ಜನರ ಪಾಲಿಗೆ ಭಸ್ಮಾಸುರವಾದ ಕಾಂಗ್ರೆಸ್: ಸಿ.ಟಿ. ರವಿ ವಾಗ್ದಾಳಿ
ಹಿಂದೂ ನಾಶವಾಗಿದ್ದ ದಿನ ದೇಶದಲ್ಲಿ ಸಂವಿಧಾನ ಇರಲ್ಲ. ಸಂವಿಧಾನ, ದೇಶ, ಭಾರತ, ದೇವಸ್ಥಾನ, ಜಮೀನು, ವಿಧಾನಸೌಧ, ಸಂಸತ್ತು ಉಳಿಬೇಕು ಅಂದ್ರು ಹಿಂದುತ್ವ ಬೇಕು ಎಂದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ
ಚಿಕ್ಕಮಗಳೂರು(ನ.10): ಜನರಿಂದ ವರ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಪಾಲಿಗೆ ಭಸ್ಮಾಸುರವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಭಸ್ಮಾಸುರನಿಗೆ ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಸಚಿವ ಜಮೀರ್ ಅಹಮದ್ ಓರ್ವ ನಿಮಿತ್ತ ಅಷ್ಟೆ ವಕ್ಫ್ ಬೋರ್ಡಿಗೆ ಪರಮಾಧಿಕಾರ ಸಿಕ್ಕಿದ್ದೇ ನಾವು ಕಾಂಗ್ರೆಸ್ಸಿಗೆ ಮತ ಕೊಟ್ಟಿದ್ದಕ್ಕೆ. ಶಿವನ ರೂಪಿಯಾಗಿ ವರ ಕೊಟ್ಟೋರು ಜನ. ವರ ಪಡೆದು ಶಿವನ ತಲೆ ಮೇಲೆ ಕೈ ಇಡಲು ಬಂದಿರೋದು ಕಾಂಗ್ರೆಸ್. ಇದಕ್ಕೆ ಹಿಂದೂ ಸಂಘಟನೆ ಅಷ್ಟೆ ಉತ್ತರ ಅಸ್ಪೃಶ್ಯತೆ, ಜಾತಿಯತೆ ನಾಶ ಎಲ್ಲದಕ್ಕೂ ಹಿಂದುತ್ವವೇ ಉತ್ತರ. ಹಿಂದೂ ಇಲ್ಲದಿದ್ರೆ ರಾಷ್ಟ್ರ ಉಳಿಯಲ್ಲ, ಶರಿಯಾದಿಂದ ಸಂವಿಧಾನ ಉಳಿಯಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು: ಕಾಫಿತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಸಾವು
ಹಿಂದೂ ನಾಶವಾಗಿದ್ದ ದಿನ ದೇಶದಲ್ಲಿ ಸಂವಿಧಾನ ಇರಲ್ಲ. ಸಂವಿಧಾನ, ದೇಶ, ಭಾರತ, ದೇವಸ್ಥಾನ, ಜಮೀನು, ವಿಧಾನಸೌಧ, ಸಂಸತ್ತು ಉಳಿಬೇಕು ಅಂದ್ರು ಹಿಂದುತ್ವ ಬೇಕು ಎಂದಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಬಾರ್ ಮಾಲೀಕರು ಸಿಎಂ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿಗಳು ಸೀಡ್ ಲೆಸ್ ಆಗಿದ್ದಾರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಮೇಲೆ ಭ್ರಷ್ಟಾಚಾರದ ಆರೋಪ ಇದೆ, ಅವರೇ ಲೋಕಾಯುಕ್ತ ತನಿಖೆಯ ಎ1 ಇದ್ದಾರೆ. ಮೊದಲು ಅವರು ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಲಿ. ಪ್ರತಿಯೊಂದು ವಕ್ಫ್ ಆಸ್ತಿ ಪರಿಶೀಲನೆ ಆಗಬೇಕು. ದಾನ ಕೊಟ್ರೆ ಯಾರು, ಯಾವಾಗ ಕೊಟ್ರು?. ರಿಜಿಸ್ಟರ್ ಆಗಿ ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಹುಡುಕಿದ್ರೆ 40 ಸಾವಿರ ಅಲ್ಲ, 4 ಆಸ್ತಿಯೂ ಸಿಗಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.