ಕುಟುಂಬದ ಹಿತಕ್ಕಾಗಿ ಕಾಂಗ್ರೆಸ್ ಚುನಾವಣೆ ಎದುರಿಸ್ತಿದೆ: ತೇಜಸ್ವಿ ಸೂರ್ಯ

ಎರಡು ದಿನದಲ್ಲಿ ಪ್ರಚಾರ ಮುಗಿಯಲಿದೆ. ಚುನಾವಣೆಗೆ ಕಾಯುತ್ತಿದ್ದೇವೆ. ಕರಾವಳಿ, ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವುದು ಜನರ ಬಯಕೆಯಾಗಿದೆ. ಮೋದಿಜಿ ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೂ ಮನವರಿಕೆಯಾಗಿದೆ: ಸಂಸದ ತೇಜಸ್ವಿ ಸೂರ್ಯ 
 

BJP MP Tejasvi Surya Slams Congress grg

ಬಾಗಲಕೋಟೆ(ಮೇ.05):  ಕಾಂಗ್ರೆಸ್ಸಿಗರು ತಮ್ಮ ಕುಟುಂಬದ ಸದಸ್ಯರಿಗಾಗಿ ಚುನಾವಣೆ ನಡೆಸುತ್ತಿದ್ದಾರೆ. ಮಂತ್ರಿಗಳ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆಗೆ ಮುಂದಾಗಿದೆ. ಆದರೆ, ನರೇಂದ್ರ ಮೋದಿ ಬಡವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ನವನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನದಲ್ಲಿ ಪ್ರಚಾರ ಮುಗಿಯಲಿದೆ. ಚುನಾವಣೆಗೆ ಕಾಯುತ್ತಿದ್ದೇವೆ. ಕರಾವಳಿ, ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವುದು ಜನರ ಬಯಕೆಯಾಗಿದೆ. ಮೋದಿಜಿ ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೂ ಮನವರಿಕೆಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ: ಸಂಸದ ತೇಜಸ್ವಿ ಸೂರ್ಯ

ಸಚಿವ ಸಂತೋಷ ಲಾಡ್ ಪ್ರಧಾನಿ ಮೋದಿ ಬಗ್ಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. 20 ದಿನಗಳಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲಾಡ್ ಅವರು ಪ್ರಧಾನಿಯನ್ನು ಚರ್ಚೆಗೆ ಕರೆದಿದ್ದಾರೆ. ಡಿಬೇಟ್ ಮಾಡಲು ಪಕ್ಷದ ಮುಖಂಡರಾದ ರಾಹುಲ್ ಕರೆಯುತ್ತಿಲ್ಲ. ಲಾಡ್ ಕರೆಯುತ್ತಿದ್ದಾರೆ. ರಾಹುಲ್ ಡಿಬೆಟ್ ಮಾಡುವ ಸ್ಥಿತಿಯಲ್ಲಿದ್ದಾರಾ ಎನ್ನುವುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರಿಸಲಾಗದ ರಾಹುಲ್, ರಾಯಬರೇಲಿಗೆ ಓಡಿ ಹೋಗಿದ್ದಾರೆ. ಮೋದಿ ಜತೆ ಡಿಬೆಟ್‌ಗೆ ಬರುತ್ತಾರಾ?ಈಬಗ್ಗೆಲಾಡ್ ಆತ್ಮಾವಲೋಕನ ಮತ್ತೊಮ್ಮೆ ಮಾಡಿಕೊಳ್ಳಬೇಕು ಎಂದರು.

14 ಮಂದಿ ಪ್ರಧಾನಿಗಳು ಮಾಡದ ಕೆಲಸ ನರೇಂದ್ರ ಮೋದಿ ಮಾಡಿದ್ದಾರೆ. ದೇಶದ ಖಜಾನೆ ಲೂಟಿ ಮಾಡಿ, ದೇಶದ ಆರ್ಥಿಕ ಮಟ್ಟ ಕುಸಿಯುವಂತೆ ಮಾಡಿದ ಕಾಂಗ್ರೆಸ್ಸಿಗರ ಮಾತಿಗೆ ಬೆಲೆ ಕೊಡಬೇಡಿ. ಫಲಿತಾಂಶ ಬಳಿಕ ಇಲ್ಲಿನ ಸಚಿವರು ಪಶ್ಚಾತಾಪ ಪಡಬೇಡಿ ಎಂದು ತಿರುಗೇಟು ನೀಡಿದರು. ಬಿಜೆಪಿ ಮುಖಂಡರು ಇದ್ದರು.

Latest Videos
Follow Us:
Download App:
  • android
  • ios