ಪುಣ್ಯ ಜ್ಯಾಸ್ತಿಯಾಗಿ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದೀರಾ?: ಸಿ.ಟಿ.ರವಿ
ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದು ದಲಿತ ಸಮುದಾಯದ ವ್ಯಕ್ತಿ ಜಮೀನನ್ನೇ ಅಕ್ರಮವಾಗಿ ಬರೆಸಿಕೊಂಡಿದ್ದೀರಲ್ಲ. ಆದರೂ ಕಳಂಕ ರಹಿತವಾಗಿ ರಾಜಕಾರಣ ಮಾಡಿದ್ದೇನೆ ಎನ್ನುತ್ತಿರಲ್ಲ ಎಂದು ಹರಿಹಾಯ್ದ ಮಾಜಿ ಸಚಿವ ಸಿ.ಟಿ.ರವಿ
ಶ್ರೀರಂಗಪಟ್ಟಣ(ಆ.09): ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಕಲಿ ಖಾತೆಗೆ ಹಣ ವರ್ಗಾವಾಗಿದೆ. ನಿಮ್ಮ ಆಡತಕ್ಕೆ ಕಳಂಕವಲ್ಲವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಪಾದಯಾತ್ರೆ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದು ದಲಿತ ಸಮುದಾಯದ ವ್ಯಕ್ತಿ ಜಮೀನನ್ನೇ ಅಕ್ರಮವಾಗಿ ಬರೆಸಿಕೊಂಡಿದ್ದೀರಲ್ಲ. ಆದರೂ ಕಳಂಕ ರಹಿತವಾಗಿ ರಾಜಕಾರಣ ಮಾಡಿದ್ದೇನೆ ಎನ್ನುತ್ತಿರಲ್ಲ ಎಂದು ಹರಿಹಾಯ್ದರು.
ಬಿಜೆಪಿ, ಎನ್‌ಡಿಎಗೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ಸಿದ್ದರಾಮಯ್ಯ
ತಮ್ಮ ಚುನಾವಣಾ ಘೋಷಣಾ ಪತ್ರದಲ್ಲಿ 2018ರಲ್ಲಿ 22 ಲಕ್ಷ, 2023ರಲ್ಲಿ 8 ಕೋಟಿ, ಈಗ 60 ಕೋಟಿ ಹೇಳುತ್ತಿದ್ದೀರಾ, ನಮ್ಮ ಅಭಿವೃದ್ಧಿಯಲ್ಲಿ ಕಪ್ಪುಚುಕ್ಕಿ ಇಲ್ಲ ಎನ್ನುತ್ತೀರಲ್ಲ. ರೀಡೂ ಪಿತಾಮಹಾ ಯಾರು? ಅರ್ಕಾವತಿ ಹೆಸರಿನಲ್ಲಿ 880 ಎಕರೆ ಡಿನೋಟಿಫಿಕೇಷನ್ ಮಾಡಿ 1 ಎಕರೆಗೆ 1760 ಕೋಟಿಗೂ ಹೆಚ್ಚು ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ಪಾಪಪ್ರಾಯಶ್ಚಿತ್ತಕ್ಕಾಗಿ ಬಿಜೆಪಿ, ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪುಣ್ಯ ಮಾಡಿದ್ದವರು ಎಂದರ್ಥ! ಆದರೆ, ಅವರು ಸ್ವರ್ಗಕ್ಕೆ ಹೋಗಬೇಕಿತ್ತು. ಆದರೆ, ತಿಹಾರ್ ಜೈಲಿಗೆ ಏಕೆ ಹೋಗಿದ್ದರು. ಪುಣ್ಯ ಜ್ಯಾಸ್ತಿಯಾಗಿ ತಿಹಾರ್ ಜೈಲಿಗೆ ಹೋಗಿದ್ದೀರಾ? ಎಂದು ಲೇವಡಿ ಮಾಡಿದರು.
ಈ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಅನ್ನದಾತನಿಗೂ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.