ನಿಗಮ ಮಂಡಳಿ ಗಿಫ್ಟ್: ಸಿಎಂ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕ....!

 ಬಿಎಸ್ ಯಡಿಯೂರಪ್ಪ ಅವರು 24 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಶಾಸಕರನ್ನು ಓಲೈಸುವ ಯತ್ನಿಸಿದ್ದಾರೆ. ಆದ್ರೆ, ರಾಜ್ಯ ಬಿಜೆಪಿಯಲ್ಲಿ ನಿಗಮ-ಮಂಡಳಿಯ ಅಧ್ಯಕ್ಷರ ನೇಮಕಾತಿ ಬೆನ್ನಲ್ಲೇ ಭಿನ್ನಮತ ಸ್ಪೋಟಗೊಂಡಿದೆ.

BJP MLA Thippareddy unhappy On CM BSY Over appointed chairperson of boards and corporations

ಚಿತ್ರದುರ್ಗ, (ಜುಲೈ.27): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಖುಷಿಯಲ್ಲಿ ಸಿಎಂ ಪಕ್ಷದ ಶಾಸಕರುಗಳಿಗೆ ನಿಗಮ ಮಂಡಳಿ ಗಿಫ್ಟ್ ಕೊಟ್ಟಿದ್ದೇ ತಡ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ.

"

ಹೌದು... ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಸೋಮವಾರ) ರಾಜ್ಯದ ಭಿನ್ನಮತೀಯ ಶಾಸಕರನ್ನು ಓಲೈಸುವ ಸಂಬಂಧ 24 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಈ ಮೂಲಕ ಭಿನ್ನಮತ ಶಮನದ ತಂತ್ರಗಾರಿಕೆ ಅನುಸರಿಸಿದ್ದರು.  ಆದ್ರೆ, ನಿಗಮ ಮಂಡಳಿ ತಂತ್ರಗಾರಿಕೆ ವರ್ಕ್ ಔಟ್ ಆದಂತೆ ಕಾಣಿಸುತ್ತಿಲ್ಲ. 

ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್‌ ನೀಡಿದ ಸಿಎಂ ಯಡಿಯೂರಪ್ಪ

ಸಿಎಂ ವಿರುದ್ಧ ಶಾಸಕ ತಿಪ್ಪಾರೆಡ್ಡಿ ಗರಂ
ಹೌದು...ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ನಿಗಮ ಕೊಟ್ಟಿರುವುದಕ್ಕೆ  ಚಿತ್ರದುರ್ಗ ಬಿಜೆಪಿ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. 1998ರಲ್ಲಿಯೇ ಹೌಸಿಂಗ್ ಬೋರ್ಡ್ ಅಧ್ಯಕ್ಷನಾಗಿದ್ದೆ. ಸಚಿವಸ್ಥಾನದ ಆಕಾಂಕ್ಷಿಯಾದಂತ ನನಗೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದ್ದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1998ರಲ್ಲಿಯೇ ಹೌಸಿಂಗ್ ಬೋರ್ಡ್ ಅಧ್ಯಕ್ಷರಾದಂತ ನನಗೆ, ಇದೀಗ ದಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಸಮಾಧಾನ ತಂದಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಂತ ನನಗೆ ನಿಗಮ-ಮಂಡಳಿ ಸ್ಥಾನ ನೀಡಿದ್ದು ನೋವಾಗಿದೆ. 40 ವರ್ಷದ ರಾಜಕಾರಣದಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಈಗ ಯಾಕ್ ರಾಜಕೀಯಕ್ಕೆ ಬಂದೆನೋ ಎನಿಸುತ್ತಿದೆ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಗರಂ ಆಗಿದ್ದಾರೆ.

Latest Videos
Follow Us:
Download App:
  • android
  • ios