ಬಾಗಲಕೋಟೆ, (ನ.29): ಆರ್‌.ಆರ್.ನಗರ ಹಾಗೂ ಶಿರ ಉಪಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬದಲಾವಣೆ ಮಾಡುವ ಸುದ್ದಿ ಹರಿದಾಡುತ್ತಿದೆ. 

ಹೈಕಮಾಂಡ್ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ಬಿಎಸ್‌ವೈ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಗೆ ಮುಂದಾಗಿದ್ದರು ಎನ್ನಲಾಗಿದೆ.

ನನ್ನ ಹಣೆಬರಹ ಸರಿಯಿಲ್ಲ, ಮಂತ್ರಿಯಾಗಿದ್ದವನು ಮಾಜಿ ಆಗಿದ್ದೇನೆ: ಬಿಜೆಪಿ ನಾಯಕ ಬೇಸರ

ಈ ಬಗ್ಗೆ ರಾಜ್ಯ ನಾಯಕರುಗಳ ಚರ್ಚೆ ನಡೆಸಲು ಡಿಸೆಂಬರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್,  ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಚರ್ಚೆ ಎಲ್ಲೂ ನಡೆದಿಲ್ಲ. ಅವಧಿ ಮುಗಿಯುವವರೆಗೂ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.

ಭಾನುವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶನಿವಾರ ನಾವು ಮಾಡಿದ್ದ ಸಭೆಯಲ್ಲಿ ಏನೂ ವಿಶೇಷ ಇರಲಿಲ್ಲ. ಸರ್ಕಾರದ ವಿಚಾರದ ಪ್ರಸ್ತಾಪ ಅಲ್ಲಿ ನಡೆದಿಲ್ಲ. ನಮ್ಮನ್ನು ಮಂತ್ರಿ ಮಾಡಬೇಕಿತ್ತು. ವಿಳಂಬವಾಗಿದೆ. ಸಂಪುಟ ವಿಸ್ತರಣೆ ವಿಳಂಬ ಆಗಲಿದೆ ಎಂದು ಸಿ.ಎಂ ಯಡಿಯೂರಪ್ಪ ಅವರೇ ಹೇಳಿದ ಮೇಲೆ ಅದೇನಾಗುತ್ತೋ ಅಂತ ನಾವು ಕಾಯಬೇಕು. ಮಂತ್ರಿ ಮಾಡ್ತೇವೆ, ಮಾಡ್ತೇವೆ ಅಂದಿದ್ದಾರೆ. ಕೆಲವೇ ದಿನಗಳಲ್ಲಿ ಆ ಸಂದರ್ಭ ಒದಗಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.