ಮೋದಿ ಸರ್ಕಾರಕ್ಕೆ ವರುಷ ಡಿಜಿಟಲ್‌ ಸ್ವರೂಪದ ಹರ್ಷ| 750 ಆನ್‌ಲೈನ್‌ ರಾರ‍ಯಲಿ, 1000 ವಿಡಿಯೋ ಪತ್ರಿಕಾಗೋಷ್ಠಿ| ಸರ್ಕಾರದ ಸಾಧನೆ, ಕೊರೋನಾ ನಿರ್ವಹಣೆ ಬಗ್ಗೆ ವಿಡಿಯೋ

ನವದೆಹಲಿ(ಮೇ,.26): 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೇ 30ರಂದು ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ 750ಕ್ಕೂ ಹೆಚ್ಚು ವಚ್ರ್ಯುವಲ್‌(ಡಿಜಿಟಲ್‌ ಮಾಧ್ಯಮ) ರಾರ‍ಯಲಿಗಳ ಮೂಲಕ ಸಂಭ್ರಮಾಚರಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.

ಅಲ್ಲದೆ, ರಾಷ್ಟ್ರ ಮತ್ತು ರಾಜ್ಯದ ನಾಯಕತ್ವದಲ್ಲಿ ದೇಶಾದ್ಯಂತ 1000ಕ್ಕೂ ಹೆಚ್ಚು ವಿಡಿಯೋ ಕಾನ್ಫರೆನ್ಸ್‌ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ಹೋರಾಟವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ ಮೋದಿ ಸರ್ಕಾರದ ಸಾಧನೆ ಕುರಿತು ವಿಡಿಯೋ ಹಾಗೂ ಫೋಟೋಗಳ ಮೂಲಕ ಪ್ರಚಾರ ಮಾಡಲು ನಿರ್ಧರಿಸಿದೆ. ಜೊತೆಗೆ, ಬಿಜೆಪಿಯ ಸಾಧನೆಯ ಪಟ್ಟಿಯನ್ನು ಸಾರ್ವಜನಿಕರಲ್ಲಿ ಪ್ರಚುರಪಡಿಸುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ ನಡ್ಡಾ ಸೂಚಿಸಿದ್ದಾರೆ.

ಅಲ್ಲದೆ ಈ ಸಂದರ್ಭದಲ್ಲಿ ಪ್ರತೀ ತಾಲೂಕುಗಳಲ್ಲಿ ಪ್ರತಿಯೊಬ್ಬರಿಗೂ ಕೊರೋನಾದಿಂದ ತಮ್ಮನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಮುಖಗವಸು, ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಲಾಗುತ್ತದೆ ಎಂದು ಬಿಜೆಪಿ ಘೋಷಣೆ ಮಾಡಿದೆ.