'ಯತ್ನಾಳ್ ಬಾಯಿಗೆ ಬೀಗ ಹಾಕಿ'  ಸಿಎಂ ಮನೆಗೆ ಶಾಸಕರ ತಂಡ.. ಸಚಿವರ ಮೇಲೂ ದೂರು

ಯತ್ನಾಳ್ ವಿರುದ್ದ ಬಿಜೆಪಿ ಶಾಸಕರ ದೂರು/ ಸಿಎಂ ಭೇಟಿಯಾಗಿ ದೂರು ನೀಡಿದ ಬಿಜೆಪಿ ಶಾಸಕರು/ ಸಿಎಂ ಕಾವೇರಿ ನಿವಾಸದಲ್ಲಿ ಬಿಎಸ್ ವೈ ಭೇಟಿಯಾಗಿ ದೂರು ನೀಡಿದ ಬಿಜೆಪಿ ಶಾಸಕರು/ 30 ಕ್ಕೂ ಹೆಚ್ಚು ಬಿಜೆಪಿ ಶಾಸಕರಿಂದ ಯತ್ನಾಳ್ ವಿರುದ್ಧ ದೂರು/ ಯತ್ನಾಳ್ ಹೇಳಿಕೆಗಳು ಪಕ್ಷಕ್ಕೆ ಭಾರಿ ಮುಜುಗರ ತರುತ್ತಿದೆ/ ನಮ್ಮ ಸರ್ಕಾರ ಅಧಿಕಾರದಲ್ಲಿದ್ದರೂ ನಮ್ಮ ಸಚಿವರೇ ನಮ್ಮ ಮಾತು ಕೇಳುತ್ತಿಲ್ಲ

BJP MLAs team meets CM BS Yediyurappa mah

ಬೆಂಗಳೂರು(ಮಾ. 22) ಕ್ಷಿಪ್ರ ರಾಜಕೀಯ ಬೆಳವಣಿಗೆಯಾಗಿದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಶಾಸಕರು ದೂರು ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಬಿಎಸ್ ಯಡಿಯೂರಪ್ಪ  ಭೇಟಿಯಾಗಿ ಬಿಜೆಪಿ ಶಾಸಕರು ದೂರು ನೀಡಿದ್ದಾರೆ. ಸಿಎಂ ಕಾವೇರಿ ನಿವಾಸದಲ್ಲಿ ಬಿಎಸ್ ವೈ ಭೇಟಿಯಾಗಿ ದೂರು ನೀಡಿಡಿದ್ದಾರೆ. 30 ಕ್ಕೂ ಹೆಚ್ಚು ಬಿಜೆಪಿ ಶಾಸಕರಿಂದ ಯತ್ನಾಳ್ ವಿರುದ್ಧ ದೂರು ಸಲ್ಲಿಕೆಯಾಗಿದೆ.

ಯತ್ನಾಳ್ ಹೇಳಿಕೆಗಳು ಪಕ್ಷಕ್ಕೆ ಭಾರೀ ಮುಜುಗರ ತರುತ್ತಿವೆ. ಮುಂದೆ ತಾತೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿವೆ. ಅಲ್ಲದೇ ಉಪಚುನಾವಣೆಯನ್ನ ಎದರಿಸುತ್ತಿದ್ದೇವೆ. ಇಂಥಹ ಸಮಯದಲ್ಲಿ ಯತ್ನಾಳ್ ಬಾಯಿಗೆ ಬಂದ ಹಾಗೇ ಮಾತಮಾಡುತ್ತಿದ್ದಾರೆ. ಇದಕ್ಕೆ ನೀವು ಕಡಿವಾಣ ಹಾಕಲೇಬೇಕು  ಎಂದು ಶಾಸಕರು ಒತ್ತಾಯ ಮಾಡಿದ್ದಾರೆ.

ರಾಸಲೀಲೆ ವಿಡಿಯೋಕ್ಕೆ ಕಾರಣ ಹೇಳಿದ ಕುಮಾರಸ್ವಾಮಿ

ಇದಲ್ಲದೇ ಕೆಲ ಸಚಿವರುಗಳ ವಿರುದ್ಧವೂ ಬಿಜೆಪಿ ಶಾಸಕರು ದೂರು ನೀಡಿದ್ದಾರೆ ಎನ್ನಲಾಗಿದೆ. ಕೆಲ ಸಚಿವರು ನಮ್ಮ ಮಾತುಗಳನ್ನ ಕೇಳುತ್ತಿಲ್ಲ ಎಂದು ಸಿಎಂ ಬಳಿ ದೂರು ಹೇಳಿಕೊಂಡಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದರು ನಮ್ಮ ಸಚಿವರೇ ನಮ್ಮ ಮಾತು ಕೇಳುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಸಿಎಂ ಭೇಟಿ ನಂತರ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮಾತನಾಡಿದ್ದಾರೆ. ಮಾನ್ಯ ಮುಖ್ಯ ಮಂತ್ರಿಗಳನ್ನ 40 ಕ್ಕೂ ಹೆಚ್ಚು ಶಾಸಕರು ಭೇಟಿ ಮಾಡಿದ್ದೇವೆ. ನಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು. 25ಕ್ಕೆ ಚರ್ಚೆಯನ್ನ ಮುಂದೂಡಲಾಗಿದೆ. ನಮ್ಮ ಕ್ಷೇತ್ರಗಳ ಅಭಿವೃದ್ದಿ ಕೆಲಸಗಳ ಬಗ್ಗೆ ಸಿಎಂ ಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಳು ಪ್ರಾರಂಭವಾಗಲಿವೆ ಆಗ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.

ಯತ್ನಾಳ್ ಬಗ್ಗೆ ನಾನೇನು ಹೇಳೋದಿಲ್ಲ. ಮಾನ್ಯ ಮುಖ್ಯ ಮಂತ್ರಿಗಳ ಬಗ್ಗೆ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ? ಇದನ್ನ ನಾವು ವರಿಷ್ಠರ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು. 

 

 

Latest Videos
Follow Us:
Download App:
  • android
  • ios