ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ರೇಡ್ ಆಗ್ತಿರ್ಲಿಲ್ಲ, ಕೇಸ್ ಮುಚ್ಚಾಕೋ ಕೆಲಸ ಆಗ್ತಿತ್ತು: ಸಿ.ಟಿ.ರವಿ ವಾಗ್ದಾಳಿ
ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೂ ಕಾಂಗ್ರೆಸ್‌ನವರು ಕ್ಲೀನ್ ಚಿಟ್ ಕೊಟ್ರು. ನೀರಾವರಿ ಇಲಾಖೆ ಕಳ್ಳ ಬಿಲ್ ಬರೆದವರಿಗೂ ಕ್ಲೀನ್ ಚಿಟ್ ಕೊಟ್ರು, ಮರಳು ದಂಧೆ ಅವರಿಗೂ ಕ್ಲೀನ್ ಚಿಟ್ ಕೊಟ್ರು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ
ಚಿಕ್ಕಮಗಳೂರು(ಮಾ.03): ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ರೇಡ್ ಆಗ್ತಿರ್ಲಿಲ್ಲ, ಕೇಸ್ ಮುಚ್ಚಾಕೋ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಎಸಿಬಿ ಮೂಲಕ 54 ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದರು ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಲಂಚ ಪಡೆಯುವಾಗ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಹಿನ್ನೆಲೆಗೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ, ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೂ ಕಾಂಗ್ರೆಸ್‌ನವರು ಕ್ಲೀನ್ ಚಿಟ್ ಕೊಟ್ರು. ನೀರಾವರಿ ಇಲಾಖೆ ಕಳ್ಳ ಬಿಲ್ ಬರೆದವರಿಗೂ ಕ್ಲೀನ್ ಚಿಟ್ ಕೊಟ್ರು, ಮರಳು ದಂಧೆ ಅವರಿಗೂ ಕ್ಲೀನ್ ಚಿಟ್ ಕೊಟ್ರು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋಸ್ಟ್ ಕರಪ್ಟ್ ಗವರ್ನಮೆಂಟ್: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ರಿಡ್ಯೂನಲ್ಲಿ 8 ಸಾವಿರ ಕೋಟಿ ಸರ್ಕಾರಕ್ಕೆ ನಷ್ಟ ಆಗಿದೆ ಅಂತ ಕೆಂಪಣ್ಣ ಆಯೋಗ ವರದಿ ನೀಡಿದೆ. ನಷ್ಟ ಆಗಿದೆ ಅಂತ ವರದಿ ನೀಡಿದೆ, ಕದ್ದ ಕಳ್ಳರು ಯಾರು?. ಪ್ರಾಮಾಣಿಕ ತನಿಖೆ ಆಗಿದ್ರೆ ಕಳ್ಳ ಯಾರೂ, ಲೂಟಿ ಹೊಡೆದವರು ಯಾರು ಅಂತ ಹೊರಗೆ ಬರ್ತಿತ್ತು. ಇವತ್ತು ಯಾರೇ ಇದ್ರೂ ಯಾವ ವಿಚಾರದಲ್ಲೂ ಯಾರನ್ನೂ ಬಚಾವ್ ಮಾಡೋ ಪ್ರಶ್ನೆಯೇ ಇಲ್ಲ ಅನ್ನೋದಕ್ಕೆ ಇದು ತಾಜಾ ನಿದರ್ಶನವಾಗಿದೆ. ಅದೇ ಕಾರಣಕ್ಕೆ ಈ ರೇಡ್ ಆಗಿರೋದು ಅಂತ ಹೇಳಿದ್ದಾರೆ.