ಇನ್ನೊಂದು ಬೇರೆ ಪಕ್ಷ ಇದ್ದಿದ್ದರೆ ಅದಕ್ಕೂ ಎಚ್.ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಎಂಎಲ್‌ಸಿ ವಿಶ್ವನಾಥ್ ತಿರುಗೇಟು ಕೊಟ್ಟಿದ್ದಾರೆ.
ಮೈಸೂರು, (ಫೆ.01): ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಮತ್ತೆ ಆರೋಪ-ಪ್ರತ್ಯಾರೋಪ ಶುರುವಾಗಿದೆ.
ಹೌದು...ಇನ್ನೊಂದು ಬೇರೆ ಪಕ್ಷ ಇದ್ದಿದ್ದರೆ ಅದಕ್ಕೂ ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಕುಮಾರಸ್ವಾಮಿ ಹಳ್ಳಿಹಕ್ಕಿ ತಿರುಗಿಬಿದ್ದಿದೆ.
ಈ ಬಗ್ಗೆ ಇಂದು (ಸೋಮವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಕುಮಾರಸ್ವಾಮಿ ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ. ನಿನ್ನೆ ಸಿದ್ದರಾಮಯ್ಯ ಕೂಡಾ ಜೆಡಿಎಸ್ ಪಕ್ಷ, ಪಕ್ಷವೇ ಅಲ್ಲ ಎಂದು ಹೇಳಿದ್ದಾರೆ. ಇದಕ್ಕಿಂತ ಬೇರೇನಿದೆ? ಎಂದು ತಿರುಗೇಟು ನೀಡಿದರು.
'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'?
ಅಖಿಲ ನಾಮಧಾರಿಗೌಡ ಜನಾಂಗವನ್ನು ಪ್ರವರ್ಗ 2ಎ ಯಿಂದ 94 ರಲ್ಲಿ ತೆಗೆಸಿದ್ದು ನಾನೇ ಎಂದು ಕೆ.ಆರ್. ನಗರ ತಾಲ್ಲೂಕಿನ ಎಲ್ಲಾ ನಾಮಧಾರಿಗೌಡ ಸಭೆಗಳಲ್ಲಿ ಆರೋಪ ಮಾಡುತ್ತಿದ್ದಾರೆ. 26 ವರ್ಷದ ಹಿಂದೆ ನಿಮ್ಮ ದೇವೇಗೌಡರೇ ಪ್ರಧಾನಿಯಾಗಿದ್ದರು. ನಿಮ್ಮ ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿ ಆದವರು. ಏಕೆ 2ಎ ಮಾಡಲಿಲ್ಲ? ವೋಟ್ ಬ್ಯಾಂಕ್ ಗೋಸ್ಕರ ಏನು ಬೇಕಾದರೂ ಹೇಳಬಹುದು ಎಂದು ಕಿಡಿಕಾರಿದರು.
ಸತ್ಯ ಎಲ್ಲರಿಗೂ ತಿಳಿದಿದೆ. ಅಖಿಲ ನಾಮಧಾರಿಗೌಡ ಜನಾಂಗವನ್ನು ಪ್ರವರ್ಗ 2 ಎ ಗೆ ಸೇರಿಸಲು ಕಾನೂನಿನ ತೊಡಕಿದೆ. ಈಗಲೂ ಹೇಳುತ್ತೇನೆ ಅರ್ಜಿ ಹಾಕಿ ಹೋರಾಟ ಮಾಡಿ ಎಂದು ವಿಶ್ವನಾಥ್ ಸಲಹೆ ನೀಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 1, 2021, 3:14 PM IST