ಕಾಂಗ್ರೆಸ್ ಮುಳುಗುವ ಹಡಗು: ಚಿಂಚನಸೂರ್
ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಶಿಂಧೆ, ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಕೈ ತೊರೆದರು. ಮುಂದೆ ಕಾಂಗ್ರೆಸ್ ಪಾರ್ಟಿ ರಾಹುಲ್ ಗಾಂಧಿ-ಸೋನಿಯಾ ಗಾಂಧಿಯ ತಾಯಿ-ಮಗನ ಪಕ್ಷವಾಗುತ್ತದೆ: ಬಾಬುರಾವ್ ಚಿಂಚನಸೂರು
ಯಾದಗಿರಿ(ಡಿ.14): ಕಾಂಗ್ರೆಸ್ ಪಕ್ಷ ಮುಳುಗುವ ಹಡಗಿನಂತಾಗಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮ್ಯೂಸಿಯಂನಲ್ಲಿ ಇಡಬೇಕಾಗುತ್ತದೆ ಎಂದು ಮಾಜಿ ಸಚಿವ, ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ. ಯಾದಗಿರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಶಿಂಧೆ, ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಕೈ ತೊರೆದರು. ಮುಂದೆ ಕಾಂಗ್ರೆಸ್ ಪಾರ್ಟಿ ರಾಹುಲ್ ಗಾಂಧಿ-ಸೋನಿಯಾ ಗಾಂಧಿಯ ತಾಯಿ-ಮಗನ ಪಕ್ಷವಾಗುತ್ತದೆ ಎಂದರು
ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥವುಳ್ಳ ರಾಜಕಾರಣಿ. ತನ್ನ ಮಗನ ಪ್ರೀತಿಗಾಗಿ ನನ್ನ ಮಂತ್ರಿಯಿಂದ ತೆಗೆದು ಹಾಕಿ ಪ್ರಿಯಾಂಕ ಖರ್ಗೆ ಅವರನ್ನು ಮಂತ್ರಿ ಮಾಡಿದರು. ಪ್ರಿಯಾಂಕ ಖರ್ಗೆಗೆ ಮಂತ್ರಿ ಮಾಡಿದರೆ ನಾವು ಸುಮ್ಮನೆ ಇರೋಕೆ ಆಗ್ತಾದಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದರು.
Koppal: ಗಂಗಾವತಿಯಲ್ಲಿ ನೂತನ ಮನೆ ಗೃಹ ಪ್ರವೇಶ ಮಾಡಿದ ಜನಾರ್ಧನ ರೆಡ್ಡಿ: ಪತ್ನಿ ಅರುಣಾ ಲಕ್ಷ್ಮೀ ಹೇಳಿದ್ದೇನು?
ಖರ್ಗೆ ಅವರು ಗುರಮಠಕಲ್ ಕ್ಷೇತ್ರದಿಂದ ಗೆದ್ದು 50 ವರ್ಷ ರಾಜಕೀಯ ಮಾಡಿ ಪ್ರಭಾವಿ ನಾಯಕರಾದರು. ಕೋಲಿ ಸಮಾಜದ ಎಸ್ಟಿಗಾಗಿ ಖರ್ಗೆ ಪ್ರಯತ್ನ ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಆಗ ಕೇಂದ್ರ ಸಚಿವರಿದ್ದರು. ಪರಿಶಿಷ್ಟಪಂಗಡದ ಸಚಿವರೊಂದಿಗೆ ಮಾತನಾಡಿ, ಕೇವಲ 5 ನಿಮಿಷದಲ್ಲಿ ಕೋಲಿ ಸಮಾಜವನ್ನು ಎಸ್ಟಿಸೇರಿಸಬಹುದಿತ್ತು. ಆದರೆ, ಕೋಲಿ ಸಮಾಜಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಅನ್ಯಾಯ ಮಾಡಿದರು. ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯದಿಂದ ಇವತ್ತು ನಾನು ಬಿಜೆಪಿ ಸೇರಿದ್ದೇನೆ. ಈಗ ಎಸ್ಟಿಪೈಲ್ ಕೇಂದ್ರ ಸಚಿವ ಮುಂಡಾ ಬಳಿ ಇದೆ. ತಳವಾರ-ಪರಿವಾರ ಸಮಾಜಕ್ಕೆ ಬಿಜೆಪಿ ಸರ್ಕಾರ ಎಸ್ಟಿಗೆ ಸೇರಿಸಿದೆ ಎಂದರು. ಮುಂಬರುವ ಚುನಾವಣೆಗೆ ನಾನು ಗುರುಮಠಕಲ್ ಮತಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯುತ್ತೇನೆ. ಮತದಾರರ ಬೆಂಬಲದಿಂದ ಮತ್ತೆ ಶಾಸಕರಾಗಿ ಆಯ್ಕೆಯಾಗಿ, ಮಂತ್ರಿಯಾಗುತ್ತೇನೆ ಎಂದರು.