ರಾಜ್ಯ ಸರ್ಕಾರ ಬಸ್ ದರ, ಸ್ಟಾಂಪ್ ಡ್ಯೂಟಿ, ತೆರಿಗೆ, ಹಾಲಿನ ದರ ಹೆಚ್ಚಳ, ಮೆಟ್ರೋ ದರ ಹೆಚ್ಚಳ ಹೀಗೆ ಎಲ್ಲಾ ವಿಧದಲ್ಲೂ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬರೆ ಹಾಕಿದೆ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೋಮಾ ಹಂತ ತಲುಪಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಶಿರಾ (ಜ.23): ರಾಜ್ಯ ಸರ್ಕಾರ ಬಸ್ ದರ, ಸ್ಟಾಂಪ್ ಡ್ಯೂಟಿ, ತೆರಿಗೆ, ಹಾಲಿನ ದರ ಹೆಚ್ಚಳ, ಮೆಟ್ರೋ ದರ ಹೆಚ್ಚಳ ಹೀಗೆ ಎಲ್ಲಾ ವಿಧದಲ್ಲೂ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬರೆ ಹಾಕಿದೆ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೋಮಾ ಹಂತ ತಲುಪಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಬ್ಯಾಂಕ್ ದರೋಡೆ, ಹಸುವಿನ ಕೆಚ್ಚಲು ಕೊಯ್ಯುವುದು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೀಗೆ ನಾನಾ ವಿಧವಾದ ಅಪರಾಧಗಳು ಜರುಗುತ್ತಿವೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಸರ್ಕಾರ ಐಸಿಯುನಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸುವ ವೇಳೆ 25,000 ಕೋಟಿ ರು.ಗಳ ಸಾಲ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ರಾಜ್ಯದ ಜನತೆ ಮೇಲೆ ಸಾಲದ ಹೊರೆಯಾಗಬಾರದೆಂದು ನಾವು ಸಾಲ ತೆಗೆದುಕೊಂಡಿಲ್ಲ. ಇನ್ನೇನು ಕೇರಳ ರಾಜ್ಯದ ರೀತಿ ಭಿಕ್ಷೆ ಬೇಡುವ ಅಂತ ತಲುಪಲಿದೆ. ಅವರದೇ ಪಕ್ಷದ ಶಾಸಕರುಗಳು ಅಭಿವೃದ್ಧಿಗೆ ಹಣವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುತ್ತಾರೆ. ರಾಜ್ಯದ ಎಲ್ಲೆಡೆ ಭ್ರಷ್ಟಾಚಾರ ಅತಿಯಾಗುತ್ತಿದೆ. ಇದು 60% ಕಮಿಷನ್ ಸರ್ಕಾರವಾಗಿದೆ.
ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಗಳಿಂದ ಬೆಳಗಾವಿಯಲ್ಲಿ ಸಮಾವೇಶ: ಜೋಶಿ ವ್ಯಂಗ್ಯ
ಇನ್ನು ಕೆಲವೇ ತಿಂಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯಿಂದ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ. ಎಂದು ಭವಿಷ್ಯ ನುಡಿದರು. ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆಯಿಂದ ನಡೆಯುವುದರಿಂದ ಯಾವುದೇ ಗೊಂದಲವಿಲ್ಲ ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ. ಗೌಡ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿಪಿ ರಂಗನಾಥ್, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ಚಿಕ್ಕನಕೋಟೆ ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.
ಇಳುವರಿಗಾಗಿ ರಾಸಾಯನಿಕ ಬಳಕೆ ಸಲ್ಲದು: ರೈತರು ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ ಅತಿ ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ರೀತಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು ಇಳುವರಿ ಹೆಚ್ಚು ಮಾಡುವ ಉದ್ದೇಶದಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಎಂದು ಹೇಳುತ್ತಿರುವುದರಿಂದ ಎಲ್ಲರೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಆದರೆ ಇದು ಸರಿಯಲ್ಲ. ಉತ್ತಮ ಹಾಗೂ ನೈಸರ್ಗಿಕ ಆಹಾರ ಸಹ ಪ್ರತಿಯೊಬ್ಬರ ಹಕ್ಕಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ಅವರು ಬುಧವಾರ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದೇಶನ ವೇದಿಕೆಯಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಣ್ಣಿನ ಮಹತ್ವ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸಮಗ್ರ ಕೃಷಿ ಪದ್ಧತಿಗಳ ಕುರಿತ ವಿಚಾರ ಸಂಕಿರಣ ಹಾಗೂ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಅಶೋಕ್ ಅವಧಿಯಲ್ಲಿ ಶೇ.48ರಷ್ಟು ಬಸ್ ಪ್ರಯಾಣ ದರ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ ಟಾಂಗ್
ಶ್ರೀ ನಂಜಾವಧೂತ ಸ್ವಾಮೀಜಿಗಳು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಿ ಅನ್ನದಾತರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮಠಗಳು ರಾಜಕೀಯ ಕೇಂದ್ರ ಆಗಬಾರದು ಅನ್ನ ದಾಸೋಹ, ವಿದ್ಯೆ, ಧರ್ಮ ಬೆಳೆಸುವ ಹಾಗೂ ದೇಶಕ್ಕೆ ಅನ್ನ ನೀಡುವ ರೈತನ ಬೆನ್ನೆಲುಬಾಗಿರಬೇಕು ಅಂತಹ ಮಹತ್ಕಾರ್ಯವನ್ನು ಶ್ರೀ ನಂಜಾವಧೂತ ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದರು.ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮಿಗಳು ಮಾತನಾಡಿ ರೈತರು ಕೃಷಿಯಲ್ಲಿ ಉತ್ಸಾಹ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುವ ರೀತಿ ನೋಡಿದಾಗ ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಆಹಾರಕ್ಕಾಗಿ ಸ್ವಾವಲಂಬಿಗಳಾಗಿ ಬದುಕುತ್ತಿರುವ ನಾವುಗಳು ಬೇರೊಬ್ಬರ ಹತ್ತಿರ ಭಿಕ್ಷೆ ಬೇಡುವ ಪರಿಸ್ತಿತಿ ಉಂಟಾಗುತ್ತದೆ. ಕೃಷಿ ಒಂದು ಉದ್ಯಮವಾಗಿ ಬೆಳೆಯಬೇಕು. ಅದರಲ್ಲೂ ಲಾಭ ಸಿಕ್ಕರೆ ಮಾತ್ರ ರೈತರಲ್ಲಿ ಉತ್ಸಾಹ ನಂಬಿಕೆ ಮೂಡಿಸಬಹುದು.
