Asianet Suvarna News Asianet Suvarna News

ಎಂಎಲ್‌ಎ ಸೋತ್ರು ಹೊಸಕೋಟೆಯಲ್ಲಿ ಕಮಲ ಅರಳಿಸಿದ ಎಂಟಿಬಿ ನಾಗರಾಜ್

 ಕಳೆದ ವಿಧಾನಸಬಾ ಉಪಚುನಾವಣೆಯಲ್ಲಿ ಸೋಲುಕಂಡಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರ ವರ್ಚಸ್ಸು ಮಾತ್ರ ಕುಗ್ಗಿಲ್ಲ.

BJP MLC MTB Nagaraj followers Wins In Hoskote municipality President Poll rbj
Author
Bengaluru, First Published Oct 29, 2020, 3:53 PM IST

ಹೊಸಕೋಟೆ, (ಅ.29): ಉಪಚುನಾವಣೆಯಲ್ಲಿ ಸೋತರು ಸಹ ಎಂಟಿಬಿ ನಾಗರಾಜ್‌ ಅವರ ಹವಾ ಹೊಸಕೋಟೆ ಕ್ಷೇತ್ರದಲ್ಲಿ ಕಮ್ಮಿಯಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಹೊಸಕೋಟೆ ನಗರಸಭಾ ಅಧ್ಯಕ್ಷ ಚುನಾವಣೆಯಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ.

ಹೌದು..ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರ ವರ್ಚಸ್ಸು ಮಾತ್ರ ಕುಗ್ಗಿಲ್ಲ. ಯಾಕಂದ್ರೆ  ಹೊಸಕೋಟೆ  ನಗರಸಭಾ ಬಿಜೆಪಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹಾಲಿ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಹಾಗೂ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ: ಕಂಗೊಳಿಸಿದ ಫೆರಾರಿ, ರೋಲ್ಸ್ ರಾಯ್ಸ್

ಭಾರತೀಯ ಜನತಾ ಪಕ್ಷದ(BJP)ವತಿಯಿಂದ ನೂತನ ಹೊಸಕೋಟೆ  ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್ (ಹರಿ) ಹಾಗು ಉಪಾಧ್ಯಕ್ಷರಾದ ಶೋಭಾ ಜುಂಜಪ್ಪ  ನವರನ್ನು ಎಂಟಿಬಿ ನಾಗರಾಜಣ್ಣ  ಅಭಿನಂದಿಸಿದರು.

ಭಾರತೀಯ ಜನತಾ ಪಕ್ಷದ(BJP)ವತಿಯಿಂದ ನೂತನ ಹೊಸಕೋಟೆ ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್ (ಹರಿ) ಹಾಗು ಉಪಾಧ್ಯಕ್ಷರಾದ ಶೋಭಾ ಜುಂಜಪ್ಪ ನವರನ್ನು ಎಂಟಿಬಿ ನಾಗರಾಜಣ್ಣ ಅಭಿನಂದಿಸಿದರು.

Posted by MTB Nagaraj Hoskote on Thursday, October 29, 2020

ಇದರೊಂದಿಗೆ ಹೊಸಕೋಟೆ ಕ್ಷೇತ್ರ ಇನ್ನು ತಮ್ಮ ಹಿಡಿತದಲ್ಲಿದೆ ಎಂದು ಎಂಟಿಬಿ ನಾಗರಾಜ್ ಸಾಬೀತು ಮಾಡಿದ್ದಾರೆ. ಈ ಮೊದಲು 2018 ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಎಂಟಿಬಿ, ಬಳಿಕ ನಡೆದ ರಾಜಕೀಯ ಬದಲಾವಣೆಯಿಂದಾಗಿ ಬಿಜೆಪಿ ಸೇರ್ಪಡೆಯಾಗಿದ್ದರು.

ಈ ಹಿನ್ನೆಯಲ್ಲಿ ಶಾಸಕ ಸ್ಥಾನದಿಮದ ಅನರ್ಹಗೊಂಡು ಬಳಿಕ ಉಪಚುನಾವಣೆ ಅಖಾಡಕ್ಕಿಳಿದ್ದರು. ಆದ್ರೆ, ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಬಮಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಂಸದ ಬಿ.ಎನ್. ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು ಗೆಲುವು ಸಾಧಿಸಿದ್ದರು.

ಬಳಿಕ ಹೊಸಕೋಟೆ ಕ್ಷೇತ್ರ ಎಂಟಿಬಿ ನಾಗರಾಜ್ ಅವರಿಂದ ಕೈತಪ್ಪಿದ್ದು, ಮುಂದಿನ ದಿನಗಳಲ್ಲಿ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್‌ನಿಂದ ಅಖಾಡಳ್ಳಿಸಲು ಕೈ ನಾಯಕರು ತಂತ್ರ ರೂಪಿಸಿದ್ದಾರೆ. ಆದ್ರೆ, ಇದೀಗ ಎಂಟಿಬಿ ಕ್ಷೇತ್ರದಲ್ಲಿ ಹಂತ-ಹಂತವಾಗಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

Follow Us:
Download App:
  • android
  • ios