Asianet Suvarna News Asianet Suvarna News

ಸರಿಯಿದೆ ಅಂತಲೇ ಒಳಗಿಂದ ತೂತು ಕೊರೆವುದೇ ರಾಜಕಾರಣ: ಬೊಮ್ಮಾಯಿ

ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಏನೂ ಕೆಲಸಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ. ಇದರಿಂದ ಜನರ ಜತೆಗೆ ಕಾಂಗ್ರೆಸ್ ಶಾಸಕರೇ ಭ್ರಮನಿಸರನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲ ಸೃಷ್ಟಿಯಾಗಿದೆ: ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ 
 

BJP MP Basavaraj Bommai Talks over Politics grg
Author
First Published Sep 4, 2024, 10:30 AM IST | Last Updated Sep 4, 2024, 10:30 AM IST

ಗದಗ(ಸೆ.04):  ಎಲ್ಲವೂ ಸರಿಯಿದೆ ಅಂತಾ ಹೇಳುತ್ತಲೇ ಒಳ ಗಡೆಯಿಂದ ದೋಣಿಗೆತೂತು ಕೊರೆಯುವುದು ರಾಜಕಾರಣ. ಈಗ ಕಾಂಗ್ರೆಸ್‌ನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಸಿದ್ದರಾಮಯ್ಯ ಕುಳಿತಿರುವ ಸಿಎಂ ಖುರ್ಚಿ ಅಲ್ಲಾಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುರ್ಚಿ ಮೇಲೆ ನಾನು ಕೂರಬೇಕೆಂಬ ಆಸೆ ಯನ್ನು ಕಾಂಗ್ರೆಸ್ ನಾಯಕರು ಅದಮಿಟ್ಟುಕೊಂಡಿದ್ದರು. ಅದೀಗ ಹೊರಹೊಮ್ಮುತ್ತಿದೆ. ವಿರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಸಿಎಂ ಆಗಿದ್ದರು ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಅರಸು 2ನೇ ಬಾರಿ ಸ್ವಂತ ಶಕ್ತಿಯಲ್ಲಿ ಆರಿಸಿ ಸಿಎಂ ಆಗಿದ್ದರು. ಆದರೆ ರಾತ್ರೋರಾತ್ರಿ ಬದಲಾಗಿ ಗುಂಡೂರಾವ್ ಸಿಎಂ ಆದರು. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿದ್ದರೂ ಸಿಎಂ ಸ್ಥಾನ ಕಳೆದುಕೊಂಡರು. ಸದ್ಯ ಕಾಂಗ್ರೆಸ್‌ನಲ್ಲಿ ಈ ರಾಜಕಾರಣ ನಡೀಯುತ್ತಿದೆ ಎಂದು ಇತಿಹಾಸವನ್ನು ಕೆದಕಿದರು. 

ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ

ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಏನೂ ಕೆಲಸಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ. ಇದರಿಂದ ಜನರ ಜತೆಗೆ ಕಾಂಗ್ರೆಸ್ ಶಾಸಕರೇ ಭ್ರಮನಿಸರನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲ ಸೃಷ್ಟಿಯಾಗಿದೆ. ಆರ್.ವಿ. ದೇಶಪಾಂಡೆ ಅವರು ಯಾವ ಕಾರಣಕ್ಕಾಗಿ ಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಅವರ ಹೇಳಿಕೆ ಬಳಿಕ ಪಕ್ಷದಲ್ಲಿ ಗೊಂದಲವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ 'ಕೈ' ನಾಯಕರ ಪ್ರತಿಕ್ರಿಯೆ ಸಾಕ್ಷಿ ಎಂದರು. 

ಕಾಂಗ್ರೆಸ್‌ನವರು ಮುಡಾದಲ್ಲಿ ಹಗರಣವಾಗಿಲ್ಲ ಅಂತಾರೆ. ಆದರೆ ಆಗಿನ ಕಮಿಷನ‌ರ್ ಅವರನ್ನು ಹಗರಣದ ಕಾರಣ ಕೊಟ್ಟು ಅಮಾನತ್ತು ಮಾಡಿದ್ದಾರೆ. ಈ ಮೂಲಕ ತಾಂತ್ರಿಕ ಸಮಿತಿ ಮುಡಾದಲ್ಲಿ ತಪ್ಪು ಕಂಡು ಹಿಡಿದಿದೆ ಎನ್ನುವುದು ಸಾಬೀತಾಗಿದ್ದು, ಮುಡಾದಲ್ಲಿ ಎಲ್ಲವೂ ಕಾನೂನು ಬದ್ಧವಾಗಿ ನಡೆದಿಲ್ಲ ಎನ್ನುವುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂ

Latest Videos
Follow Us:
Download App:
  • android
  • ios