Asianet Suvarna News Asianet Suvarna News

2024ರ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಾನ ಪಡೆದ ಪ್ರಶಾಂತ್ ಕಿಶೋರ್ ಆಪ್ತ, ಇಬ್ಬರು ಬಂಡಾಯ ನಾಯಕರು!

2024ರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಅನ್ನು ಪಕ್ಷವು ಮಂಗಳವಾರ ಘೋಷಣೆ ಮಾಡಿದೆ. ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ರಾಹುಲ್ ಗಾಂಧಿ ಮತ್ತು ಪಕ್ಷದ ಇಬ್ಬರು ಪ್ರಮುಖ ಭಿನ್ನಮತೀಯ ನಾಯಕರಾದ ಗುಲಾನ್ ನಬಿ ಆಜಾದ್ ಹಾಗೂ ಆನಂದ್ ಶರ್ಮ ಸ್ಥಾನ ಪಡೆದಿದ್ದಾರೆ.
 

Prashant Kishors Ex Associate 2 Congress Rebels In Congress Task Force 2024 Sonia gandhi Chintan Shivir san
Author
Bengaluru, First Published May 24, 2022, 2:38 PM IST


ನವದೆಹಲಿ (ಮೇ. 24): ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ (Prashant Kishor) ಅವರನ್ನು ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರಿಸಿಕೊಳ್ಳಯವ ಯತ್ನ ವಿಫಲವಾಗಿದೆ. ಆದರೆ, ಅವರ ಜೊತೆಗೆ ಬಹುಕಾಲ ಕೆಲಸ ಮಾಡಿದ್ದ ಮಾಜಿ ಸಹವರ್ತಿ ಸುನೀಲ್ ಕಣುಗೋಲು ( Sunil Kanugolu ) ಅವರನ್ನು ಚುನಾವಣಾ ನಿರ್ವಹಣೆಗಾಗಿ (election management) ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿಕೊಂಡಿದೆ.

ಕಾಂಗ್ರೆಸ್ ಇಂದು ತನ್ನ ರಾಜಕೀಯ ವ್ಯವಹಾರಗಳ ಗುಂಪನ್ನು ಘೋಷಿಸಿತು, ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ರಾಹುಲ್ ಗಾಂಧಿ ಮತ್ತು ಪಕ್ಷದ ಇಬ್ಬರು ಪ್ರಮುಖ ಭಿನ್ನಮತೀಯ ನಾಯಕರಾದ ಗುಲಾನ್ ನಬಿ ಆಜಾದ್ ಹಾಗೂ ಆನಂದ್ ಶರ್ಮ ಸ್ಥಾನ ಪಡೆದಿದ್ದಾರೆ. ಅದರೊಂದಿಗೆ 2024ರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಅನ್ನೂ ಘೋಷಣೆ ಮಾಡಿದೆ. ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಚಿಂತನ ಶಿಬಿರದಿಂದ ತೆಗೆದುಕೊಂಡ ಎರಡು ಪ್ರಮುಖ ಅಂಶಗಳಾಗಿವೆ.

ಮುಂದಿನ ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಪಕ್ಷದ ಕಾರ್ಯತಂತ್ರಗಳನ್ನು ನೋಡಿಕೊಳ್ಳುವ ಭಾಗವಾಗಿ 2024 ಟಾಸ್ಕ್ ಫೋರ್ಸ್ ಕೆಲಸ ಮಾಡಲಿದೆ. ಆದರೆ, ಇದರಲ್ಲಿ 2020ರಲ್ಲಿ ಸೋನಿಯಾ ಗಾಂಧಿಯವರಿಗೆ ತ್ರ ಬರೆದು ಪಕ್ಷದ ನಾಯಕತ್ವದಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗಬೇಕು ಎಂದು ಬಯಸಿದ್ದ ಭಿನ್ನಮತೀಯ ನಾಯಕರ ಗುಂಪು ಅಥವಾ ಜಿ-23 ಎಂದು ಕರೆಸಿಕೊಳ್ಳುವ ಯಾವೊಬ್ಬ ವ್ಯಕ್ತಿಯೂ ಸ್ಥಾನ ಪಡೆದಿಲ್ಲ.

ಚುನಾವಣೆಗಳಲ್ಲಿ ಪಕ್ಷದ ಸರಣಿ ಸೋಲುಗಳ ಬಗ್ಗೆ ಚರ್ಚಿಸಲು ಉದಯಪುರದಲ್ಲಿ ನಡೆದ ಚಿಂತನ ಶಿಬಿರ ಅಥವಾ ಕಾರ್ಯತಂತ್ರದ ಸಭೆಯಲ್ಲಿ ಎರಡು ಪ್ಯಾನೆಲ್ ಗಳನ್ನು ನಿರ್ಮಿಸಲು ಪಕ್ಷ ನಿರ್ಧಾರ ಮಾಡಿತ್ತು. ರಾಜಕೀಯ ವ್ಯವಹಾರಗಳ ಗುಂಪಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯಸ್ಥರಾಗಿದ್ದು, ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಅಂಬಿಕಾ ಸೋನಿ, ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್ ಹಾಗೂ ಜತೇಂದ್ರ ಸಿಂಗ್ ಸ್ಥಾನ ಪಡೆದಿದ್ದಾರೆ.

ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಂಡಾಯ ನಾಯಕ!

ಟಾಸ್ಕ್ ಫೋರ್ಸ್‌ನಲ್ಲಿ ಪಿ ಚಿದಂಬರಂ, ಪ್ರಿಯಾಂಕಾ ಗಾಂಧಿ ವಾದ್ರಾ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಅಜಯ್ ಮಾಕನ್ ಮತ್ತು ರಣದೀಪ್ ಸುರ್ಜೆವಾಲಾ ಇದ್ದಾರೆ. ಕಾರ್ಯಪಡೆಯ ಪ್ರತಿಯೊಬ್ಬ ಸದಸ್ಯರಿಗೆ ಸಂಘಟನೆ, ಸಂವಹನ ಮತ್ತು ಮಾಧ್ಯಮ, ಪ್ರಭಾವ, ಹಣಕಾಸು ಮತ್ತು ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯಗಳನ್ನು ನಿಯೋಜಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಪ್ರತಿಯೊಂದಕ್ಕೂ ಮೀಸಲಾದ ತಂಡಗಳನ್ನು ಹೊಂದಿರುತ್ತದೆ.

ಬೀದಿ ಫೋಕರಿಯೊಬ್ಬ ಮಕ್ಕಳ ಶಿಕ್ಷಣ ನಿರ್ಧರಿಸುವುದು ರಾಜ್ಯದ ದೌರ್ಭಾಗ್ಯವೆಂದ ಕಾಂಗ್ರೆಸ್

ತನ್ನ ಕಾರ್ಯತಂತ್ರದ ಸಭೆಯಲ್ಲಿ, ಸಂಸದೀಯ ಮಂಡಳಿಯ ಬದಲಿಗೆ ಪ್ರತಿ ರಾಜ್ಯ ಮತ್ತು ಕೇಂದ್ರದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯನ್ನು ಹೊಂದಲು ಪಕ್ಷವು ನಿರ್ಧರಿಸಿತು, ಇದು ಕಾಂಗ್ರೆಸ್‌ನ ಬಂಡಾಯ ಗುಂಪಿನ ಪ್ರಮುಖ ಬೇಡಿಕೆಯಾಗಿತ್ತು.

Follow Us:
Download App:
  • android
  • ios