ತೊಡಕು ನಿವಾರಣೆ ಸಚಿವಾಕಾಂಕ್ಷಿ ಆರ್.ಶಂಕರ್ ಫುಲ್ ಖುಷ್..!

ಕರ್ನಾಟಕ ಕೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ವಿಶ್ವನಾಥ್‌ಗೆ ಬಿಗ್ ಶಾಕ್ ಅಗಿದ್ರೆ, ಆರ್.ಶಂಕರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಇನ್ನು ಈ ಶಂಕರ್ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

BJP MLC R Shankar Full Happy about Karnataka high Court order rbj

ಹಾವೇರಿ, (ನ.30): ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್‌. ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಇನ್ನು ಆರ್. ಶಂಕರ್, ಎಂಟಿಬಿ ನಾಗರಾಜ್​ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಂವಿಧಾನದಡಿ ಮರು ಆಯ್ಕೆ ಆಗಿರುವುದರಿಂದ ಅನರ್ಹತೆಯಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.

ಕೋರ್ಟ್ ಕೊಟ್ಟಿರುವ ಈ ತೀರ್ಪಿನ ಬಗ್ಗೆ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಪ್ರತಿಕ್ರಿಯಿಸಿದ್ದು,  ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಮಂತ್ರಿಯಾಗಲು ಇದ್ದಂತ ಕಾನೂನು ತೊಡಕು ನಿವಾರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಶ್ವನಾಥ್‌ಗೆ ಬಿಗ್ ಶಾಕ್: ಮಂತ್ರಿಗಿರಿ ಕನಸು ಕಾಣುತ್ತಿದ್ದ ಹಳ್ಳಿಹಕ್ಕಿ ಕನಸಿಗೆ ತಣ್ಣೀರು

 ಎಂಎಲ್ ಸಿ ಗಳಾದಂತ ಆರ್ ಶಂಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ಹೆಚ್ ವಿಶ್ವನಾಥ್ ಸಚಿವ ಸ್ಥಾನ ನೀಡುವ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. 

 ವಿಶ್ವನಾಥ್ ಸೋತು ನಾಮನಿರ್ದೇಶನಗೊಂಡು ಎಂಎಲ್ ಸಿ ಆಗಿದ್ದಾರೆ. ಅವರು ಸಚಿವರಾಗಲು ಅನರ್ಹರು. ಇನ್ನೂ ಎಂಟಿಬಿ ನಾಗರಾಜ್, ಆರ್ ಶಂಕರ್ ಚುನಾವಣೆಯ ಮೂಲಕ ಆಯ್ಕೆಗೊಂಡವರಂತಾಗಿದ್ದು, ಸಚಿವರಾಗಲು ಅರ್ಹರೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದ ಶಂಕರ್ ಹಾಗೂ ಎಂಟಿಬಿಗೆ ಬಿಗ್ ರಿಲೀಫ್ ಸಿಕ್ಕಿದ್ರೆ, ವಿಶ್ವನಾಥ್‌ ಮಂತ್ರಿಗಿರಿ ಆಸೆಗೆ ತಣ್ಣೀರೆರಚಿದಂತಾಗಿದೆ.

Latest Videos
Follow Us:
Download App:
  • android
  • ios