ಶಿಕ್ಷಣ ಖಾತೆ ಸಚಿವರಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂತಹ ಸಚಿವ ಶಿಕ್ಷಣ ಖಾತೆಯ ಮಂತ್ರಿಯಾಗಿರುವುದು ಶೋಚನೀಯ ಎಂದ ವಿಪ ಸದಸ್ಯ ಎನ್. ರವಿಕುಮಾರ್

ಹೊಸಪೇಟೆ(ಮೇ.21): ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಯಾರಾದರೂ ಹೇರ್‌ ಕಟಿಂಗ್ ಮಾಡಿಸಿ, ಸಂಸ್ಕಾರ ಕಲಿಸಬೇಕಿದೆ ಎಂದು ವಿಪ ಸದಸ್ಯ ಎನ್. ರವಿಕುಮಾರ್ ಲೇವಡಿ ಮಾಡಿದರು. 

ನಗರದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಖಾತೆ ಸಚಿವರಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂತಹ ಸಚಿವ ಶಿಕ್ಷಣ ಖಾತೆಯ ಮಂತ್ರಿಯಾಗಿರುವುದು ಶೋಚನೀಯ ಎಂದರು. 

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ಕಾರಣ : ವೈ.ಎ.ನಾರಾಯಣಸ್ವಾಮಿ

ಸಚಿವರು ಉಡಾಫೆ ಮಾತನಾಡುತ್ತಿದ್ದಾರೆ. ಅವರಿಗೆ ಯಾರಾದರೂ ಕಟಿಂಗ್ ಮಾಡಿಸಿ ಸಂಸ್ಕಾರ ಕಲಿಸಬೇಕಿದೆ. ಅವರಿಗೆ ಕನ್ನಡವೇ ಬರುವುದಿಲ್ಲ ಎಂದು ಆರೋಪಿಸಿದರು.