Asianet Suvarna News Asianet Suvarna News

ಕೇಂದ್ರದಿಂದ ಸರ್ವರ್ ಹ್ಯಾಕ್ ಆರೋಪ: ಜಾರಕಿಹೊಳಿಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು!

ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಬುದ್ಧಿಯೇ ಅಷ್ಟೇ ಇದೆ ಎಂದು ಕಿಡಿಕಾರಿದರು. 

BJP MP Ramesh Jigajinagi Slams On Satish Jarkiholi At Vijayapura gvd
Author
First Published Jun 21, 2023, 11:57 AM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜೂ.21): ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಬುದ್ಧಿಯೇ ಅಷ್ಟೇ ಇದೆ ಎಂದು ಕಿಡಿಕಾರಿದರು. ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನೀವೆ ಸರ್ವರ್ ಹ್ಯಾಕ್ ಮಾಡಿದ್ದೀರಿ: ಸರ್ವರ್ ಹ್ಯಾಕ್ ಯಾಕೆ ಮಾಡ್ತಾರೆ ಎಂದು ಸತೀಶ ಜಾರಕಿಹೊಳಿ ನೀಡಿದ ಹೇಳಿಕೆ ಹಾಸ್ಯಾಸ್ಪದವಾಗಿದೆ. ನೀವೆ ಮಾಡಿದ್ದೀರಿ ಎಂದ ನಾವು ಆರೋಪಿಸ್ತವೇ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಹ್ಯಾಕ್ ಮಾಡಿಸಿರಬಹುದು ಎಂದರು. ಈ ಆರೋಪದಿಂದ ಯಾವುದೇ ಉಪಯೋಗ ಇಲ್ಲ ಎಂದರು. ನಮ್ಮ ಮೇಲೆ ನೀವು, ನಿಮ್ಮ ಮೇಲೆ ನಾವು ಗೂಬೆ ಕೂರಿಸೋದು ಸರಿಯಲ್ಲ. ಸರ್ವರ್ ಡೌನ್ ಆಗೋಕೆ ನಮ್ಮವರು, ನಮ್ಮ ಕೇಂದ್ರ ಸರ್ಕಾರ ಕಾರಣ ಅಲ್ಲಾ ಎಂದು ಸ್ಪಷ್ಟಪಡಿಸಿದರು.

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ: ಬಾಲಚಂದ್ರ ಜಾರಕಿಹೊಳಿ

ನಿನ್ನ ಊರಲ್ಲೆ ಯಾಕೆ ಸರ್ವರ್ ಡೌನ್?: ಸರ್ವರ್ ದೇಶದಲ್ಲಿ ಎಲ್ಲ ಕಡೆ ಆಗಬೇಕಿತ್ತಲ್ಲ. ನಿನ್ನ ಊರಲ್ಲಿ ಅಷ್ಟೆ ಯಾಕೆ ಡೌನ್ ಆಯ್ತು..? ಎಂದು ಜಾರಕಿಹೊಳಿಗೆ ಪ್ರಶ್ನಿಸಿದರು. ಇದರಲ್ಲಿ‌ ನಿನ್ನದೆ ಜಾಲ ಯಾಕಿರಬಾರದು. ಪರೋಕ್ಷವಾಗಿ ಸರ್ವರ್ ಡೌನ್ ಹಿಂದೆ ಕಾಂಗ್ರೆಸ್‌ನದ್ದೆ ಜಾಲ ಇದೆ ಎಂದ ಜಿಗಜಿಣಗಿ ಗಂಭೀರ ಆರೋಪ‌ ಮಾಡಿದರು. ಕಾಂಗ್ರೆಸ್, ಸತೀಶ್ ತಮಗೆ ತಿಳಿದಿದ್ದು ಹೇಳಲಿ. ನಾವು ತಿಳಿದಿದ್ದು ಹೇಳೋಕೆ ದಡ್ಡರಲ್ಲ. ಸತ್ಯವನ್ನೆ ಹೇಳ್ತೀವಿ ಎಂದರು. ಸತ್ಯ ಬಿಚ್ಚಿ ಹೇಳಿದ್ರೆ ನಮ್ಮ ಮರ್ಯಾದೆ ಏನು ಕಡಿಮೆ ಆಗಲ್ಲ ಎಂದು ಮರು ಪ್ರಶ್ನಿಸಿದರು.

ಲುಂಗಿ ಏರಿಸಿ ಫ್ರೀ ಅಕ್ಕಿ ಘೋಷಣೆ ಮಾಡಿದ್ದಾರೆ: ಅಕ್ಕಿ ಘೋಷಣೆ ಮಾಡುವಾಗ ಲುಂಗಿ ಏರೆರಿಸಿ ಘೋಷಣೆ ಮಾಡಿದ್ರು. ಲುಂಗಿ ಏರಿಸಿ 10 ಕೆ.ಜಿ.. 10 ಕೆ.ಜಿ ಎಂದು ಘೋಷಣೆ ಮಾಡಿದ್ರು ಕೇಂದ್ರ ಕೊಡ್ತಿದ್ದ 5 ಕೆ.ಜಿ ಅಕ್ಕಿಯನ್ನ ಪ್ರಸ್ತಾಪಿಸಲೇ ಇಲ್ಲ ಎಂದು ಸಂಸದ ಜಿಗಜಿಣಗಿ ವ್ಯಂಗ್ಯವಾಡಿದರು. ಕೇಂದ್ರದ ಅಕ್ಕಿ ಬಿಟ್ಟು ತಾವೇ 10 ಕೆ.ಜಿ ಕೊಡ್ತೇವೆ ಎನ್ನೋದನ್ನು ಸ್ಪಷ್ಟವಾಗಿ ಹೇಳಿಲ್ಲ, ಇದು ಸಿದ್ದರಾಮಯ್ಯಗಾದ್ರು ತಿಳಿಬಾರ್ದಾ ಎಂದರು. ಜನರಿಗೆ ಮೋಸ ಮಾಡಿದ್ದಾರೆ. ಎಲೆಕ್ಷನ್‌ನಲ್ಲಿ ಜನರ ಎದುರು ಸ್ಪಷ್ಟತೆ ನೀಡಿಯೇ ಇಲ್ಲ,  ಮುಚ್ಚಿಟ್ಟು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರ 5 ಕೆ.ಜಿ ಕೊಡುತ್ತೆ ಅಂತಾ ಹೇಳಿದ್ರೆ ಮರ್ಯಾದೆ ಹೋಗ್ತಿತ್ತಾ?? ಎಂದು ಜಿಗಜಿಣಗಿ ಪ್ರಶ್ನಿಸಿದರು..

ನಾವು ಬಡವರಿಗೆ ಅಕ್ಕಿ ಕೊಟ್ಟಿದ್ದೇವೆ: ಮಾಧ್ಯಮಗಳಲ್ಲಿನ ಕಾಂಗ್ರೆಸ್ ನವರ ಹೇಳಿಕೆ ಜನರಿಗೆ ಹೇಸಿಗೆ ತರುವಂತೆ ಆಗಿದೆ. ಇದು ಮಾಡಬಾರದು, ಒಳ್ಳೆಯದಲ್ಲ. ನಮಗೇನು ಬಡವರು ಬೇಡವಾಗಿದ್ದಾರಾ? ಬಡವರು ನಮಗೇನು ಓಟು ಹಾಕಿಲ್ವಾ ಎಂದು ಪ್ರಶ್ನಿಸಿದರು. ನಾವೇನು ಅಕ್ಕಿ ಕೊಟ್ಟಿಲ್ವಾ, ಇವರು ಬಂದು ಮಾತ್ರ ಕೊಡ್ತಾರಾ, ಕೋವಿಡ್‌ಲ್ಲಿ ಪುಕ್ಕಟ್ಟೆಯಾಗಿ ವರ್ಷಗಟ್ಟಲೆ ಕೊಡಲಿಲ್ವಾ, ಅದ್ರಲ್ಲಿ ಬಡವರು ಇರಲಿಲ್ವಾ? ಇವರು ಯಾಕೆ ಹೀಗ್ ಮಾಡ್ತಿದ್ದಾರೆ ಎಂದರು.

Raichur: ಸ್ಮಶಾನ ಜಾಗಕ್ಕಾಗಿ ಚರಂಡಿ ನೀರು ಮೈಮೇಲೆ ಸುರಿ​ದು​ಕೊಂಡ ಮಹಿಳೆ

ಕಾಂಗ್ರೆಸ್ ಗ್ಯಾರಂಟಿ ಕುತಂತ್ರ: ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗದಂತೆ ಹುನ್ನಾರ ನಡೆಸಲಾಗ್ತಿದೆ ಎನ್ನುವ ಆರೋಪಕ್ಕೆ ತಿರುಗೇಟು ಕೊಟ್ಟ ಸಂಸದ ಜಿಗಜಿಣಗಿ ಹುನ್ನಾರ ಯಾರು ನಡೆಸಿಲ್ಲ. ತಮ್ಮಷ್ಟಕ್ಕೇ ತಾವೇ ಹುನ್ನಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದರು. 10 ಕೆ.ಜಿ ಅಕ್ಕಿ ಘೋಷಣೆ ಮಾಡೋವಾಗಲೇ ನಡೆದಿದೆ. 10 ಕೆ.ಜಿ ಅಕ್ಕಿ ಕೊಡೊಕೆ ನಾವೇನು ಬೇಡ ಅಂದಿಲ್ಲ. ನಮ್ಮದು ಸೇರಿ 10 ಕೆ.ಜಿ ಅಂತಾದ್ರು ಹೇಳಲಿ ಎಂದರು. ಇಲ್ಲಾ ನಾವು ಕೊಡೊದು ಬಿಟ್ಟು 10 ಕೆ.ಜಿ ಅಂತಾನಾದ್ರು ಹೇಳಿ, ಜನರಿಗೆ ಕ್ಲಿಯರ್ ಆಗುತ್ತೆ. ಕಣ್ಣಿಗೆ ಮಣ್ಣು ಎರಿಚೊ ಕೆಲಸ ಮಾಡಬೇಡಿ ಎಂದು ಬುದ್ದಿವಾದ ಹೇಳಿದರು. ಕೇಂದ್ರ ನೀಡ್ತಿದ್ದ 5 ಕೆ.ಜಿ ಅಕ್ಕಿ ಮರೆಮಾಚಿದ್ದಾರೆ, ಕೋವಿಡ್‌ಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ರೋಡ್.. ರೋಡ್‌ನಲ್ಲಿ ಹೆಣಗಳು ಬೀಳ್ತಿದ್ವು, ಕೇಂದ್ರ ಮಾಡಿದಷ್ಟು ಸಹಾಯವನ್ನು ಜನ್ಮದಲ್ಲಿ ಯಾರು ಮಾಡೋಕೆ ಸಾಧ್ಯವಿಲ್ಲ ಎಂದರು.

Follow Us:
Download App:
  • android
  • ios