ಬೆಂಗಳೂರು(ಜ.18): ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಶನಿವಾರ) ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್‌ಗೆ ಆಗಮಿಸಿದ್ದಾರೆ. ಬಳಿಕ ಅಮಿತ್ ಶಾ ಅವರು HALನಿಂದ ನೇರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ  ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

"

'ವಿವೇಕ ದೀಪಿನೀ' ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ; 2 ಲಕ್ಷ ಮಕ್ಕಳಿಂದ ಶ್ಲೋಕ ಪಠಣ

ಶಾ ವೇದಿಕೆ ಮೇಲೆ ಬಂದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿವೇಕದೀಪಿನಿ ಶ್ಲೋಕ ಪಠಣ ಮಾಡಿದರು. ಶ್ಲೋಕದ ಮೂಲಕವೇ ಅಮಿತ್​ ಶಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. 

ಬಳಿಕ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಆರಂಭಿಸಿದರು. ಮಕ್ಕಳಿಗೆ ವೇದ-ಉಪನಿಷತ್ತುಗಳ ಪ್ರಾಮುಖ್ಯತೆಯನ್ನು ಶಾ ಮನವರಿಕೆ ಮಾಡಿಕೊಟ್ಟರು.

ತೇಜಸ್ವಿ ಸೂರ್ಯ ಕಚೇರಿ ಉದ್ಘಾಟಿಸಿದ ಶಾ
ಹೌದು...ಅರಮನೆ ಮೈದಾನದಲ್ಲಿ  ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮ ಮುಗಿಸಿಕೊಂಡು ಜಯನಗರಕ್ಕೆ ತೆರಳಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ತೇಜಸ್ವಿ ಸೂರ್ಯ ಅವರು ಅಮಿತ್ ಶಾಗೆ ವಿಶೇಷ ಉಡುಗೊರೆಯೊಂದನ್ನು ನೀಡಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮುಖದ ಅಮಿತ್ ಶಾ ಅವರ ಮುಖ ಇರುವ ಪೇಟಿಂಗ್‌ ಫ್ರೇಮ್ ಗಿಫ್ಟ್ ನೀಡಿದರು. ಅದನ್ನು ಸ್ವತಃ ತೇಜಸ್ವಿ ಸೂರ್ಯ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.