ಕಾಂಗ್ರೆಸ್ಸಿಗರಿಗೆ ದೇಶದ ಸೈನಿಕರ ಮೇಲೆ ನಂಬಿಕೆ ಇಲ್ಲ: ಸಿ.ಟಿ.ರವಿ

ಇದು ರಾಹುಲ್‌ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. 

bjp national general secretary ct ravi slams on congress at chikkamagaluru gvd

ಚಿಕ್ಕಮಗಳೂರು (ಡಿ.18): ಇದು ರಾಹುಲ್‌ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. ಒಂದೊಂದು ಇಂಚು ಜಾಗಕ್ಕೂ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿದ್ದೆಗೆ ಜಾರಿದೆ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕುಕ್ಕರ್‌ ಸ್ಫೋಟಗೊಂಡಿದ್ದು ಸತ್ಯ, ಆಟೋ ಚಾಲಕ, ಕುಕ್ಕರ್‌ ಬಾಂಬ್‌ ತಯಾರಿಸಿ ಮುಖ್ಯಮಂತ್ರಿಗಳನ್ನು, ಅವರ ಸಭೆಯನ್ನು ಟಾರ್ಗೆಟ್‌ ಮಾಡಿದ್ದವನೂ ಆಸ್ಪತ್ರೆಯಲ್ಲಿದ್ದಾನೆ. ಬಾಂಬ್‌ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್‌ ಬ್ಲಾಸ್ಟ್‌ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

2000 ಆಸುಪಾಸಿನಲ್ಲಿ ನಡೆದ ಚರ್ಚುಗಳಲ್ಲಿನ ಸರಣಿ ಬಾಂಬ್‌ ಸ್ಫೋಟದ ವಿಷಯದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ತನಿಖೆಗೂ ಮೊದಲೇ ಈ ಕೃತ್ಯದ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ ಎಂದು ಹೇಳಿಕೆ ಕೊಟ್ಟಿದ್ದರು. ಆಕಸ್ಮಿಕವಾಗಿ ಬಾಂಬ್‌ ಒಯ್ಯುವ ವೇಳೆ ರಸ್ತೆ ಹಂಪ್‌ ಹತ್ತುವಾಗ ವಾಹನದಲ್ಲಿ ಬಾಂಬ್‌ ಸ್ಫೋಟವಾಗಿದ್ದ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ತಿಳಿಯಿತು. ಪಾಕಿಸ್ತಾನದಿಂದ ಪ್ರಚೋದನೆ ಪಡೆದ ಹುಬ್ಬಳ್ಳಿ ಮೂಲದ ಸಂಘಟನೆ ಬಾಂಬ್‌ ಸ್ಫೋಟವನ್ನು ಮಾಡಿತ್ತು ಎನ್ನುವ ಸತ್ಯ. ಎಲ್ಲರನ್ನೂ ಬಂಧಿಸುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡಿತ್ತು, ಅಂದು ವಿವೇಚನೆ ಇಲ್ಲದೆ ಹೇಳಿಕೆ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ, ಇಂದು ವಿವೇಚನೆ ಇಲ್ಲದೆ ಅವರ ಅಧ್ಯಕ್ಷರನ್ನು ಸಮರ್ಥನೆ ಮಾಡುತ್ತಿರುವುದು ಪ್ರಿಯಾಂಕ್‌ ಖರ್ಗೆ ಎಂದು ಹೇಳಿದರು.

Chikkamagaluru: ಸಿ.ಟಿ.ರವಿ ಫ್ಲೆಕ್ಸ್‌ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು

ಡಿಎನ್‌ಎ: ಈ ಡಿಎನ್‌ಎ ಮತ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಓಲೈಸುವ ಡಿಎನ್‌ಎ ಇದನ್ನೇ ಕಾಂಗ್ರೆಸ್‌ ಪಾಲಿಸುತ್ತಿದೆ. ರಾಹುಲ್‌ ಗಾಂಧಿ ಹೇಳಿದ್ದನ್ನೇ ಬಿಲಾವಲ್‌ ಬುಟ್ಟಾ ಹೇಳೋದು, ಅವರು ಹೇಳಿದ್ದನೇ ರಾಹುಲ್‌ ಗಾಂಧಿ ಹೇಳೋದು, ಇದು ಬಹು ದೊಡ್ಡ ಅಪಾಯಕಾರಿ ಸಂಗತಿ. ಇವರಿಬ್ಬರ ನಡುವಿನ ಹೊಂದಾಣಿಕೆ ಏನೆಂದು ಗೊತ್ತಿಲ್ಲ. ಆದರೆ ಇಬ್ಬರೂ ವಂಶ ಪಾರಂಪರ್ಯದ ಕುಡಿಗಳು, ಅಲ್ಲಿರುವ ಪಾಕಿಸ್ತಾನ ಆ ತುಂಡು ಹಾಗೂ ಇದೂ ಕೂಡ ವಂಶ ಪಾರಂಪರ್ಯದ ಕುಡಿ ಎನ್ನುವುದಂತೂ ಗೊತ್ತು ಎಂದು ವ್ಯಂಗ್ಯ ಮಾಡಿದರು.

ಕಾಂಗ್ರೆಸ್ಸಿಗರಿಗೆ ದೇಶದ ಸೈನಿಕರ ಮೇಲೆ ನಂಬಿಕೆ ಇಲ್ಲ. ನಮ್ಮ ದೇಶದ ಸೇನೆ ಸರ್ಜಿಕಲ್‌ ಸ್ಟೆ್ರೖಕ್‌ ಮಾಡಿದೆ ಎಂದರೆ ಸಾಕ್ಷಿ ಕೇಳ್ತಾರೆ. ಆ ಸಾಕ್ಷಿಯನ್ನು ಪಾಕಿಸ್ತಾನ ಬಹಳ ದಿನಗಳ ನಂತರ ಸಂಸತ್‌ನಲ್ಲಿ ಒಪ್ಪಿಕೊಳ್ಳುತ್ತೆ. ಅಲ್ಲಿರುವ ಮಾಧ್ಯಮಗಳು ವರದಿ ಮಾಡುತ್ತವೆ. ಆದರೆ ಕಾಂಗ್ರೆಸ್‌ ಸಾಕ್ಷಿ ಕೇಳುತ್ತೆ. ಉಗ್ರರನ್ನು ಬೆಂಬಲಿಸುವ, ದೆ ಆರ್‌ ಆಲ್‌ ಬ್ರದ​ರ್‍ಸ್ ಎನ್ನುವ ಮಾನಸಿಕತೆಯನ್ನು ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣದಲ್ಲಿ, ಪಾದರಾಯನಪುರ ಪ್ರಕರಣದಲ್ಲಿ ನೋಡಿದ್ದೆವು. ಅದು ಮುಂದುವರೆದು ಕುಕ್ಕರ್‌ ಬ್ಲಾಸ್ಟ್‌ನ ರೂವಾರಿಯವರೆಗೂ ತಲುಪಿರುವುದು ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ. ಇದರಿಂದ ಕಾಂಗ್ರೆಸ್‌ ಹೊರಬರಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಜನ ನಿಯಂತ್ರಿಸುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.

ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ

ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ಅಷ್ಟಕ್ಕೇ ಸೀಮಿತವಾದರೆ ಅದು ರಾಜಕೀಯವಾಗಿ ಮಾಡುವ ಸಾಮಾನ್ಯ ಕಸರತ್ತು ಎಂದುಕೊಳ್ಳುತ್ತಿದ್ವಿ. ಅದನ್ನ ಮೀರಿ ಕುಕ್ಕರ್‌ ಸ್ಫೋಟ ಮಾಡಿದವರ ಬೆಂಬಲಕ್ಕೆ ನಿಲ್ಲುವುದು, ಬೆಂಕಿ ಹಾಕಿದವರ ಬೆಂಬಲಕ್ಕೆ ನಿಲ್ಲುವುದು, ಜಾಮೀನು ಕೊಡಿಸಲು ವಕೀಲರ ನೇಮಿಸಿ ಸಹಾಯ ಮಾಡುವುದು, ಹಿಜಾಬ್‌ ಪ್ರಕರಣದಲ್ಲಿ ಸಮವಸ್ತ್ರದ ವಿರುದ್ಧ ಎಲ್ಲ ರೀತಿಯ ಸಹಾಯ ಮಾಡುವುದು, ಮತಾಂತರ ನಿಷೇಧ ಕಾಯ್ದೆ ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳುವುದು, ಲವ್‌ ಜಿಹಾದ್‌ ಬೆಂಬಲಿಸುವ ಮಾನಸಿಕತೆ ಅಪಾಯಕಾರಿ. ಇದು ಕಾಂಗ್ರೆಸ್‌ ಅಧೋಗತಿಗೆ ಒಂದು ನಿದರ್ಶನ
-ಸಿ.ಟಿ.ರವಿ, ಶಾಸಕ

Latest Videos
Follow Us:
Download App:
  • android
  • ios