ಸಿದ್ದರಾಮಯ್ಯಗೆ ಅರುಳು ಮರುಳು ಶುರು: ವೇದವ್ಯಾಸ ಕಾಮತ್
ಕಳೆದ ಕೆಲ ದಿನಗಳ ಹಿಂದೆ ಉಗ್ರ ಚಟುವಟಿಕೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ಪುತ್ರನನ್ನು ಬಂಧಿಸಿರುವ ವಿಚಾರದಲ್ಲಿ ತಮ್ಮ ನಿಲುವು ಏನೆಂಬುದನ್ನು ಜನತೆಯ ಮುಂದಿಡಲಿ ಎಂದು ಆಗ್ರಹಿಸಿದ ಶಾಸಕ ವೇದವ್ಯಾಸ ಕಾಮತ್
ಮಂಗಳೂರು(ಜ.08): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಯೋ ಸಹಜ ಅರುಳು ಮರುಳು ಪ್ರಾರಂಭವಾಗಿದೆ. ಹಾಗಾಗಿ ಅವರು ರಾಷ್ಟ್ರೀಯವಾದ ಮತ್ತು ಉಗ್ರವಾದದ ನಡುವಿನ ಸಾಮ್ಯತೆ ತಿಳಿಯುತ್ತಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಪದೇ ಪದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅವಮಾನಕರವಾಗಿ ಹೇಳಿಕೆ ನೀಡುವ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಶಾಸಕ ವೇದವ್ಯಾಸ ಕಾಮತ್, ಇತ್ತೀಚೆಗೆ ಉಗ್ರರ ಸಂಪರ್ಕವಿರುವ ಕಾರಣ ಕಾಂಗ್ರೆಸ್ ಮುಖಂಡನ ಪುತ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ ಬಗ್ಗೆ ಮಾತನಾಡುವ ಧೈರ್ಯ ಸಿದ್ದರಾಮಯ್ಯ ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೇಕಾಬಿಟ್ಟಿ ರಸ್ತೆ ಅಗೆದ್ರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ: ಶಾಸಕ ಭರತ್ ಶೆಟ್ಟಿ ಎಚ್ಚರಿಕೆ..!
ಆರ್‌ಎಸ್‌ಎಸ್ ಸಹಸರಸಂಘ ಚಾಲಕರಾಗಿದ್ದ ಗುರೂಜಿ ಅವರು ಮರಣ ಹೊಂದಿದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಪಕ್ಷಾಂತರಿ ಸಿದ್ದರಾಮಯ್ಯ ಮರೆತಿದ್ದಾರೆ. ಇಂಡೋ-ಚೈನಾ ಯುದ್ಧದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಸೈನಿಕರ ಜೊತೆಗಿದ್ದು ಸಹಕಾರ ನೀಡಿದ್ದಾರೆ. ಅದಕ್ಕಾಗಿಯೇ ಅಂದಿನ ಪ್ರಧಾನಿ ರಾಜಪಥದಲ್ಲಿ ಸಂಘದ ಪಥ ಸಂಚಲನಕ್ಕೆ ಅವಕಾಶ ನೀಡಿರುವುದು ಎನ್ನುವುದನ್ನು ಅರಿತುಕೊಳ್ಳಲಿ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಉಗ್ರ ಚಟುವಟಿಕೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ಪುತ್ರನನ್ನು ಬಂಧಿಸಿರುವ ವಿಚಾರದಲ್ಲಿ ತಮ್ಮ ನಿಲುವು ಏನೆಂಬುದನ್ನು ಜನತೆಯ ಮುಂದಿಡಲಿ ಎಂದು ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.