ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದ್ರೆ, ಆ ಗಳಿಗೆ ನಿಮ್ಮನ್ನ ಕಿತ್ತಾಕ್ತಾರೆ: ಖರ್ಗೆಗೆ ಸಿ.ಟಿ. ರವಿ ಸಲಹೆ
ಸೋತು ನೆಲಕಚ್ಚಿ, ಸೋಲಿನ ಮೇಲೆ ಸೋಲಿನ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ಮುಳುಗುವ ಹಡಗಿಗೆ ಖರ್ಗೆ ಕ್ಯಾಪ್ಟನ್
ಹಾಸನ(ಅ.26): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದು(ಬುಧವಾರ)ನ ಕುಟುಂಬ ಸಮೇತವಾಗಿ ಆಗಮಿಸಿ ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ದೇವಿಯ ದರ್ಶನದ ಬಳಿಕ ಪೂಜೆ ಸಲ್ಲಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಪ್ರೀತಂ ಗೌಡ್ರು ಒಳ್ಳೆಯ ಕೆಲಸವನ್ನ ಮಾಡುತ್ತಿದ್ದಾರೆ. ಎಂಎಲ್‌ಎ ಆಗಿ ಇಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಮಂತ್ರಿಯಾದರೆ ಇನ್ನಷ್ಟು ಒಳ್ಳೆಯ ಕೆಲಸ ಮಾಡ್ತಾರೆ. ಮಂತ್ರಿ ಆಗುವ ಅವಕಾಶವಿದ್ದರೆ ಶುಭ ಹಾರೈಸುತ್ತೇನೆ, ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಅಂತ ಹೇಳುವ ಮೂಲಕ ಶಾಸಕ ಪ್ರೀತಂಗೌಡರ ಪರ ಸಿ.ಟಿ.ರವಿ ಬ್ಯಾಟ್ ಬೀಸಿದ್ದಾರೆ.
AICC ಗಾದಿ ಏರಿ ಭಾವುಕರಾದ ಖರ್ಗೆ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು
ಯಾವಾಗಲೂ ಲಾಸ್ಟ್ ಓವರ್‌ನಲ್ಲಿ ಸಿಕ್ಸರ್ ಹೊಡೆಯೋರು, ಫೋರ್ ಹೊಡೆಯೋರು ಬೇಕಾಗುತ್ತಾರೆ. ಡಿಫೆನ್ಸ್ ಆಡಕೆ ಆಗಲ್ಲ, ಆರಂಭದಲ್ಲಿ ಕ್ರಿಕೆಟ್‌ನಲ್ಲಿ ಡಿಫೆನ್ಸ್ ಆಡಿಕೊಂಡು ಹೋಗಬಹುದು. ಸ್ಲಾಗ್ ಓವರ್ ಇದಿಯಲಾ ಅವಾಗ ಫೋರು, ಸಿಕ್ಸರ್ ಹೊಡೆಯಬೇಕಾಗುತ್ತದೆ. ತಂಡ ಗೆಲ್ಲಬೇಕು ಅಂದಾಗ ಡಿಫೆನ್ಸ್ ಆಡೋರನ್ನ ಕಡೆಗೆ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್‌ನಲ್ಲ ಕಳ್ಸಲ್ಲ, ಕಡೆಗೆ ಕಳ್ಸೋದು ಫೋರು, ಸಿಕ್ಸರ್ ಹೊಡೆಯೋರನ್ನ. ಈಗ ಸಂಪುಟ ಪುನರ್ ರಚನೆ ಅಂತ ಆದರೆ ಇರುವ ಆರೇಳು ತಿಂಗಳಲ್ಲಿ ಫೋರು, ಸಿಕ್ಸರ್ ಹೊಡೆದು ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರುವವರಿಗೆ ಅವಕಾಶ ಸಿಗಬೇಕು. ಈಗ ಸ್ಕೋರ್ ಏನ್ ಕಡಿಮೆ ಆಗಿದೆ ಅನ್ನುವ ಪ್ರಶ್ನೆಯೇ ಬರಲ್ಲ ಅಂತ ಹೇಳಿದ್ದಾರೆ.
ವಿಪಕ್ಷಗಳ ವಿರುದ್ಧ ಹರಿಹಾಯ್ದ ಸಿ.ಟಿ. ರವಿ
ಸಿಎಂ ಬಸವರಾಜ ಬೊಮ್ಮಯಿ ಅವರು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ. ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನುವ ಹಾಗೆ ವಿಪಕ್ಷದವರು ಆಡುತ್ತಿದ್ದಾರೆ. ಅವರಿಗೆ ಮೀಸಲಾತಿ ಹೆಚ್ಚಳ ಮಾಡದೇ ಇದ್ದಾಗ ಮಾತು ಕೊಟ್ಟಿದ್ರಿ ಮಾಡ್ಲಿಲಾ ಅಂತ ಕೇಳುತಿದ್ರು, ಮಾಡಿದ ಮೇಲೆ ಇನ್ನೊಂದು ಹೊಸ ರೀತಿಯ ವರಸೆ ತೆಗೆದಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನೋದು ಇದರಿಂದ ಅರ್ಥ ಆಗುತ್ತೆ ಅಂತ ವಿಪಕ್ಷಗಳ ವಿರುದ್ಧ ಸಿ.ಟಿ. ರವಿ ಹರಿಹಾಯ್ದಿದ್ದಾರೆ. ಇದೇ ಸಂದರ್ಭದಲ್ಲಿ ಸಿ.ಟಿ.ರವಿಗೆ ಶಾಸಕ ಶಾಸಕ ಪ್ರೀತಂಗೌಡ ಸಾಥ್ ನೀಡಿದ್ದರು.
ಮನ್‌ಮೋಹನ್ ಸಿಂಗ್ 2.0 ವರ್ಶನ್ ಖರ್ಗೆ, ನೂತನ ಅಧ್ಯಕ್ಷರ ಟೀಕಿಸಿದ ನಾಯಕನಿಗೆ ಗೇಟ್‌ಪಾಸ್!
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಖರ್ಗೆ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ರಾಜ್ಯದ ಒಬ್ಬರು 50 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಅವರಿಗೆ, ಅವರ ಹಿರಿಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ನಾನು ಕಿರಿಯನಾಗಿ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ರಿಮೋಟ್ ಪರದಿಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ರೆ ಸೀತರಾಂ ಕೇಸರಿ ಏನು ಮಾಡಿದ್ರಿ ಅನ್ನೋದನ್ನ ನೆನಪಿನಲ್ಲಿ ಇಟ್ಕಂಡಿರಿ. ಯಾವುದೇ ಕಾರಣಕ್ಕೂ ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇರಿ, ಹಾಗಿದ್ರೆ ಮಾತ್ರ ನಿಮ್ಮನ್ನ ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದ್ರೆ, ಆ ಗಳಿಗೆ ಅಪಮಾನ ಮಾಡಿ ಕಿತ್ತಾಕುತ್ತಾರೆ. ಈ ಹಿಂದೆ ನಿಜಲಿಂಗಪ್ಪ, ಸೀತಾರಂ ಕೇಸರಿ ಅವರಿಗೆ ಮಾಡಿದ್ರು, ಯಾರು ಕೂಡ ಸ್ವತಂತ್ರ ಅಸ್ತಿತ್ವವನ್ನ ತೋರಿಸುವ ಪ್ರಯತ್ನ ಮಾಡುತ್ತಾರೆ ಅವರನ್ನ ಕಾಂಗ್ರೆಸ್‌ನ ಸೋನಿಯಾಜಿ, ರಾಹುಲ್‌ಜಿ ಕುಟುಂಬ ಸಹಿಸಲ್ಲ. ನಿಮ್ಮ ಸ್ವತಂತ್ರ ಅಸ್ತಿತ್ವವನ್ನು ಯಾವುದೇ ಕಾರಣಕ್ಕೂ ತೋರಿಸಲು ಹೋಗಬೇಡಿ ಅಂತ ಸಲಹೆ ನೀಡಿದ್ದಾರೆ.
ಮುಳುಗುವ ಹಡಗಿಗೆ ಖರ್ಗೆ ಕ್ಯಾಪ್ಟನ್
ಸ್ವತಂತ್ರ ಅಸ್ತಿತ್ವವನ್ನು ಮರೆತು ಇದ್ರೆ, ಇರುವಷ್ಟು ದಿನ ಇರಬಹುದು. ರಾಜಕೀಯವಾಗಿ ಏನು ಪರಿಣಾಮ ಆಗುತ್ತೆ ಅಂತ ಇವತ್ತು ಹೇಳಲು ಆಗಲ್ಲ. ಅವರು ಮಾಡಿರೋದೇನು ಪ್ರಧಾನಮಂತ್ರಿ ಅಭ್ಯರ್ಥಿ ಅಲ್ಲ. ಸೋತು ನೆಲಕಚ್ಚಿ, ಸೋಲಿನ ಮೇಲೆ ಸೋಲಿನ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ಮುಳುಗುವ ಹಡಗಿಗೆ ಕ್ಯಾಪ್ಟನ್ ಆಗಿದ್ದಾರೆ. ಕಾಂಗ್ರೆಸ್ ಒಂದು ಮುಳುಗುವ ಹಡಗು, ಹಡಗನ್ನು ಉಳಿಸುವುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಲೈಫ್ ಜಾಕೆಟ್ ಹಾಕೊಂಡ್ರೆ ಅವರು ಉಳಿದುಕೊಳ್ಳಬಹುದು, ಹಡಗು ಉಳಿಯಲ್ಲ. ಇಷ್ಟು ಮುಂದಾಲೋಚನೆ, ಅನುಭವ ಖಂಡಿತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ ಭಾವಿಸುತ್ತೇನೆ. ಸತತ 50 ವರ್ಷಗಳ ಕಾಲ ಅಧಿಕಾರದ ರಾಜಕಾರಣದ ರುಚಿ ಕಂಡಿದ್ದಾರೆ. ಯಾರಾದರೂ ತನ್ನ ಸಾಮರ್ಥ್ಯ ತೋರಿಸಲು ಹೋಗಿದ್ರೆ ಸ್ವಲ್ಪನಾದ್ರು ಅಧಿಕಾರದಿಂದ ವಂಚಿತರಾಗಿರುವರು ಅಂತ ಲೇವಡಿ ಮಾಡಿದ್ದಾರೆ.