ಕಾಂಗ್ರೆಸ್ ಸರ್ಕಾರ ಸಂಪೂರ್ಣ ಪಾಪರ್ ಆಗಿ ಬರ್ಬಾದ್ ಆಗೋಗಿದೆ: ಆರ್.ಅಶೋಕ್ ವ್ಯಂಗ್ಯ

ಪೆಟ್ರೋಲ್-ಡೀಸೆಲ್, ಹಾಲಿನ ದರವನ್ನು ಹೆಚ್ಚಿಸಾಯ್ತು. ಈಗ ನೀರಿನ ದರ ಏರಿಸೋಕೆ ರೆಡಿಯಾಗಿದ್ದಾರೆ. ಅಂದರೆ, ಈ ಸರ್ಕಾರ ಸಂಪೂರ್ಣ ಪಾಪರ್ ಆಗಿ ಬರ್ಬಾದ್ ಆಗೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. 

bjp opposition leader r ashok slams on congress govt at mandya gvd

ಮಂಡ್ಯ (ಆ.23): ಪೆಟ್ರೋಲ್-ಡೀಸೆಲ್, ಹಾಲಿನ ದರವನ್ನು ಹೆಚ್ಚಿಸಾಯ್ತು. ಈಗ ನೀರಿನ ದರ ಏರಿಸೋಕೆ ರೆಡಿಯಾಗಿದ್ದಾರೆ. ಅಂದರೆ, ಈ ಸರ್ಕಾರ ಸಂಪೂರ್ಣ ಪಾಪರ್ ಆಗಿ ಬರ್ಬಾದ್ ಆಗೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. ಗ್ಯಾರಂಟಿ ಕೊಡೋಕು ಸರ್ಕಾರದವರ ಬಳಿ ಹಣವಿಲ್ಲ. ದಿವಾಳಿತನದಿಂದ ಪಾರಾಗುವುದಕ್ಕೆ ಅವರಿಗೆ ದಾರಿಯೇ ಇಲ್ಲ. ಗ್ಯಾರಂಟಿ ನಿಲ್ಲಿಸಿದ್ರೆ ದೇಶದ ಪಕ್ಷಕ್ಕೆ ತೊಂದರೆಯಾಗುತ್ತೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿರುವುದರಿಂದಲೇ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆ ಮಾಡಿದ್ದಾರೆ. ನೀರಿನ ದರ ಏರಿಕೆ ಮಾಡಿರೋದು ದೊಡ್ಡ ಅಪರಾಧ. 

ಅದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮುಡಾದಲ್ಲಿ ಹಗರಣ ನಡೆದಿದ್ದರೂ ಮುಖ್ಯಮಂತ್ರಿ ರಾಜೀನಾಮೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರೇ ಬೈದರೂ ನೀರಿನ ದರ ಏರಿಕೆ ಮಾಡದೆ ಇರೋಲ್ಲ ಅಂತಿದಾರೆ. ಅವರಿಗೆ ತಮ್ಮ ಸರ್ಕಾರ ಇರೋಲ್ಲ ಎಂಬುದು ಗ್ಯಾರಂಟಿಯಾಗಿದೆ. ಆದ್ದರಿಂದ ತುಘಲಕ್ ಆಡಳಿತ ಮಾಡುತ್ತಿದ್ದಾರೆ. ನೀರಿನ ದರ ಏರಿಕೆ ಮಾಡಿದರೆ ಬೆಂಗಳೂರು ಶಾಸಕರು, ಬಿಜೆಪಿ ಪಕ್ಷದವರೆಲ್ಲರೂ ಒಗ್ಗೂಡಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

'ಇಷ್ಟರಲ್ಲೇ ಮದುವೆ ಆಗ್ತೀನಿ': ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಕೊಟ್ಟ ನಟ ಡಾಲಿ ಧನಂಜಯ್!

ರಾಜ್ಯ ಸರ್ಕಾರದಿಂದ ಕೆಪಿಎಸ್ಸಿ ಪರೀಕ್ಷೆ ಮುಂದೂಡಿರುವ ಬಗ್ಗೆ ಕೇಳಿದಾಗ, ಕಾಂಗ್ರೆಸ್‌ನವರಿಗೆ ಅಧಿಕಾರದಲ್ಲಿ ಮುಂದುವರೆಯುವ ನಂಬಿಕೆಯೇ ಇಲ್ಲ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಅಷ್ಟು ದಿನ ಲೂಟಿ ಮಾಡೋಕೆ ನಿಂತಿದ್ದಾರೆ. ಅದಕ್ಕೆ ಯಾವುದು ಸಿಗುತ್ತೋ ಅದರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮೊನ್ನೆ ಪಿಎಸ್‌ಐ ಬಳಿ 30 ಲಕ್ಷ ರು. ಪಡೆದಿದ್ದು, ಅದೂ ಕೂಡ ಕೇಸ್ ನಡೆಯುತ್ತಿದೆ. ಕಾಂಗ್ರೆಸ್ ಪಾರ್ಟಿ ಮುಗಿದ ಕಥೆ ಎಂದು ಅಶೋಕ್ ಭವಿಷ್ಯ ನುಡಿದರು.

ಐವಾನ್ ಡಿಸೋಜಾರಿಂದ ದೇಶದ್ರೋಹಿ ಹೇಳಿಕೆ: ಕರ್ನಾಟಕದ ರಾಜ ಭವನಕ್ಕೆ ಬಾಂಗ್ಲಾ ದೇಶದಲ್ಲಾದ ಗತಿಯೇ ಆಗುವುದಾಗಿ ಹೇಳಿಕೆ ನೀಡಿರುವ ಐವಾನ್ ಡಿಸೋಜಾ ಶಾಸಕನಾಗಿರಲು ಯೋಗ್ಯನಲ್ಲ. ಆತನದ್ದು ದೇಶದ್ರೋಹಿ ಹೇಳಿಕೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು. ರಾಜ್ಯಪಾಲರಿಗೆ ಕಾಂಗ್ರೆಸ್ ಅವಮಾನ ಖಂಡಿಸಿ ಹಾಗೂ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಏಜೆಂಟಾಗಿರುವ ಐವಾನ್ ಡಿಸೋಜಾ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ. 

ನೈತಿಕತೆಯಿದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಮಾಜಿ ಸಿಎಂ ಸದಾನಂದಗೌಡ

ಅಂದರೆ, ಕರ್ನಾಟಕದಲ್ಲೂ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತೀರಾ, ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತೀರಾ, ಹಿಂದೂ ದೇಗುಲಗಳನ್ನು ಒಡೆದುಹಾಕುತ್ತೀರಾ, ರಾಜಭವನಕ್ಕೆ ನುಗ್ಗುತ್ತೀರಾ. ಇಂತಹ ಹೇಳಿಕೆ ನೀಡಿರುವ ಐವಾನ್ ಡಿಸೋಜಾರನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಬಾಂಗ್ಲಾದೇಶ ಮಾಡುವುದಕ್ಕೆ ಇದು ಭಾರತ. ಗಂಡುಮೆಟ್ಟಿನ ನಾಡಿದು. ಇಲ್ಲಿ ಅಂತಹವೆಲ್ಲ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಇದು ಬಾಂಗ್ಲಾದೇಶನೂ ಅಲ್ಲ, ಪಾಕಿಸ್ತಾನವೂ ಅಲ್ಲ. ದ್ವೇಷದ ವಿಷಬೀಜ ಬಿತ್ತುವ ಇಂತಹವರನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಇದೇ ಕಾಂಗ್ರೆಸ್ಸಿಗರ ಅಜೆಂಡಾ ಎನ್ನುವುದು ಅರ್ಥವಾಗುತ್ತದೆ ಎಂದು ದೂರಿದರು.

Latest Videos
Follow Us:
Download App:
  • android
  • ios