೆಗೆದುಕೊಳ್ಳಲಿ ಅಥವಾ ಡೋಕ್ಲಾಮ್ ಸಮಯದಲ್ಲಿ ಚೀನಿಯರನ್ನು ಭೇಟಿಯಾಗಲಿ, ರಾಹುಲ್ ಗಾಂಧಿ ಅವರ ಕೈಗಳು ಯಾವತ್ತಿಗೂ ಭಾರತದ ವಿರುದ್ಧ ಇರುವವರ ಜೊತೆ ಇರುತ್ತದೆ. ಕಾಂಗ್ರೆಸ್ ಕೂಡ ಈ ಬೆಳವಣಿಗೆಯನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಇಂಥ ವ್ಯಕ್ತಿಗಳೊಂದಿಗೆ ಸಭೆ ನಡೆಸುವ ಮೂಲಕವೇ ಪಕ್ಷದ ಪರಂಪರೆಯನ್ನು ನಾಶ ಮಾಡುತ್ತಿದ್ದಾರೆ ಎಂದು ಪತ್ರಕರ್ತೆ ಆರತಿ ಟಿಕ್ಕೋ ಟೀಕಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಮಾರಣಹೋಮ ನಡೆಸಿದ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಪರವಾಗಿ ವಿಶ್ವ ಮಟ್ಟದಲ್ಲಿ ಮಾತನಾಡಿದ ಮಾತನಾಡಿದ ವ್ಯಕ್ತಿ ಜೆರೆಮಿ ಕಾರ್ಬಿನ್. ಪ್ರತಿಪಕ್ಷಗಳ ಧ್ವನಿಯಾಗಿ ತಮ್ಮನ್ನು ತಾವು ತೋರಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಅವರು ಜೆರೆಮಿ ಕಾರ್ಬಿನ್ ಅವರನ್ನು ಭೇಟಿಯಾಗುತ್ತಿರುವುದು ನಿರಾಶಾದಾಯಕವಾಗಿದೆ" ಎಂದು ಅವರು ಹೇಳಿದರು.
2024ರ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಾನ ಪಡೆದ ಪ್ರಶಾಂತ್ ಕಿಶೋರ್ ಆಪ್ತ, ಇಬ್ಬರು ಬಂಡಾಯ ನಾಯಕರು!
ಜೆರೆಮಿ ಕಾರ್ಬಿನ್ ಭಾರತದ ವಿರೋಧಿ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷ್ಯಗಳಿವೆ. ರಾಹುಲ್ ಗಾಂಧಿ ದೇಶದಲ್ಲಿ ಏನು ಮಾತನಾಡುತ್ತಾರೋ ಅದರ ಪ್ರೇರಕ ವ್ಯಕ್ತಿಗಳು ಇವರೇ ಇರಬಹುದು. ರಾಹುಲ್ ಮೇಲೆ ಪ್ರಭಾವ ಬೀರುವ ಪ್ರಭಾವಿಗಳು ಇವರೇ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬರಲಿವೆ ಎಂದು ಬಿಜೆಪಿ ನಾಯಕ ಟಾಮ್ ವಡಕ್ಕನ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ವಾಗ್ದಾಳಿ ಮಾಡಿದ ಬಿಜೆಪಿ ನಾಯಕ, ದೇಶದ ಅತ್ಯಂತ ಹಳೆಯ ಪಕ್ಷವು ಕಾರ್ಬಿನ್ ಮತ್ತು ಪಿಎಫ್‌ಐನಂತಹ "ದೇಶ ವಿರೋಧಿ ಅಂಶಗಳಿಗೆ" ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
MEA ಬದಲಾಗಿದೆ ನಿಜ, ಅಹಂಕಾರವಲ್ಲ ಅದು ಆತ್ಮವಿಶ್ವಾಸ, ರಾಹುಲ್ ಆರೋಪಕ್ಕೆ ಜೈಶಂಕರ್ ತಿರುಗೇಟು!
ಯಾರೀತ ಜೆರೆಮಿ ಕಾರ್ಬಿನ್: ಜೆರೆಮಿ ಕಾರ್ಬಿನ್ ಬ್ರಿಟನ್‌ನ ಅತ್ಯಂತ ವಿವಾದಾತ್ಮಕ ನಾಯಕರಲ್ಲಿ ಒಬ್ಬರು. ಕಾರ್ಬಿನ್, ಅವರ ಪಕ್ಷ ವಿರೋಧಿ ದೃಷ್ಟಿಕೋನಗಳು ಮತ್ತು ಅವರ ನಾಯಕತ್ವದ ಶೈಲಿಗಾಗಿ ಲೇಬರ್ ಪಾರ್ಟಿಯ ನಾಯಕತ್ವದಿಂದ ಮೊದಲು ಹೊರಹಾಕಲ್ಪಟ್ಟರು. ಕಾರ್ಬಿನ್ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ವಾದವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಮತ್ತು ಭಾರತೀಯ ಸೇನೆಯನ್ನು ಪ್ರತಿ ಬಾರಿಯೂ ಅವರು ಟೀಕೆ ಮಾಡುತ್ತಿದ್ದರು. 76 ವರ್ಷದ ಕಾರ್ಬಿನ್ 2015 ರಿಂದ 2020ರ ವರೆಗೆ ಬ್ರಿಟನ್ ನ ವಿರೋಧ ಪಕ್ಷದ ನಾಯಕರಾಗಿದ್ದರು.