* ಬೊಮ್ಮಾಯಿ ಸಿಎಂ ಆಯ್ಕೆ ವೆಲ್ಕಮ್ ಮಾಡಿದ ಮಿತ್ರ‌ಮಂಡಳಿ ಶಾಸಕರು..* ಸುವರ್ಣ ನ್ಯೂಸ್ ಗೆ ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್ ಹೇಳಿಕೆ..* ಬಸವರಾಜ್ ಬೊಮ್ಮಾಯಿ ಅವರ ಆಯ್ಕೆಯನ್ನ ನಾವೆಲ್ಲ ಸ್ವಾಗತಿಸುತ್ತೇವೆ* ಯಡಿಯೂರಪ್ಪ ಅವರೇ ಬಸವರಾಜ್ ಬೊಮ್ಮಾಯಿ ಹೆಸರು ಸೂಚಿಸುದ್ದು ಸಂತೋಷ ಆಯ್ತು..

ಬೆಂಗಳೂರು(ಜು. 27) ಬಸವರಾಜ ಬೊಮ್ಮಾಯಿ ಸಿಎಂ ಆಯ್ಕೆಯಾಗಿರುವುದನ್ನು ಮಿತ್ರಮಂಡಳಿ ಶಾಸಕರು ಸ್ವಾಗತ ಮಾಡಿದ್ದಾರೆ. ಸುವರ್ಣ ನ್ಯೂಸ್ ಗೆ ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರ ಆಯ್ಕೆಯನ್ನ ನಾವೆಲ್ಲ ಸ್ವಾಗತಿಸುತ್ತೇವೆ. ಯಡಿಯೂರಪ್ಪ ಅವರೇ ಬಸವರಾಜ್ ಬೊಮ್ಮಾಯಿ ಹೆಸರು ಸೂಚಿಸುದ್ದು ಸಂತೋಷವಾಯಿತು. ನಮ್ಮ ಹಾವೇರಿ ಜಿಲ್ಲೆಗೆ ಸಿಎಂ ಸ್ಥಾನ ಸಿಕ್ಕಿದೆ ಎಂದು ಬಿಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಕಿರು ಪರಿಚಯ

ನಮಗೆ ನೀಡಿದ ಮಾತನ್ನ ಉಳಿಸಿಕೊಂಡು ಹೋಗುವ ವಿಶ್ವಾಸ ನಮಗಿದೆ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.